More

    ರಾಜಾ ಎಸ್.ಗಿರಿ ಆಚಾರ್ಯ ಅವರಿಗೆ ಗೌರವ ಡಾಕ್ಟರೇಟ್ ವಿಎಸ್‌ಕೆ ವಿವಿಯ ಘಟಿಕೋತ್ಸವದಲ್ಲಿ ನಾಳೆ ಪ್ರದಾನ

    ಬಳ್ಳಾರಿ: ಮಂತ್ರಾಲಯದ ವಿದ್ವಾನ್ ರಾಜಾ ಎಸ್. ಗಿರಿ ಆಚಾರ್ಯ ನಗರದ ವಿಎಸ್‌ಕೆ ವಿವಿಯ ಗೌರವ ಡಾಕ್ಟರೇಟ್‌ಗೆ ಭಾಜನರಾಗಿದ್ದು, ವಿವಿಯ ಬಯಲು ರಂಗಮಂದಿರದಲ್ಲಿ ಡಿ.29ರಂದು ಬೆಳಗ್ಗೆ 11ಕ್ಕೆ ಆಯೋಜಿಸಲಾಗಿರುವ ಎಂಟನೇ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುತ್ತದೆ.

    ಉಪ ಮುಖ್ಯಮಂತ್ರಿ ಹಾಗೂ ಉನ್ನತ ಶಿಕ್ಷಣ ಸಚಿವ ಸಿ.ಎನ್.ಅಶ್ವತ್ಥ ನಾರಾಯಣ ಘಟಿಕೋತ್ಸವದ ಅಧ್ಯಕ್ಷತೆ ವಹಿಸಲಿದ್ದಾರೆ. ಯುಜಿಸಿ ಕಾರ್ಯದರ್ಶಿ ರಜನೀಶ ಜೈನ್ ವರ್ಚ್ಯುವಲ್ ಕಾರ್ಯಕ್ರಮದ ಮೂಲಕ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ ಎಂದು ಸೋಮವಾರ ಕುಲಪತಿ ಸಿದ್ದು ಅಲಗೂರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಗೌರವ ಡಾಕ್ಟರೇಟ್‌ಗೆ 14 ಅರ್ಜಿಗಳು ಸಲ್ಲಿಕೆಯಾಗಿದ್ದವು ಎಂದು ತಿಳಿದು ಬಂದಿದೆ.

    ರಾಜಾ ಎಸ್.ಗಿರಿ ಆಚಾರ್ಯ ಪರಿಚಯ
    ಮಹಾ ಮಹೋಪಾಧ್ಯಯ ರಾಜಾ ಎಸ್.ಗಿರಿ ಆಚಾರ್ಯ ಮಂತ್ರಾಲಯ ರಾಘವೇಂದ್ರ ಸ್ವಾಮಿ ಮಠದ ಹಾಲಿ ಪೀಠಾಧಿಪತಿಗಳಾದ ಸುಬುಧೇಂದ್ರ ತೀರ್ಥ ಸ್ವಾಮೀಜಿ ಅವರ ಪೂರ್ವಾಶ್ರಮದ ತಂದೆಯಾಗಿದ್ದಾರೆ. ಮಂತ್ರಾಲಯ ರಾಘವೇಂದ್ರ ಸ್ವಾಮಿ ಮಠದ ವಟುಗಳಾಗಿ ಶಾಸ, ಮೀಮಾಂಸೆ, ಜ್ಯೋತಿಷ್ಯ, ಧರ್ಮಶಾಸಗಳ ಅಧ್ಯಯನ ಮಾಡಿದ್ದಾರೆ. ತಿರುಪತಿ ತಿರುಮಲ ದೇವಸ್ಥಾನ ಮಂಡಳಿಯ ಸಂಸ್ಕೃತ ವಿದ್ಯಾಲಯದಿಂದ ದ್ವೈತ ವೇದಾಂತ ವಿದ್ವತ್ ಹಾಗೂ ವ್ಯಾಸ ವಿದ್ವತ್ ಪದವಿಗಳನ್ನು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.

    ಮಂತ್ರಾಲಯದ ಗುರು ಸಾರ್ವಭೌಮ ಸಂಸ್ಕೃತ ವಿದ್ಯಾಪೀಠದಲ್ಲಿ ಅಧ್ಯಾಪಕ, ಪ್ರಧಾನ ಅಧ್ಯಾಪಕ, ಪ್ರಾಚಾರ್ಯರಾಗಿ ಸಂಸ್ಕೃತ ಹಾಗೂ ಶಾಸ ಬೋಧಿಸಿದ್ದಾರೆ. ಶಾಸ ಬೋಧನೆ ಜತೆಗೆ ತಾಮ್ರ ಪತ್ರಗಳ ಸಂಗ್ರಹ ಹಾಗೂ ಸಂಶೋಧನೆ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿದ್ದಾರೆ. ಅನೇಕ ಗ್ರಂಥಗಳ ರಚನೆ ಜತೆಗೆ ಗ್ರಂಥಗಳ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದಾರೆ. ರಾಘವೇಂದ್ರ ಸ್ವಾಮಿ ಮಠದಿಂದ ಆಸ್ಥಾನ ವಿದ್ವಾನ್ ಗೌರವಕ್ಕೆ ಪಾತ್ರರಾಗಿದ್ದಾರೆ. ಗಿರಿ ಆಚಾರ್ಯ ಅವರಿಗೆ ತಿರುಪತಿಯ ರಾಷ್ಟ್ರೀಯ ಸಂಸ್ಕೃತ ವಿಶ್ವವಿದ್ಯಾಲಯ ಹಾಗೂ ವರ್ಚ್ಯುವಲ್ ಅಕಾಡೆಮಿಯಿಂದ ಗೌರವ ಡಾಕ್ಟರೇಟ್ ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ. ರಾಷ್ಟ್ರಪತಿ ಅವರಿಂದ ಆರ್ಯಭಟ ಸೇರಿ ಅನೇಕ ಪ್ರಶಸ್ತಿಗಳು ಲಭಿಸಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts