More

    ಮಳೆನೀರಿನಿಂದ ಕರಗಿ ಗಣಪತಿ

    ಬಳ್ಳಾರಿ: ನಗರದಲ್ಲಿ ಶನಿವಾರ ತಡರಾತ್ರಿ ಸುರಿದ ಮಳೆಗೆ ಅಲ್ಲಿಪುರ ಬಳಿ ಗಣೇಶಮೂರ್ತಿ ಮಾರಾಟ ಮಾಡುವವರ ಶೆಡ್‌ಗೆ ನೀರು ನುಗ್ಗಿ, ಗಣೇಶನ ವಿಗ್ರಹಗಳು ಕರಗಿ ವಿವಿಧ ಭಾಗಗಳು ವಿರೂಪಗೊಂಡಿವೆ.

    ಶೆಡ್‌ನಲ್ಲಿ 2-3 ಅಡಿ ಮಳೆ ನೀರು ನಿಂತಿದೆ. ಹೀಗಾಗಿ 2-3 ಅಡಿ ಎತ್ತರದ ಬಹುತೇಕ ಮಣ್ಣಿನ ವಿಗ್ರಹಗಳು ಕರಗಿ ವಿರೂಪಗೊಂಡಿವೆ. ಕೆಲ ಎತ್ತರದ ವಿಗ್ರಹಗಳ ಪಾದ, ಇಲಿ ಸಂಪೂರ್ಣವಾಗಿ ಕರಗಿವೆ.

    ಪಶ್ಚಿಮ ಬಂಗಾಳದ ಸುಭಾಷ್ ಮತ್ತವರ ತಂಡ, ಗಣೇಶ ಹಬ್ಬಕ್ಕೂ 3-4 ತಿಂಗಳಿಂದ ಮುಂಚಿತವಾಗಿ ಮಣ್ಣು ಮತ್ತಿತರ ಸಾಮಗ್ರಿಯೊಂದಿಗೆ ಬಳ್ಳಾರಿ ಬಂದು, ಹೊರವಲಯದ ರಾಮೇಶ್ವರಿ ದೇವಸ್ಥಾನ ಬಳಿ ಶೆಡ್ ಹಾಕಿಕೊಂಡು ವಿಗ್ರಹಗಳನ್ನು ತಯಾರಿಸಿದ್ದರು. ಮಳೆ ಇವರ ಶ್ರಮ, ಹಣವನ್ನು ವ್ಯರ್ಥ ಮಾಡಿದ್ದು, ಕಲಾವಿದರು ಕಂಗಾಲಾಗಿದ್ದಾರೆ.

    5 ಸಾವಿರ ರೂ.ದಿಂದ ಹಿಡಿದು 70-80 ಸಾವಿರ ರೂ.ವರೆಗೆ ಬೆಲೆ ಇರುವ ವಿಗ್ರಹಗಳನ್ನು ಕಲಾವಿದರು ಸಿದ್ಧಪಡಿಸಿದ್ದರು. ಈ ಪೈಕಿ ಅಂದಾಜು 150 ಗಣೇಶ ಮೂರ್ತಿಗಳು ಮುಂಗಡವಾಗಿ ಬುಕ್ ಆಗಿದ್ದವು. ಈಗ ಅವರಿಗೆ ಏನು ಹೇಳಬೇಕು ಎಂಬುದು ಗೊತ್ತಾಗುತ್ತಿಲ್ಲ ಎಂದು ಕಲಾವಿದರು ಪೇಚಾಡುತ್ತಿದ್ದಾರೆ.

    ವಾಹನ ಸಂಚಾರಕ್ಕೆ ಅಡ್ಡಿ: ಜಿಲ್ಲಾದ್ಯಂತ ಬಹುತೇಕ ಕಡೆಗಳಲ್ಲಿ ಶನಿವಾರ ತಡರಾತ್ರಿ ಉತ್ತಮ ಮಳೆಯಾಗಿದೆ. ನಗರದ ಕೌಲ್‌ಬಜಾರ್, ಕುವೆಂಪುನಗರ ಅಲ್ಲಿಪುರ, ಹೊಸಪೇಟೆ ರಸ್ತೆ, ಪಾರ್ವತಿನಗರ, ದುರ್ಗಮ್ಮ ದೇವಸ್ಥಾನ ಮತ್ತಿತರೆಡೆ ಉತ್ತಮ ಮಳೆಯಾಗಿದೆ. ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿದ್ದು, ಎಸ್‌ಎಸ್ ಪೇಟೆ ಫ್ಲೈಓವರ್‌ನ ಕೆಳ ಸೇತುವೆಯಲ್ಲಿ ನೀರು ನಿಂತು ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts