More

    ವಿದ್ಯಾರ್ಥಿಗಳ ಜೀವ ಕಸಿದ ಸಾರಿಗೆ ಬಸ್- ಮೂವರು ಸ್ಥಳದಲ್ಲೇ ಮೃತ

    ಬಳ್ಳಾರಿ: ತಾಲೂಕಿನ ಹಲಕುಂದಿ ಸಮೀಪ ಸಾರಿಗೆ ಬಸ್ ಡಿಕ್ಕಿಯಾಗಿ ಮೂವರು ವಿದ್ಯಾರ್ಥಿಗಳು ಸೋಮವಾರ ನಸುಕಿನ ಜಾವ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

    ಜಿಲ್ಲಯ ಕಂಪ್ಲಿ ತಾಲೂಕಿನ ಎಮ್ಮಿಗನೂರಿನ ಕನಕರಾಜು (19), ಸಂಡೂರು ತಾಲೂಕಿನ ನಾಗೇನಹಳ್ಳಿಯ ಹೊನ್ನೂರಸ್ವಾಮಿ (22) ಮತ್ತು ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರಿನ ದೇವಸಮುದ್ರದ (ಮಾಚೇನಹಳ್ಳಿ) ಶಂಕರ್ ಎನ್ (18) ಮೃತಪಟ್ಟವರು. ಈ ವಿದ್ಯಾರ್ಥಿಗಳು ರಸ್ತೆ ದಾಟುವಾಗ ಬೆಂಗಳೂರಿನಿಂದ ಜೇವರ್ಗಿಗೆ ಹೊರಟ್ಟಿದ್ದ ಸಾರಿಗೆ ಬಸ್ ಡಿಕ್ಕಿ ಹೊಡೆದಿದ್ದರಿಂದ ದುರ್ಘಟನೆ ಸಂಭವಿಸಿದೆ. ಈ ಮೂವರು ನಗರದಲ್ಲಿರುವ ಪಜಾತಿ-ಪಂಗಡದ ಹಾಸ್ಟೆಲ್‌ನಲ್ಲಿ ವಾಸವಿದ್ದರು. ಸ್ಥಳಕ್ಕೆ ಬಳ್ಳಾರಿ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ, ಪ್ರಕರಣ ದಾಖಲಿಸಿದ್ದಾರೆ. ಚಾಲಕನನ್ನು ವಶಕ್ಕೆ ಪಡೆಯಲಾಗಿದೆ.

    ಮುಗಿಲು ಮುಟ್ಟಿದ ಹೆತ್ತವರ ಆಕ್ರಂದನ
    ಬಳ್ಳಾರಿ ನಗರದ ವಿಮ್ಸ್ ಶವಾಗಾರದ ಮುಂದೆ ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಸಂಬಂಧಿಕರು, ಪಾಲಕರು ಕಣ್ಣೀರು ಹಾಕುತ್ತಿದ್ದ ದೃಶ್ಯಗಳು ಮನಕುಲುವಂತಿತ್ತು. ಈ ವೇಳೆ ಸ್ಥಳಕ್ಕೆ ಧಾವಿಸಿದ ಹಾಸ್ಟೆಲ್ ವಿದ್ಯಾರ್ಥಿಗಳು ತಾಲೂಕು ಅಧಿಕಾರಿಗಳಿಂದ ಮೊಬೈಲ್‌ಕಿತ್ತುಕೊಂಡು ಅವರನ್ನು ತರಾಟೆಗೆ ತೆಗೆದುಕೊಂಡರು. ‘ವಿದ್ಯಾರ್ಥಿಗಳಿಗೆ ಕಿರುಕುಳ ಕೊಡ್ತೀರಿ, ಸಾವಿಗೀಡಾದ ವಿದ್ಯಾರ್ಥಿಗಳು ಎರಡು ದಿನದಿಂದ ಹಾಸ್ಟೆಲ್ನಲ್ಲಿ ಇಲ್ಲವೆಂದು ಸುಳ್ಳು ಹೇಳ್ತಿದೀರಿ’ ಎಂದು ಅಕ್ರೋಶ ವ್ಯಕ್ತಪಡಿಸಿದರು. ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ ವಿದ್ಯಾರ್ಥಿಗಳನ್ನು ಸಮಾಧಾನಪಡಿಸಿದರು.

    ಸಾವಿಗೆ ಬಡತನ ಕಾರಣವಾಯಿತೇ?
    ಈ ಮೂವರ ದುರ್ಮರಣಕ್ಕೆ ಬಡತನ ಕಾರಣ ಎಂದು ಆತನ ಸ್ನೇಹಿತರು ಮಾತನಾಡಿಕೊಂಡರು. ಪ್ರತಿ ಭಾನುವಾರ ಕ್ಯಾಟರಿಂಗ್ ಕೆಲಸಕ್ಕೆ ಈ ಮೂವರು ಹೋಗುತ್ತಿದ್ದರು. ಹಾಸ್ಟೆಲ್‌ನಲ್ಲಿ ಇದ್ದುಕೊಂಡು ರಜೆ ದಿನ ಕೆಲಸಕ್ಕೆ ಹೋಗುತ್ತಿದ್ದರು. ಕ್ಯಾಟರಿಂಗ್ ಕೆಲಸ ಮಾಡಿಕೊಂಡು ಶಿಕ್ಷಣ ಮುಂದುವರಿಸಿದ್ದರು. ಭಾನುವಾರವೂ ಕ್ಯಾಟರಿಂಗ್ ಕೆಲಸಕ್ಕೆ ಹೋದಾಗ ಅಪಘಾತ ಸಂಭವಿಸಿದೆ. ಹೊನ್ನೂರಸ್ವಾಮಿ ಬಳ್ಳಾರಿಯ ಸರ್ಕಾರಿ ಕಾಲೇಜಿನಲ್ಲಿ ಡಿಗ್ರಿ ವ್ಯಾಸಂಗ ಮಾಡುತ್ತಿದ್ದ. ವಾಡ್ಲ ಕಾಲೇಜಿನಲ್ಲಿ ಶಂಕರ್ ಎನ್. ಹಾಗೂ ಮುನ್ಸಿಪಲ್ ಪಪೂ ಕಾಲೇಜಿನಲ್ಲಿ ಕನಕರಾಜು ದ್ವಿತೀಯ ಪಿಯುಸಿ ಓದುತ್ತಿದ್ದರು. ಒಂದೇ ಹಾಸ್ಟೆಲ್‌ನಲ್ಲಿದ್ದುಕೊಂಡು ರಜೆ ಇದ್ದಾಗ ಕ್ಯಾಟರಿಂಗ್ ಕೆಲಸಕ್ಕೆ ಹೋಗುತ್ತಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts