More

    ಯೂನೆಸ್ಕೋ ತಾತ್ಕಾಲಿಕ ಪಟ್ಟಿಗೆ ಬೇಲೂರು, ಹಳೇಬೀಡು ದೇವಾಲಯಗಳು!

    ಹಾಸನ: ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿಸಲು ಯುನೆಸ್ಕೋಗೆ ರಾಜ್ಯ ಸರ್ಕಾರ ನಾಮನಿರ್ದೇಶನ ಮಾಡಿದ್ದ ಬೇಲೂರಿನ ಚನ್ನಕೇಶವ ಮತ್ತು ಹಳೇಬೀಡಿನ ಹೊಯ್ಸಳೇಶ್ವರ ದೇವಾಲಯಗಳು ತಾತ್ಕಾಲಿಕ ಪಟ್ಟಿಯಲ್ಲಿ ಸೇರ್ಪಡೆಗೊಂಡಿವೆ ಎಂದು ಜಿಲ್ಲಾಧಿಕಾರಿ ಆರ್.ಗಿರೀಶ್ ತಿಳಿಸಿದರು.

    ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ವಿವಿಧ ಇಲಾಖೆ ಅಧಿಕಾರಿಗಳ ಸಭೆ ನಡೆಸಿದ ಜಿಲ್ಲಾಧಿಕಾರಿ, ಬೇಲೂರು, ಹಳೇಬೀಡಿನ ದೇವಾಲಯಗಳೊಂದಿಗೆ ಮೈಸೂರು ಜಿಲ್ಲೆಯ ಸೋಮನಾಥ ದೇವಾಲಯವನ್ನೂ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರ್ಪಡೆಗೊಳಿಸಲು ರಾಜ್ಯದಿಂದ ಪ್ರಸ್ತಾವನೆ ಸಲ್ಲಿಸಿಕೆಯಾಗಿದ್ದು, ಯುನೆಸ್ಕೋದ ತಾತ್ಕಾಲಿಕ ಪಟ್ಟಿಯಲ್ಲಿ ಸ್ಥಾನ ಪಡೆದಿವೆ ಎಂದರು.

    ಬೇಲೂರು, ಹಳೇಬೀಡಿನ ದೇವಾಲಯಗಳ ವಿನ್ಯಾಸ, ಶಿಲ್ಪಗಳು ಹಾಗೂ ಮಾನವ ಮೌಲ್ಯಗಳ ಪ್ರರ್ದಶಕ ರೂಪಗಳನ್ನು ಗಮನಿಸಿ ಪ್ರಸ್ತಾವನೆ ಸಲ್ಲಿಕೆ ಆಗಬೇಕು. ನಾಮ ನಿರ್ದೇಶಕವಾದ ಸ್ಥಳಗಳ ನಿರ್ವಹಣೆ ಯೋಜನೆಯ ವಿನ್ಯಾಸವನ್ನು ಯುನೆಸ್ಕೋಗೆ ಕಳಿಸಬೇಕಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಮತ್ತು ರಾಜ್ಯ ಪುರಾತತ್ವ ಇಲಾಖೆ, ಪ್ರವಾಸೋದ್ಯಮ ಇಲಾಖೆ ನಗರ /ಗ್ರಾಮ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ವ್ಯವಸ್ಥಿತವಾದ ಮತ್ತು ದೂರದೃಷ್ಟಿ ಚಿಂತನೆಗಳುಳ್ಳ ಯೋಜನೆಗಳನ್ನು ಸಿದ್ಧಪಡಿಸಿ ಸಲ್ಲಿಸಬೇಕು ಎಂದು ಸೂಚಿಸಿದರು.

    ಬೆಂಗಳೂರಿನ ಇನ್ ಟೆಕ್‌ನ ತಜ್ಞ ಪಂಕಜ್ ಅವರು ಮಾತನಾಡಿ, ಯುನೆಸ್ಕೋ ಮಾರ್ಗಸೂಚಿಯಂತೆ ದೇವಾಲಯದ ಸುತ್ತಮುತ್ತ ನೂರಾರು ವರ್ಷಗಳ ಹಿಂದೆ ನಿರ್ಮಾಣವಾಗಿರುವ ಮನೆಗಳು, ಶಿಲ್ಪಗಳ ಮೂಲಕ ಮುಂದಿನ ಪೀಳಿಗೆಗೆ ಅಲ್ಲಿನ ಸಂಸ್ಕೃತಿಯನ್ನು ತಿಳಿಸಬೇಕಾಗುತ್ತದೆ. ಯುನೆಸ್ಕೋ ವಿಶ್ವ ಪಾರಂಪರಿಕ ತಾಣ ಪಟ್ಟಿಗೆ ನಾಮ ನಿರ್ದೇಶನದ ಸಂದರ್ಭ ದಸ್ತಾವೇಜು ಸಲ್ಲಿಕೆ ವೇಳೆ ಸಂಬಂಧಿಸಿದ ಸ್ಥಳ ನಿರ್ವಹಣಾ ವ್ಯವಸ್ಥೆಯ ವಿಸ್ಕೃತ ಯೋಜನೆ ಸಲ್ಲಿಸುವ ವೇಳೆ ಬಫರ್ ವಲಯಗಳನ್ನು ಗುರುತಿಸಬೇಕು. ಈ ಸ್ಥಳಗಳ ಮಹತ್ವ, ಸಂರಕ್ಷಣೆ ವ್ಯವಸ್ಥೆ ಹೇಗಿರಬೇಕು ಎಂದು ವಿವರಿಸಿದರು.

    ಉಪವಿಭಾಧಿಕಾರಿ ಬಿ.ಎ.ಜಗದೀಶ್, ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಕಾರ್ಯನಿರ್ವಾಹಕ ಇಂಜಿನಿಯರ್ ಡಿ.ಅರ್ಚನಾ, ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕ ಎ.ಬಿ ಸಂಜಯ್, ಬೇಲೂರು-ಹಳೇಬೀಡು ಯೋಜನಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಚ್.ಪಿ. ರಾಘವೇಂದ್ರ ಹಾಗೂ ಪುರಾತತ್ವ ಇಲಾಖೆಯ ಕ್ಯುರೇಟರ್ ಕುಮಾರ್ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts