More

    ಕೃಷಿಯಿಂದಲೇ ಬದುಕು ಕಟ್ಟಿಕೊಂಡ ಬೆಳ್ಯಪ್ಪ

    ಆದರ್ಶ್ ಅದ್ಕಲೇಗಾರ್, ಮಡಿಕೇರಿ
    ಮಣ್ಣು ನಂಬಿದರೆ ಹೊನ್ನು ಎನ್ನುವಂತೆ ಮಣ್ಣನ್ನೇ ನಂಬಿ ಬದುಕು ಕಟ್ಟಿಕೊಂಡ ಅಮ್ಮಾಟಂಡ ರತ್ತು ಬೆಳ್ಯಪ್ಪರವರು ಮಿಶ್ರ ಬೆಳೆ ಬೆಳೆದು ಮಾದರಿಯಾಗಿದ್ದಾರೆ.


    ಹೌದು.. ಮಡಿಕೇರಿ ತಾಲೂಕಿನ ಹಾಕತ್ತೂರು ಗ್ರಾಮದ ೪೮ ವರ್ಷದ ಎ.ಬಿ.ಬೆಳ್ಳಿಯಪ್ಪ(೯೪೮೦೬೦೫೩೭೬) ಒಟ್ಟು ೧೦ ಎಕರೆ ಹೊಲದಲ್ಲಿ ಕಳೆದ ೨೫ ವರ್ಷದಿಂದ ಕೃಷಿ ಮಾಡುತ್ತಿದ್ದಾರೆ. ಪ್ರಾಥಮಿಕ ಕೃಷಿಯಾಗಿ ೩ ಏಕರೆ ಪ್ರದೇಶದಲ್ಲಿ ಭತ್ತ ಬೆಳೆಯುತ್ತಿದ್ದಾರೆ.


    ತೋಟಗಾರಿಕಾ ಬೆಳೆಗಳಾದ ಕಾಫಿ, ಏಲಕ್ಕಿ, ಕರಿಮೆಣಸನ್ನು ಅಡಿಕೆ, ಬಾಳೆ, ತೆಂಗು, ಮಾವು, ಪಪ್ಪಾಯ, ಬಾಳೆ, ಕಿತ್ತಾಳೆ, ಮುಸುಂಬಿ, ಸೀಬೆ, ಬಟರ್ ಫ್ರೂಟ್, ಸೀಬೆಗಿಡ ಮತ್ತು ಪ್ಯಾಷನ್ ಫುಟಾನ್ನು ಮಿಶ್ರ ಬೆಳೆಯಾಗಿ ಬೆಳೆಯುತ್ತಿದ್ದಾರೆ. ಕೃಷಿಗೆ ಪೂರಕವಾಗಿ ಮತ್ತು ಆದಾಯದ ದೃಷ್ಟಿಯಿಂದ ಜೇನು ಕೃಷಿಯನ್ನು ಸಹ ಮಾಡುತ್ತಿದ್ದಾರೆ. ೭ ಎಕರೆ ಪ್ರದೇಶದಲ್ಲಿ ತೋಟಗಾರಿಕಾ ಬೆಳೆ ಬೆಳೆಯುತ್ತಿದ್ದಾರೆ.


    ಅರ್ಧ ಎಕರೆ ಜಾಗದಲ್ಲಿ ಗ್ರೀನ್ ಹೌಸ್ ಮಾಡಿ ಕೋಸು ಜಾತಿಗೆ ಸೇರಿದ ಹಾಗೂ ನೋಡಲು ಆಕರ್ಷಕವಾದ ಹಸಿರು ತರಕಾರಿ ಬ್ರೋಕಲಿ ಬೆಳೆಯನ್ನು ಬೆಳೆದು, ಇತರ ರೈತರಿಗೆ ಮಾದರಿಯಾಗಿದ್ದಾರೆ. ಇದಲ್ಲದೆ ಕೋಳಿ, ಹಂದಿ, ಹಸು ಕೂಡ ಸಾಕಿದ್ದಾರೆ ಮತ್ತು ಕೃಷಿ ಇಲಾಖೆಯಿಂದ ನಿರ್ಮಿಸಿಕೊಟ್ಟ ಕೃಷಿ ಹೊಂಡದಲ್ಲಿ ಮೀನುಸಾಕಣಿಕೆಯನ್ನು ಕೂಡ ಮಾಡಿ ಆದಾಯ ಗಳಿಸುತ್ತಿದ್ದಾರೆ. ಜತೆಗೆ ನಿತ್ಯ ೧೦ ಲೀಟರ್ ಹಾಲು ಮಾರಾಟ ಮಾಡುತ್ತಾರೆ.


    ಗಾರ್ಸಿನಿಯಾ(ಕಾಚಂಪುಳಿ) ಪ್ರೋಸೆಸಿಂಗ್ ಯೂನಿಟ್: ವಿನೆಗರ್ ಮನೆ ಉದ್ಯಮಕ್ಕೆ ಯಂತ್ರಗಳ ಬಳಕೆ ಆರಂಭಿಸಿದವರಲ್ಲಿ ಇವರು ಮೊದಲಿಗರು. ಸುಮಾರು ೨ ಲಕ್ಷ ವೆಚ್ಚದಲ್ಲಿ ಹಣ್ಣಿನ ರಸ ಬೇರ್ಪಡಿಸುವ ರುಬ್ಬುವ ಮತ್ತು ಬತ್ತಿಸುವ ಮೂರು ಯಂತ್ರಗಳನ್ನು ಖರೀದಿಸಿ, ವಿನೆಗರ್ ತಯಾರಿಸುತ್ತಿದ್ದಾರೆ. ಕಾಚಂಪುಳಿ ಜಂತುಹುಳ ನಿವಾರಣೆಗೆ ಔಷಧಿ. ಅಲ್ಲದೇ ಕೊಡಗಿನ ಹಂದಿಮಾಂಸ, ಮೀನುಸಾರಿಗೆ ಬಳಸಲು ಇದಕ್ಕೆ ಬಹುಬೇಡಿಕೆ ಇದೆ. ಈ ಪ್ರಕ್ರಿಯೆಗೆ ಕೊಯಂಬತ್ತೂರಿನ ಸೆಂಟ್ರಲ್ ಇನ್ಸ್‌ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್‌ನ ಬೆಂಬಲದೊಂದಿಗೆ ಸುಧಾರಿತ ರೀತಿಯಲ್ಲಿ ವಿನೆಗಾರ್ ಮಾರಾಟ ಮಾಡುತ್ತಿದ್ದಾರೆ.


    ಪಂಚಾಮೃತ ತಯಾರಿ: ರಾಸಾಯನಿಕ ಗೊಬ್ಬರದಿಂದ ದೂರು ಉಳಿಯುವ ಸಲುವಾಗಿ ಪಂಚಾಮೃತ ಎಂಬ ಔಷಧಿಯನ್ನು ಖುದ್ದಾಗಿ ತಯಾರಿಸುತ್ತಾರೆ. ತುಪ್ಪ, ಮೊಸರು, ಬಾಳೆಹಣ್ಣು, ಗೋಮುತ್ರ ಮಿಶ್ರಣ ಮಾಡಿ, ಒಂದು ವಾರ ಇಟ್ಟು, ನಂತರ ಅದಕ್ಕೆ ನೀರನ್ನು ಬರೆಸಿ ಸ್ಪ್ರೇ ಮಾಡುದರಿಂದ ಬೆಳೆಗಳಿಗೆ ಕೀಟಗಳು ದಾಳಿ ಇಡುದಿಲ್ಲ. ಜತೆಗೆ ಇದರಿಂದ ಭೂಮಿಯಲ್ಲಿ ಎರೆಹುಳ ಉತ್ಪತ್ತಿಯಾಗುತ್ತದೆ ಎನ್ನುತ್ತಾರೆ ಬೆಳ್ಯಪ್ಪ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts