More

    ಈ ಸ್ಟೈಲಿಶ್​ ಬೈಕನ್ನು ಒಂದು ಸಲ ಚಾರ್ಜ್​ ಮಾಡಿ 300ಕ್ಕೂ ಹೆಚ್ಚು ಕಿಲೋಮೀಟರ್​ ದೂರ ಪ್ರಯಾಣಿಸಬಹುದು!

    ನವದೆಹಲಿ: ಇತ್ತೀಚೆಗೆ ಭಾರತೀಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳ ಟ್ರೆಂಡ್ ಹೆಚ್ಚುತ್ತಿದೆ. ನೀವು ಹೊಸ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಖರೀದಿಸಲು ಯೋಜಿಸುತ್ತಿದ್ದರೆ, ಬೆಂಗಳೂರು ಮೂಲದ ಸ್ಟಾರ್ಟ್ ಅಪ್ ಕಂಪನಿ ಅಲ್ಟ್ರಾವೈಲೆಟ್ F77 ಎಲೆಕ್ಟ್ರಿಕ್ ಮೋಟಾರ್‌ಬೈಕ್​ ಅನ್ನು ಮೂರು ವಿಭಿನ್ನ ಲುಕ್​ಗಳಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

    ಅಲ್ಟ್ರಾವೈಲೆಟ್​ F77 ಬಂಪ್
    ಕಂಪನಿಯು ಈಗಾಗಲೇ ಈ ಬೈಕಿನ ವಿನ್ಯಾಸವನ್ನು ಅನಾವರಣಗೊಳಿಸಿದೆ. ಇದು ನೋಡಲು ಸ್ಪೋರ್ಟಿ ಲುಕ್​ ಹೊಂದಿದೆ. ಇದರ ಬೆಲೆ ಹತ್ತಿರ ಹತ್ತಿರ ಕವಾಸಕಿ ನಿಂಜಾ 400 ನಷ್ಟೇ ಇದೆ. ಆದರೆ ಇದರ ಕಾರ್ಯಕ್ಷಮತೆಯ ಇದು TVS ಅಪಾಚೆ, RR 310 ಮತ್ತು BMW G 310 R ನಂತಹ 300cc ಬೈಕ್‌ಗಳಿಗೆ ಸಮಾನವಾಗಿದೆ. ಈ ಬೈಕ್​ ಮೂರು ವಿನ್ಯಾಸಗಳಲ್ಲಿ ಲಭ್ಯವಿದೆ. ಶ್ಯಾಡೊ, ಲೈಟ್ನಿಂಗ್​ ಮತ್ತು ಲೇಸರ್​ ಎಂಬ ಹೆಸರುಗಳ ಅಡಿಯಲ್ಲಿ ಈ ಮೂರು ವಿನ್ಯಾಸಗಳಿವೆ. ಶ್ಯಾಡೊ ಎಂದರೆ ಬ್ಲಾಕ್​ ಮತ್ತು ಗ್ರೇ ಬಣ್ಣದ ಬೈಕ್​ ಆಗಿರಲಿದೆ. ಅದೇ ಲೈಟ್ನಿಂಗ್​ ಅಂದರೆ ಲೈಟ್​ ಬ್ಲೂ ಬಣ್ಣದಲ್ಲಿದ್ದು ಲೇಸರ್​ ಕೆಂಪು ಬಣ್ಣದಲ್ಲಿದೆ.

    ಈ ಬೈಕ್​ನಲ್ಲಿ ಸ್ಟ್ಯಾಂಡರ್ಡ್, ರೆಕಾನ್ ಮತ್ತು ಲಿಮಿಟೆಡ್​ ಆವೃತ್ತಿಯ ಮೂರು ವರ್ಷನ್​ಗಳನ್ನು ಕಾಣಬಹುದು. ಸ್ಟ್ಯಾಂಡರ್ಡ್ ಮಾಡೆಲ್​ನಲ್ಲಿ – 27kW ಮೋಟಾರ್ ಇದ್ದು 7.1 ಕಿಲೋ ವ್ಯಾಟ್​ ಬ್ಯಾಟರಿ ಪ್ಯಾಕ್ ಸಿಗಲಿದೆ. ಈ ಬಮಾದರಿಯ ಬೈಕ್​ 206 ಕಿಮೀ ದೂರವನ್ನು ಕ್ರಮಿಸಲಿದೆ. ರೆಕಾನ್​ ಮಾಡೆಲ್​ನ ಗಾಡಿ 29kW ಮೋಟಾರ್ ಮತ್ತು 10.3ಕಿಲೋ ವ್ಯಾಟ್​ ಬ್ಯಾಟರಿ ಪ್ಯಾಕ್ ಜೊತೆಗೆ ಬರಲಿದೆ. ಲಿಮಿಟೆಡ್ ಎಡಿಷನ್ ವೇರಿಯಂಟ್- 30.2kW ನ ಮೋಟಾರ್​ 10.3 ಕಿಲೋವ್ಯಾಟ್​ ಬ್ಯಾಟರಿಯೊಂದಿಗೆ ಬರಲಿದ್ದು 307 ಕಿಮೀ ಕ್ರಮಿಸುತ್ತೆ ಎಂದು ಹೇಳಲಾಗುತ್ತಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts