More

    ಖಾಸಗಿ ಶಾಲೆಗಳಿಗೆ ಅನುದಾನ ಮೀಸಲಿಡಿ: ಒಕ್ಕೂಟದ ಜಿಲ್ಲಾ ಸಂಚಾಲಕ ತಾಂಡವ ಕೃಷ್ಣ ಒತ್ತಾಯ

    ಬಳ್ಳಾರಿ: 371 ಜೆ ಅಡಿ ಅನುದಾನ ರಹಿತ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆಗಳಿಗೆ ಮೂಲಸೌಕರ್ಯಗಳಿಗಾಗಿ ಅನುದಾನ ನೀಡುವಂತೆ ಒತ್ತಾಯಿಸಿ ಕಲ್ಯಾಣ ಕರ್ನಾಟಕ ಅನುದಾನ ರಹಿತ ಕನ್ನಡ ಮಾಧ್ಯಮ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಜಿಲ್ಲಾ ಸಂಚಾಲಕ ತಾಂಡವ ಕೃಷ್ಣ ಒತ್ತಾಯಿಸಿದ್ದಾರೆ.

    1995ರ ನಂತರ ಪ್ರಾರಂಭವಾದ ಕಲ್ಯಾಣ ಕರ್ನಾಟಕದ ಕನ್ನಡ ಮಾಧ್ಯಮ ಅನುದಾನ ರಹಿತ ಶಾಲೆಗಳಿಗೆ 2015ರವರೆಗೆ ವೇತನಾನುದಾನ ನೀಡಬೇಕು. 371ಜೆ ಜಾರಿಗೊಂಡು 7 ವರ್ಷಗಳಾದರೂ ಶಿಕ್ಷಣಕ್ಕೆ ಯಾವುದೇ ಅನುದಾನ, ಮೂಲಸೌಕರ್ಯ ದೊರೆತಿಲ್ಲ. ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಬಿಡುಗಡೆಯಾಗುವ ಅನುದಾನದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಮೀಸಲಿರುವ ಸಂಪೂರ್ಣ ಅನುದಾನ ಕಲ್ಯಾಣ ಕರ್ನಾಟಕದ 6 ಜಿಲ್ಲೆಗಳಿಗೆ ವ್ಯಯ ಮಾಡಬೇಕೆಂದು ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

    ಬಜೆಟ್‌ನಲ್ಲಿ 371 ಜೆ ಅಡಿ ಕನ್ನಡ ಹಾಗೂ ಆಂಗ್ಲ ಮಾಧ್ಯಮ ಅನುದಾನ ರಹಿತ ಶಾಲೆಗಳಿಗೆ ಅನುದಾನ ಘೋಷಿಸಬೇಕು. ಇಲ್ಲದಿದ್ದರೆ ಕನ್ನಡಪರ ಸಂಘಟನೆಗಳೊಂದಿಗೆ ಹೋರಾಟ ಆರಂಭಿಸುವುದಾಗಿ ಎಚ್ಚರಿಸಿದರು. ಒಕ್ಕೂಟದ ಪ್ರಮುಖರಾದ ಶಾಂತನಗೌಡ, ರಾಮ್‌ಮೋಹನ್, ಶಂಕ್ರಪ್ಪ, ಬಿ.ಕೃಷ್ಣ, ಬಸವರಾಜ ಹುಳಿ ಮಜ್ಗೆ, ಗೋಗಿ ಗೊಮಟೇಶ್ವರ, ವೆಂಕಟೇಶ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts