More

    ಷೇರುದಾರರಿಗೆ ಶೇ.9 ಡಿವಿಡೆಂಡ್

    ಬಳ್ಳಾರಿ: ಸುಕೋ ಬ್ಯಾಂಕ್‌ನ 29ನೇ ಸರ್ವ ಸದಸ್ಯರ ವಾರ್ಷಿಕ ಸಭೆಯಲ್ಲಿ ಬ್ಯಾಂಕ್ ಷೇರುದಾರರಿಗೆ ಶೇ.9 ಡಿವಿಡೆಂಡ್ ಘೋಷಿಸಲಾಗಿದೆ ಎಂದು ಬ್ಯಾಂಕ್ ಅಧ್ಯಕ್ಷ ಮೋಹಿತ್ ಮಸ್ಕಿ ತಿಳಿಸಿದರು.
    ನಗರದ ಪ್ರಧಾನ ಕಚೇರಿಯಲ್ಲಿ ಶನಿವಾರ ಆಯೋಜಿಸಿದ್ದ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮಾತನಾಡಿದರು. ಬ್ಯಾಂಕ್ ಒಟ್ಟು 25,015 ಷೇರುದಾರರನ್ನು ಹೊಂದಿದೆ. 2021-22ರ ಆರ್ಥಿಕ ಸಾಲಿನಲ್ಲಿ ಒಟ್ಟು 1,264 ಕೋಟಿ ರೂ. ವ್ಯವಹಾರ ನಡೆಸಿ, 3.27 ಕೋಟಿ ರೂ. ಆದಾಯ ತೆರಿಗೆ ಪಾವತಿಸಿ, 4 ಕೋಟಿ 84 ಲಕ್ಷ ರೂ. ನಿವ್ವಳ ಲಾಭ ಗಳಿಸಿದೆ. ಈ ಅವಧಿಯಲ್ಲಿ ಬ್ಯಾಂಕ್ ಶೂನ್ಯ ಎನ್‌ಪಿಎ ಸಾಧಿಸಿದ್ದು, ಸಹಕಾರಿ ಬ್ಯಾಂಕ್ ವ್ಯವಹಾರದಲ್ಲಿ ಇದು ದೊಡ್ಡ ಸಾಧನೆಯಾಗಿದೆ ಎಂದರು.
    2022 – 2023ರ ಆರ್ಥಿಕ ಸಾಲಿನಲ್ಲಿ ಆರ್‌ಬಿಐನ ಅನುಮತಿ ಮೇರೆಗೆ 10 ಹೊಸ ಶಾಖೆಗಳನ್ನು ತೆರೆಯಲು, 25 ಬ್ಯುಸಿನೆಸ್ ಕರೆಸ್ಪಾಂಡೆಂಟ್‌ಗಳನ್ನು ನೇಮಕ ಮಾಡಿಕೊಳ್ಳಲು ನಿರ್ಧರಿಸಲಾಗಿದೆ. ಬ್ಯಾಂಕ್‌ನ ಕಾರ್ಯಕ್ಷೇತ್ರದ ವ್ಯಾಪ್ತಿಯನ್ನು ಕರ್ನಾಟಕ ರಾಜ್ಯಾದ್ಯಂತ ವಿಸ್ತರಿಸಲು ಭಾರತೀಯ ರಿಜರ್ವ್ ಬ್ಯಾಂಕ್‌ಗೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ. ಸ್ಮಾಲ್ ಫೈನಾನ್ಸ್ ಬ್ಯಾಂಕ್ ಆಗಿ ಪರಿವರ್ತನೆ ಆಗಲು ಸಹಕಾರಿ ಇಲಾಖೆ ಮತ್ತು ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತವು ನಿರಾಕ್ಷೇಪಣಾ (ಎನ್‌ಒಸಿ) ನೀಡಿವೆ. ಅಲ್ಲದೇ, ಹೈದರಾಬಾದ್‌ನ ಆದರ್ಶ ಕೋ ಆಪರೇಟಿವ್ ಬ್ಯಾಂಕ್ ಮತ್ತು ಸುಕೋ ಬ್ಯಾಂಕ್ ಜಂಟಿಯಾಗಿ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಆಗಲು ಶೀಘ್ರದಲ್ಲೇ ಅರ್ಜಿ ಸಲ್ಲಿಸಲಿವೆ ಎಂದರು.
    ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಎಂ.ಆರ್.ಗಿರೀಶ್ ಮಾತನಾಡಿ, 2021-22ರ ವಾರ್ಷಿಕ ವರದಿ ಮತ್ತು ವಿಷಯವನ್ನು ಮಂಡನೆ ಮಾಡಿದರು. ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಕೃಷ್ಣ, ಆಡಳಿತ ಮಂಡಲಿ ಕಾರ್ಯದರ್ಶಿ ವೆಂಕಟೇಶರಾವ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts