More

    ಮಾನನಷ್ಟ ಮೊಕದ್ದಮೆ : ಅಮಿತ್​ ಷಾಗೆ ಬಂಗಾಳ ಕೋರ್ಟ್ ಸಮನ್ಸ್

    ಕೊಲ್ಕತಾ: ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಭಾರತೀಯ ಜನತಾ ಪಾರ್ಟಿ(ಬಿಜೆಪಿ) ನಡುವೆ ಈಗಾಗಲೇ ಸಾಕಷ್ಟು ಬಿರುಸಿನ ಹೋರಾಟ ನಡೆಯುತ್ತಿದೆ. ಈ ನಡುವೆ ಬಂಗಾಳದ ವಿಶೇಷ ನ್ಯಾಯಾಲಯವೊಂದು ಕೇಂದ್ರ ಗೃಹ ಸಚಿವ ಮತ್ತು ಬಿಜೆಪಿ ನಾಯಕ ಅಮಿತ್ ಷಾರಿಗೆ ಸಮ್ಮನ್ಸ್ ಜಾರಿ ಮಾಡಿದೆ.

    ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಅವರ ಸೋದರ ಅಳಿಯ ಹಾಗೂ ಟಿಎಂಸಿ ಸಂಸದ ಅಭಿಷೇಕ್ ಬ್ಯಾನರ್ಜಿ ಸಲ್ಲಿಸಿರುವ ಮಾನನಷ್ಟ ಮೊಕದ್ದಮೆಯ ಹಿನ್ನೆಲೆಯಲ್ಲಿ ಈ ಸಮನ್ಸ್ ಜಾರಿಯಾಗಿದೆ. ಬಿಧನನಗರದ ಎಂಪಿ-ಎಂಎಲ್​ಎ ಸ್ಪೆಷಲ್ ಕೋರ್ಟ್, ಫೆಬ್ರವರಿ 22 ರಂದು ಬೆಳಿಗ್ಗೆ 10 ಗಂಟೆಗೆ ಅಮಿತ್ ಷಾ, “ಖುದ್ದಾಗಿ ಅಥವಾ ವಕೀಲರ ಮುಖಾಂತರ” ತನ್ನ ಮುಂದೆ ಹಾಜರಾಗುವಂತೆ ಆ​ದೇಶಿಸಿದೆ.

    ಇದನ್ನೂ ಓದಿ: ಕೊನೆಗೆ ಟಿಎಂಸಿಯಲ್ಲಿ ಉಳಿಯೋದು ಮಮತಾ ಬ್ಯಾನರ್ಜಿ ಮಾತ್ರ: ಭವಿಷ್ಯ ನುಡಿದ ಅಮಿತ್ ಷಾ

    2018 ರ ಆಗಸ್ಟ್ 11 ರಂದು ಕೊಲ್ಕತಾದ ಮೇಯೊ ರಸ್ತೆಯಲ್ಲಿ ನಡೆದ ರಾಲಿಯಲ್ಲಿ ತಮ್ಮ ಬಗ್ಗೆ ಮಾನಹಾನಿ ಮಾಡುವ ಮಾತುಗಳನ್ನು ಷಾ ಆಡಿದ್ದರು ಎಂದು ಅಭಿಷೇಕ್ ಮೊಕದ್ದಮೆ ಸಲ್ಲಿಸಿದ್ದಾರೆ ಎನ್ನಲಾಗಿದೆ. ಭಾರತೀಯ ದಂಡ ಸಂಹಿತೆಯ ಕಲಂ 500 ರ ಅಡಿ ಸಲ್ಲಿಸಲಾಗಿರುವ ಈ ಆರೋಪಕ್ಕೆ ಉತ್ತರಿಸಲು ಷಾರನ್ನು ಕರೆಸಲಾಗಿದೆ.(ಏಜೆನ್ಸೀಸ್)

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

     

    ಐಪಿಎಲ್ 2021 : ಪಂಜಾಬ್ ಕಿಂಗ್ಸ್ ತಂಡ ಸೇರಿದ ಶಾರುಖ್ ಖಾನ್ !

    VIDEO: ಮಂಗಳನ ಅಂಗಳದಲ್ಲಿ ಪರ್ಸೆವೆರೆನ್ಸ್ ರೋವರ್: ಜಗತ್ತಿನ ಕಣ್ಣು ಭಾರತದ ಈ ಕುವರಿಯತ್ತ…

    ಕರೊನಾ ನಿವಾರಣೆಗೆ ಪಣತೊಟ್ಟ ಸರ್ಕಾರ… ಲಸಿಕೆ ನಿರಾಕರಿಸಿದವರಿಗೆ ಶಿಕ್ಷೆ !

     

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts