More

    ಬಂದ್​ ಬಂಗಾಳ; ಇನ್ನೂ ಒಂದು ತಿಂಗಳು ಲಾಕ್​​ಡೌನ್​; ಕರ್ನಾಟಕಕ್ಕಿಂತ ಮೂರುಪಟ್ಟು ಕಡಿಮೆ ಸಕ್ರಿಯ ಕೇಸ್​ಗಳು

    ಕೋಲ್ಕತ್ತ: ಕರೊನಾ ತಡೆಗೆ ಲಾಕ್​​ಡೌನ್​ ಪರಿಹಾರವಲ್ಲ ಕರ್ನಾಟಕ ಘೋಷಿಸಿದೆ. ಸಾರ್ವಜನಿಕರು ಸಹಕರಿಸಬೇಕು ಎಂದು ಸಿಎಂ ಯಡಿಯೂರಪ್ಪ ಮನವಿ ಮಾಡಿದ್ದಾರೆ. ಆದರೆ, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಇನ್ನೂ ಒಂದು ತಿಂಗಳು ರಾಜ್ಯದ ಎಲ್ಲ ಕಂಟೇನ್​ಮೆಂಟ್​ ಝೋನ್​ಗಳಲ್ಲಿ ಲಾಕ್​​ಡೌನ್​ ಘೋಷಿಸಿದ್ದಾರೆ.

    ಪಶ್ಚಿಮ ಬಂಗಾಳದಲ್ಲಿ ಈಗಾಗಲೇ ಲಾಕ್​ಡೌನ್​ ಜಾರಿಯಲ್ಲಿದೆ. ಇದು ಆಗಸ್ಟ್​ 31ರವರೆಗೆ ಮುಂದುವರಿಯಲಿದೆ ಎಂದು ಸಿಎಂ ಪ್ರಕಟಿಸಿದ್ದಾರೆ. ಇದಲ್ಲದೇ ಎರಡು ವಾರಕ್ಕೊಮ್ಮೆ ಸಂಪೂರ್ಣ ಬಂದ್​ ಜಾರಿಯಲ್ಲಿರಲಿದೆ.

    ಇದನ್ನೂ ಓದಿ; 65 ಸಾವಿರ ರೂ.ಗೆ ಏರಲಿದೆ 10 ಗ್ರಾಂ ಚಿನ್ನದ ಬೆಲೆ; ಬಂಗಾರದಲ್ಲಿ ಹೂಡಿಕೆಗೆ ಸಕಾಲ….! 

    ಜೀವನಾವಶ್ಯಕ ವಸ್ತುಗಳು, ತುರ್ತ ಸೇವೆಗಳನ್ನು ಹೊರತುಪಡಿಸಿ ಉಳಿದೆಲ್ಲವೂ ಬಂದ್​ ಆಗಿರಲಿವೆ. ಸರ್ಕಾರಿ ಹಾಗೂ ಖಾಸಗಿ ಕಚೇರಿಗಳು, ಬ್ಯಾಂಕ್​ಗಳು, ಇತರ ವಾಣಿಜ್ಯ ಸಂಸ್ಥೆಗಳು, ಸಾರ್ವಜನಿಕ ಸಾರಿಗೆಯನ್ನು ಬಂದ್​ ಮಾಡಲಾಗಿದೆ.

    ಆದರೆ, ಆಯಾ ಜಿಲ್ಲೆಗಳಿಗೆ ಅನ್ವಯವಾಗುವಂತೆ ವಿವಿಧ ಕಾಲಾವಧಿ, ಮಾನದಂಡಗಳನ್ನು ಅನುಸರಿಸಲಾಗುತ್ತಿದೆ. ಅಂಗಡಿಗಳನ್ನು ತೆರೆಯಲು ಹಾಗೂ ಅಗತ್ಯ ಸೇವೆಗಳಿಗೆ ಪ್ರತ್ಯೇಕ ಸಮಯ ನಿಗದಿಪಡಿಸಲಾಗಿದೆ. ಪೆಟ್ರೋಲ್​ ಬಂಕ್​ಗಳಿಗೂ ಕೂಡ ಸಮಯ ಮಿತಿ ವಿಧಿಸಲಾಗಿದೆ.

    ಇದನ್ನೂ ಓದಿ; ಈ ಬ್ಯಾಂಕ್​ಗೆ ಚೀನಾ ಸಾರಥ್ಯ, ಭಾರತವಿಲ್ಲಿ ಭಾರಿ ಸಾಲಗಾರ…! ಎಲ್ಲಿದೆ ಬ್ಯಾಂಕ್​?ಎಷ್ಟು ಸಾಲ? 

    ಮಾಸ್ಕ್​ ಧರಿಸದೇ ಯಾರೇ ಹೊರ ಬಂದರೂ ದಂಡ ವಿಧಿಸಲಾಗುತ್ತಿದೆ. ನೆರೆಯ ರಾಜ್ಯಗಳಿಂದ ಬರುವವರಿಗೆ ಹಾಗೂ ಹೋಗುವವರಿಗೆ ಇ-ಪಾಸ್​ ನೀಡಲಾಗುತ್ತಿದೆ. ರಾಜ್ಯದ ಗಡಿಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಸದ್ಯ ಪಶ್ಚಿಮ ಬಂಗಾಳದಲ್ಲಿ 62,964 ಸೋಂಕಿತರಿದ್ದು, ಇದರಲ್ಲಿ 19,493 ಸಕ್ರಿಯ ಪ್ರಕರಣಗಳಿವೆ. ಈವರೆಗೆ 1,449 ಜನರು ಮೃತಪಟ್ಟಿದ್ದಾರೆ.

    ಕರೊನಾ ಲಸಿಕೆಯಿಂದ ಡಿಎನ್​ಎ ಬದಲಾವಣೆ; 7 ಲಕ್ಷ ಜನರಿಗೆ ಅಡ್ಡ ಪರಿಣಾಮ; ಇಲ್ಲಿದೆ ಫ್ಯಾಕ್ಟ್​ ಚೆಕ್​….!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts