More

    ಹೊಸ ಹೊಸ ಆವಿಷ್ಕಾರಗಳು ಹೂಡಿಕೆದಾರರ ವಲಯಕ್ಕೆ ಸಹಾಯಕ

    | ಕೆ ಶಂಕರ್, ಮ್ಯೂಚುಯಲ್ ಫಂಡ್ ಡಿಸ್ಟ್ರಿಬ್ಯೂಟರ್

    ಭವಿಷ್ಯವನ್ನು ಮುಂಚಿತವಾಗಿ ಕಲ್ಪಿಸಿಕೊಂಡು, ಅದರ ಅಗತ್ಯಗಳನ್ನು ಪೂರೈಸಲು ಬೇಕಾದ ಹೊಸ ಆಲೋಚನೆಗಳನ್ನು ಕಾರ್ಯರೂಪಗೊಳಿಸುವುದಕ್ಕೆ ಆವಿಷ್ಕಾರ ಎನ್ನುತ್ತೇವೆ. ಭವಿಷ್ಯದಲ್ಲಿ ನೆಮ್ಮದಿಯ ಬದುಕನ್ನು ಕಾಣಲು ಇಂದು ಅನೇಕ ಕಂಪೆನಿಗಳು ಅತ್ಯಾಧುನಿಕವಾಗಿ ಹೊಸ ಹೊಸ ಆವಿಷ್ಕಾರ ನಡೆಸುತ್ತಲೇ ಇವೆ. ಈ ಬೆಳವಣಿಗೆ ಹೂಡಿಕೆದಾರರ ವಲಯಕ್ಕೆ ಸಾಕಷ್ಟು ಸಹಾಯವಾಗಿದೆ. ವಿವಿಧ ಕಂಪೆನಿಗಳ ಬೆಳವಣಿಗೆಯ ಸಾಮರ್ಥ್ಯವನ್ನು ಹೂಡಿಕೆದಾರರಿಗೆ ತಿಳಿದುಕೊಳ್ಳಲು ಅವಕಾಶ ಮಾಡಿಕೊಡುತ್ತಿದೆ ಎಂದರೆ ತಪ್ಪಲ್ಲ.

    ಹೂಡಿಕೆದಾರರು ಹೊಸ ಅವಕಾಶಗಳನ್ನು ಮುಂಚಿತವಾಗಿ ತಿಳಿದುಕೊಂಡು, ಅವುಗಳಲ್ಲಿ ಹೂಡಿಕೆ ಮಾಡುವುದು ಸವಾಲಿನಿಂದ ಕೂಡಿರುತ್ತದೆ. ಹೊಸ ಮಾದರಿಯ ಮ್ಯೂಚುವಲ್ ಫಂಡ್‌ಗಳು ಈ ಸಂದರ್ಭದಲ್ಲಿ ಹೂಡಿಕೆದಾರರಿಗೆ ರಕ್ಷಣೆ ನೀಡುತ್ತವೆ.

    ಇದನ್ನೂ ಓದಿ: ಪಾನ್ ಮಸಾಲಾ, ತಂಬಾಕಿಗೆ ಜಿಎಸ್​ಟಿ ಸೆಸ್ ನಿಗದಿ; ಏ.1ರಿಂದಲೇ ಜಾರಿ | ತೆರಿಗೆ ಕಳ್ಳತನಕ್ಕೆ ಕಡಿವಾಣ

    ಆವಿಷ್ಕಾರಗಳು ನಿರ್ದಿಷ್ಟ ವಲಯಕ್ಕೆ ಸೀಮಿತವಾಗಿಲ್ಲ!

    ಸಾಮಾನ್ಯವಾಗಿ, ಸಾಂಪ್ರದಾಯಿಕ ಯೋಚನೆಗಳು ಹೊಸ ತಂತ್ರಜ್ಞಾನಕ್ಕೆ ಸಮನಾಗಿರುತ್ತವೆ. ಇಂದು ಆವಿಷ್ಕಾರ ಎಂಬುವುದು ಪ್ರವಾಸಿಗರನ್ನು ಬಾಹ್ಯಾಕಾಶಕ್ಕೆ ಕಳುಹಿಸುವುದರಿಂದ ಹಿಡಿದು, ಡಿಎನ್‌ಎ ಮರುಹೊಂದಿಸುವಷ್ಟು ಮುಂದುವರಿದಿದೆ. ವಿಸ್ತರಿಸಿ ಹೇಳುವುದಾದರೆ, ಆವಿಷ್ಕಾರಗಳು ಇಂದು ವಿಶಾಲ ವ್ಯಾಪ್ತಿಯನ್ನು ಹೊಂದಿದ್ದು, ನಿರ್ದಿಷ್ಟ ವಲಯ ಅಥವಾ ಪ್ರದೇಶಕ್ಕೆ ಸೀಮಿತವಾಗಿಲ್ಲ.

    ಉದಾಹರಣೆಗೆ, ನಿಧಾನವಾಗಿ ಚಲಿಸುವ ಇಂಜಿನ್‌ಗಳಿಂದ ಹಿಡಿದು, ಹೆಚ್ಚಿನ ವೇಗದ ವಂದೇ ಭಾರತ್‌ ರೈಲಿನವರೆಗಿನ ಆವಿಷ್ಕಾರ ಹೊಂದಿರುವುದನ್ನು ಕಾಣಬಹುದು. ಸ್ಟೀಮ್ ಇಂಜಿನ್, ಟೆಲಿಫೋನ್, ಆಟೋಮೊಬೈಲ್, ವಿದ್ಯುತ್, ಕಂಪ್ಯೂಟರ್, ಇಂಟರ್ನೆಟ್, ಕೃತಕ ಬುದ್ಧಿಮತ್ತೆ, ಶಕ್ತಿ ಸಂಗ್ರಹಣೆ, ರೋಬೋಟಿಕ್ಸ್, ಬ್ಲಾಕ್‌ಚೈನ್, ಇವೆಲ್ಲವೂ ಕಳೆದ ಒಂದೆರಡು ಶತಮಾನಗಳಲ್ಲಿ ಹೊಸ ಆವಿಷ್ಕಾರಗಳ ಮೈಲಿಗಲ್ಲುಗಳು. ವಾಸ್ತವದಲ್ಲಿ ಆವಿಷ್ಕಾರ ಎಂಬುದು ಎಂದಿಗೂ ಮುಗಿಯದ ಪ್ರಕ್ರಿಯೆಯಾಗಿದ್ದು, ಪ್ರತಿಯೊಂದು ಕ್ಷೇತ್ರವೂ ಮುಂದುವರಿಯುತ್ತಲೇ ಇದೆ.

    ಇದನ್ನೂ ಓದಿ: ಹಕ್ಕುದಾರ ಇಲ್ಲದಿದ್ದರೂ ಸಿಗುತ್ತೆ ಠೇವಣಿ ಹಣ!

    ಐಸಿಐಸಿಐ ಪ್ರುಡೆನ್ಶಿಯಲ್ ಇನ್ನೋವೇಶನ್ ಫಂಡ್

    ಪ್ರಸ್ತುತ ಮಾರುಕಟ್ಟೆಯಲ್ಲಿರುವ ಉತ್ಪನ್ನಗಳನ್ನು ಹೊಸತನದೊಂದಿಗೆ ಗ್ರಾಹಕರಿಗೆ ತಲುಪಿಸುವುದು ಮತ್ತು ಉನ್ನತೀಕರಿಸುವುದು ವ್ಯವಹಾರದಲ್ಲಿ ಮುಖ್ಯ ಪಾತ್ರವಹಿಸುತ್ತದೆ. ಐಸಿಐಸಿಐ ಪ್ರುಡೆನ್ಶಿಯಲ್ ಇನ್ನೋವೇಶನ್ ಫಂಡ್, ಓಪನ್-ಎಂಡೆಡ್ ಇಕ್ವಿಟಿ ಸ್ಕೀಮ್, ಹೂಡಿಕೆದಾರರಿಗೆ ಇದೇ ಮಾದರಿಯ ಸೂಕ್ತವಾದ ಅವಕಾಶವನ್ನು ನೀಡುತ್ತದೆ. ಈ ಯೋಜನೆಯು ತನ್ನ ಸೊತ್ತುಗಳ 80%ರಷ್ಟು ಮಾರುಕಟ್ಟೆಯ ಬೆಳವಣಿಗೆಗೆ ತಕ್ಕುದಾದ ಕಂಪನಿಗಳಲ್ಲಿ ಹೂಡಿಕೆ ಮಾಡುತ್ತದೆ. ಈ ಮೂಲಕ ಸಂಪತ್ತು ಸೃಷ್ಟಿಸಲು ಬಯಸುವವರು ಈ ಯೋಜನೆಯಲ್ಲಿ ಹೂಡಿಕೆ ಮಾಡಲು ಚಿಂತಿಸಬಹುದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts