More

    ನೆದರ್ಲೆಂಡ್ಸ್​ ವಿರುದ್ಧ 160 ರನ್​ಗಳ ಗೆಲುವು: ಚಾಂಪಿಯನ್ಸ್ ಟ್ರೋಫಿ ಅರ್ಹತೆ ನಿರೀಕ್ಷೆ ಉಳಿಸಿಕೊಂಡ ಇಂಗ್ಲೆಂಡ್​

    ಪುಣೆ: ಇಲ್ಲಿನ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ಇಂದು (ನ.8) ನಡೆದ ವಿಶ್ವಕಪ್​ ಟೂರ್ನಿಯ 40ನೇ ಪಂದ್ಯದಲ್ಲಿ ಕ್ರಿಕೆಟ್​ ಶಿಶು ನೆದರ್ಲೆಂಡ್​ ವಿರುದ್ಧ ಕ್ರಿಕೆಟ್​ ಜನಕ ಇಂಗ್ಲೆಂಡ್​ 160 ರನ್​ಗಳ ಸುಲಭ ಜಯ ದಾಖಲಿಸಿತು. ಈ ಮೂಲಕ ಚಾಂಪಿಯನ್ಸ್ ಟ್ರೋಫಿಗೆ ಅರ್ಹತೆ ಪಡೆಯುವ ನಿರೀಕ್ಷೆಯನ್ನು ಉಳಿಸಿಕೊಂಡಿದೆ.

    ಟಾಸ್​ ಗೆದ್ದು ಬ್ಯಾಟಿಂಗ್​ ಮಾಡಿದ ಆಂಗ್ಲ ಪಡೆ ನಿಗದಿತ 50 ಓವರ್​ಗಳಲ್ಲಿ 9 ವಿಕೆಟ್​ ನಷ್ಟಕ್ಕೆ 339 ರನ್​ಗಳನ್ನು ಕಲೆಹಾಕಿತು. ತಂಡದ ಪರ ಸ್ಟೋಕ್ಸ್​ (108 ರನ್​, 84 ಎಸೆತ, 6 ಬೌಂಡರಿ, 6 ಸಿಕ್ಸರ್​) ಶತಕ ಸಿಡಿಸಿದರೆ, ಮಲಾನ್​ 84 ರನ್​ಗಳ ಅರ್ಧ ಶತಕದಾಟವಾಡಿದರು.

    ನೆದರ್ಲೆಂಡ್​ ಪರ ಮಿಂಚಿನ ಬೌಲಿಂಗ್​ ದಾಳಿ ಮಾಡಿದ ಬಾಸ್​ ಡೀ ಲೀಡ್​ 3 ವಿಕೆಟ್​ ಕಬಳಿಸಿದರೆ, ಆರ್ಯನ್ ದತ್​ ಮತ್ತು ವ್ಯಾನ್​ ಬೀಕ್​ ತಲಾ ಎರಡು ವಿಕೆಟ್​ ಪಡೆದರು. ಉಳಿದಂತೆ ವ್ಯಾನ್​ ಮೀಕರನ್​ 1 ವಿಕೆಟ್​ಗೆ ತೃಪ್ತಿಪಟ್ಟುಕೊಂಡರು.

    ಆಂಗ್ಲರ ಪಡೆ ನೀಡಿದ ಗುರಿ ಬೆನ್ನತ್ತಿದ್ದ ನೆದರ್ಲೆಂಡ್ಸ್​ ತಂಡ 37 .2 ಓವರ್​ಗಳಲ್ಲಿ ತನ್ನೆಲ್ಲಾ ವಿಕೆಟ್​ ಕಳೆದುಕೊಂಡು 179 ರನ್​ ಕಲೆಹಾಕುವ ಮೂಲಕ ಆಂಗ್ಲರ ಬಲೆಗೆ ಸುಲಭ ತುತ್ತಾಯಿತು. ತಂಡದ ಪರ ತೇಜ ನಿಡಮನೂರು (41), ನಾಯಕ ಸ್ಕಾಟ್​ ಎಡ್ವರ್ಡ್ಸ್​ (38), ವೆಸ್ಲಿ ಬ್ಯಾರೆಸಿ (37) ಮತ್ತು ಸೈಬ್ರಾಂಡ್ ಎಂಗಲ್‌ಬ್ರೆಕ್ಟ್ (33) ಹೊರತುಪಡಿಸಿ, ಯಾವೊಬ್ಬ ಆಟಗಾರನೂ ಸಹ ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ.

    ಇಂಗ್ಲೆಂಡ್​ ಪರ ಮೋಯಿನ್​ ಅಲಿ ಮತ್ತು ಆದಿಲ್​ ರಶೀದ್​ ತಲಾ 3 ವಿಕೆಟ್​ ಕಬಳಿಸಿದರೆ, ಡೇವಿಡ್​ ವಿಲ್ಲಿ 2 ಮತ್ತು ಕ್ರಿಸ್​ ವೋಕ್ಸ್​ 1 ವಿಕೆಟ್​ ಉರುಳಿಸಿದರು.

    ಚಾಂಪಿಯನ್ಸ್ ಟ್ರೋಫಿಗೆ ಅರ್ಹತೆ ಪಡೆಯಲು ಇಂಗ್ಲೆಂಡ್ ಈಗ ಭಾನುವಾರ ಕೋಲ್ಕತ್ತಾದಲ್ಲಿ ನಡೆಯಲಿರುವ ತನ್ನ ಅಂತಿಮ ಪಂದ್ಯದಲ್ಲಿ ಪಾಕಿಸ್ತಾನವನ್ನು ಸೋಲಿಸಬೇಕಾಗಿದೆ. ಇಂಗ್ಲೆಂಡ್ ಕೂಡ ಪಾಯಿಂಟ್ ಪಟ್ಟಿಯಲ್ಲಿ ಏಳನೇ ಸ್ಥಾನಕ್ಕೆ ಏರಿತು ಮತ್ತು ನೆದರ್ಲ್ಯಾಂಡ್ಸ್ ಅನ್ನು ಕೆಳಕ್ಕೆ ತಳ್ಳಿದೆ. (ಏಜೆನ್ಸೀಸ್​)

    ಮ್ಯಾಕ್ಸಿ ದ್ವಿಶತಕ ಸಿಡಿಸಿಲು ಕಾಲಿನ ಗಾಯವೇ ಕಾರಣ! ಸಚಿನ್​ ಕೊಟ್ಟ ಅಚ್ಚರಿಯ ವಿವರಣೆ ಹೀಗಿದೆ…

    ಮಹಿಳೆ ಶಿಕ್ಷಣ ಪಡೆದರೆ ಜನನ ಇಳಿಕೆ: ‘ನನ್ನ ಮಾತನ್ನ ವಾಪಸ್ ತೆಗೆದುಕೊಳ್ಳುತ್ತೇನೆ’: ಮಾಧ್ಯಮಗಳ ಮುಂದೆ ಕ್ಷಮೆಯಾಚಿಸಿದ ನಿತೀಶ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts