More

    ರಸ್ತೆ ಕಾಮಗಾರಿ ವಿಳಂಬಕ್ಕೆ ಆಕ್ರೋಶ

    ಟೈರ್‌ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದ ಸಾರ್ವಜನಿಕರು

    ಬಳ್ಳಾರಿ: ನಗರದ ವಡ್ಡರಬಂಡೆಯಲ್ಲಿ ಬಾಲಾಜಿರಾವ್ ರಸ್ತೆಯ ಕಾಮಗಾರಿ ವಿಳಂಬ ಖಂಡಿಸಿ ಎಸ್‌ಯುಸಿಐ(ಸಿ) ಸಂಘಟನೆ ನೇತೃತ್ವದಲ್ಲಿ ನಾಗರಿಕರು ಮಂಗಳವಾರ ಟೈರ್‌ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದರು.

    ರಸ್ತೆ ದುರಸ್ತಿ ಪೂರ್ಣಗೊಳ್ಳದೆ ಪ್ರತಿನಿತ್ಯ ಏಳುವ ಧೂಳಿನಿಂದ ತೊಂದರೆಯಾಗುತ್ತಿದೆ. ಮಳೆ ಬಂದರೆ ಕೊಚ್ಚೆಯಾಗುವ ರಸ್ತೆಯಿಂದ ಕಿರಿಕಿರಿ ಉಂಟಾಗುತ್ತಿದೆ. ಕಾರ್ಪೋರೇಟರ್, ಪಾಲಿಕೆಯ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗುತ್ತಿಲ್ಲ. ನಿತ್ಯ ಈ ರಸ್ತೆಯಲ್ಲಿ ಸಂಚರಿಸುವುದೇ ತಲೆ ನೋವಾಗಿದೆ. ರಸ್ತೆಗೆ ಸಂಪರ್ಕ ಕಲ್ಪಿಸುವ ರಾಧಿಕಾ ಚಿತ್ರ ಮಂದಿರ ರಸ್ತೆ, ಕಾಳಮ್ಮ ಬೀದಿಗಳನ್ನು ಬಂದ್ ಮಾಡಲಾಗಿದೆ. ಇದರಿಂದಾಗಿ ಜನ ಸಂಚಾರ ಕಡಿಮೆಯಾಗಿ, ಇಲ್ಲಿರುವ ಅಂಗಡಿಗಳಿಗೆ, ವರ್ಕ್‌ಶಾಪ್‌ಗಳಿಗೆ ವ್ಯಾಪಾರವೇ ಇಲ್ಲದಂತಾಗಿದೆ. ಬಾಡಿಗೆ ಕಟ್ಟಲು ಬೇಕಾದ ಕನಿಷ್ಠ ವ್ಯಾಪಾರವೂ ಆಗುತ್ತಿಲ್ಲ. ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಸ್ಥಳಕ್ಕೆ ಬಂದು ಹಾಳಾಗಿರುವ ರಸ್ತೆಯನ್ನು ರಿಪೇರಿ ಮಾಡಿಸಬೇಕು. ಉತ್ತಮ ಗುಣಮಟ್ಟದ ಹೊಸ ರಸ್ತೆ ನಿರ್ಮಿಸಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿದರು.
    ಪ್ರತಿಭಟನಾ ಸ್ಥಳಕ್ಕಾಗಿಮಿಸಿದ ಪಾಲಿಕೆ ಇಂಜಿನಿಯರ್ ಖಾಜಾ ಮೋಹಿನುದ್ದೀನ್ ಮಾತನಾಡಿ, ಒಂದೂವರೆ ತಿಂಗಳಲ್ಲಿ ರಸ್ತೆ ಕಾಮಗಾರಿಯನ್ನು ಸಂಪೂರ್ಣಗೊಳಿಸಲಾಗುವುದು. ರಸ್ತೆ ಕಾಮಗಾರಿ ಉಂಟಾಗಿರುವ ಕೆಲವು ಅಡ್ಡಿ- ಆತಂಕಗಳನ್ನು ಶೀಘ್ರದಲ್ಲೇ ಬಗೆಹರಿಸಲಾಗುವುದು. ಸಂಚಾರ ಸುಗಮವಾಗುವಂತೆ ವಡ್ಡರಬಂಡೆಗೆ ಸಂಪರ್ಕ ಕಲ್ಪಿಸುವ ಮಾರ್ಗಗಳನ್ನು ತೆರೆವುಗೊಳಿಸಲಾಗವುದು ಎಂದು ಭರವಸೆ ನೀಡಿದರು.
    ಮುಖಂಡರಾದ ಡಾ.ಪ್ರಮೋದ್, ಗೋವಿಂದ್, ಈಶ್ವರಿ, ರಾಜ, ನಾಗರಿಕರಾದ ಪ್ರಕಾಶ್, ಗುಲಾಬ್, ಹಂಪಯ್ಯ, ಅಕ್ಬರ್, ರವಿ, ಚಾಂದ್‌ಬಾಷಾ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts