More

    ತಲೆ ಎತ್ತಲಿದೆ ಮೈನಿಂಗ್ ಕಾಲೇಜು

    ಶ್ರೀಕಾಂತ ಅಕ್ಕಿ ಬಳ್ಳಾರಿ

    ದೇಶದಲ್ಲಿ ಎರಡನೆಯ ಮತ್ತು ರಾಜ್ಯದಲ್ಲಿ ಮೊದಲ ‘ಸ್ಕೂಲ್ ಆಫ್ ಮೈನಿಂಗ್ ನ್ಯಾಷನಲ್ ಕಾಲೇಜು’ ಇಲ್ಲಿನ ವಿಜಯನಗರ ಶ್ರೀ ಕೃಷ್ಣದೇವರಾಯ ವಿವಿಯಲ್ಲಿ ಶೀಘ್ರದಲ್ಲೇ ಆರಂಭವಾಗುವ ಮುನ್ಸೂಚನೆ ದೊರೆತಿದೆ. ಅಕ್ರಮ ಗಣಿಗಾರಿಕೆಯಲ್ಲಿ ಸದ್ದು ವಾಡಿದ್ದ ಬಳ್ಳಾರಿಗೆ ಕಿರೀಟ ಪ್ರಾಯವೊಂದು ದೊರೆತಂತಾಗಿದೆ. ಜಾರ್ಖಂಡ್‌ನ ದನಬಾದ್ ವಿವಿಯಲ್ಲಿ ವಾತ್ರ ಇಂಥ ಕಾಲೇಜಿದ್ದು, 4,500 ವಿದ್ಯಾರ್ಥಿಗಳಿದ್ದಾರೆ.

    ಅವೈಜ್ಞಾನಿಕ ಗಣಿಗಾರಿಕೆ ತಡೆವ ಜತೆಗೆ ಕಲ್ಲು, ಮರಳು, ಉಕ್ಕು, ಚಿನ್ನ ಸೇರಿದಂತೆ ಎಲ್ಲ ರೀತಿಯ ಗಣಿಗಾರಿಕೆ ತರಬೇತಿ ಜತೆಗೆ ನಿರ್ವಹಣೆ, ವಾಲೀಕರು ಹಾಗೂ ಕಾರ್ಮಿಕರಿಗೆ ವೈಜ್ಞಾನಿಕ ನಿರ್ವಹಣೆ ಕುರಿತು ಕಾಲೇಜಿನಲ್ಲಿ ತರಬೇತಿ ನೀಡಲಾಗುತ್ತದೆ. ರಾಜ್ಯದಲ್ಲಿ ಮೈನಿಂಗ್ ಕಾಲೇಜು ಪ್ರಾರಂಭಿಸುವುದಾಗಿ ಕಳೆದ ವರ್ಷವೇ ಬಜೆಟ್‌ನಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ೋಷಿಸಿದ್ದರು. ಆದರೆ, ಸ್ಥಳ ನಿಗದಿ ವಾಡಿರಲಿಲ್ಲ. ಇದೀಗ ಗಣಿನಾಡಿನಲ್ಲಿ ಆರಂಭಿಸುವುದಾಗಿ ಸ್ವತಃ ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ ನಿರಾಣಿಯೇ ಖಚಿತ ಪಡಿಸಿದ್ದು, ಸಚಿವ ಸಂಪುಟದ ಒಪ್ಪಿಗೆ ಪಡೆಯುವುದಾಗಿ ತಿಳಿಸಿದ್ದಾರೆ. ಹೆಚ್ಚಾಗಿ ಬಳ್ಳಾರಿ ಜಿಲ್ಲೆಯಲ್ಲಿ ಗಣಿಗಾರಿಕೆ ಉತ್ತುಂಗದಲ್ಲಿ ಇರುವುದರಿಂದ 54 ಎಕರೆ ಪ್ರದೇಶದಲ್ಲಿ ನ್ಯಾಷನಲ್ ಕಾಲೇಜು ಆರಂಭವಾಗುತ್ತಿದ್ದು, ಬರದ ಸಿದ್ಧತೆ ನಡೆದಿದೆ.

    ಸಿಂಡಿಕೇಟ್ ಸಭೆಯಲ್ಲೂ ಚರ್ಚೆ: ಜಾಗ ಮೀಸಲಿರುವಂತೆ ಈಗಾಗಲೇ ಸರ್ಕಾರದಿಂದಲೇ ವಿಎಸ್‌ಕೆ ವಿವಿಗೆ ಪತ್ರ ಬಂದಿದೆ. ವಿವಿ ಆಡಳಿತ ಮಂಡಳಿಯೂ ಕಾಲೇಜು ಆರಂಭಕ್ಕೆ ತೀವ್ರ ಉತ್ಸುಕವಾಗಿದೆ. ಈಗಾಗಲೇ ಸಿಂಡಿಕೇಟ್ ಸಭೆಯಲ್ಲಿ ಕಾಲೇಜು ಆರಂಭಕ್ಕೆ ಜಾಗ ಮೀಸಲಿಡು ವುದಕ್ಕೆ ಸಂಬಂಧಿಸಿದಂತೆ ಚರ್ಚೆ ಕೂಡ ನಡೆದಿದೆ. ಅದರಲ್ಲೂ ವಿವಿ ಪಕ್ಕದಲ್ಲಿರುವ ಸರ್ಕಾರದ 70 ಎಕರೆ ಭೂಮಿಯಲ್ಲಿ ಕಾಲೇಜಿಗೆ ಆರಂಭಿಸುವ ಚಿಂತನೆ ಕೂಡ ನಡೆಯುತ್ತಿದೆ. ಈಚೆಗೆ ಖುದ್ದು ಸಚಿವರೇ ವಿಎಸ್‌ಕೆ ವಿವಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸುವ ಕಾರ್ಯಕ್ರಮ ನಿಗದಿಯಾಗಿತ್ತು. ಕಾರಣಾಂತರದಿಂದ ಕಾರ್ಯಕ್ರಮ ರದ್ದಾಯಿತು. ಶೀಘ್ರದಲ್ಲೇ ಈ ಕಾರ್ಯಕ್ರಮ ನಡೆಯಲಿದೆ.

    200 ಕೋಟಿ ಮೀಸಲು
    ಜಿಲ್ಲಾ ಖನಿಜ ನಿಧಿಯಡಿ ಬಳಕೆಯಾಗದೇ ಸಾವಿರಾರು ಕೋಟಿ ರೂ.ಅನುದಾನ ಕೊಳೆಯುತ್ತಿರುವುದರಿಂದ ಕಾಲೇಜು ಆರಂಭಕ್ಕೆ ಹಣದ ಕೊರತೆಯಿಲ್ಲ. ಸ್ಥಳೀಯವಾಗಿ ಡಿಎಂಎ್ ಅನುದಾನದಲ್ಲಿ 200 ಕೋಟಿ ರೂ. ಅನುದಾನ ವನ್ನು ಸ್ಕೂಲ್ ಆಫ್ ಮೈನಿಂಗ್ ನ್ಯಾಷನಲ್ ಕಾಲೇಜು ಆರಂಭಕ್ಕೆ ಸರ್ಕಾರದ ಮಟ್ಟದಲ್ಲಿ ಮೀಸಲಿಡುವ ಕುರಿತು ಚರ್ಚೆ ಕೂಡ ನಡೆದಿದೆ.

    ಪ್ರಸಕ್ತ ವರ್ಷ ದಿಂದಲೇ ಬಳ್ಳಾರಿ ಯಲ್ಲಿ ಸ್ಕೂಲ್ ಆಫ್ ಮೈನಿಂಗ್ ನ್ಯಾಷನಲ್ ಕಾಲೇಜು ಆರಂಭಕ್ಕೆ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ವಿಎಸ್‌ಕೆ ವಿವಿಯಲ್ಲಿ ಜಾಗ ಪರಿಶೀಲಿಸಿ,ಅಂತಿಮಗೊಳಿಸಲಾಗುವುದು.
    | ಮುರುಗೇಶ ನಿರಾಣಿ ಸಚಿವ, ಗಣಿ ಮತ್ತು ಭೂ ವಿಜ್ಞಾನ

    ರಾಷ್ಟ್ರೀಯ ಮಟ್ಟದ ಕಾಲೇಜೊಂದು ಬಳ್ಳಾರಿಗೆ ಬರುತ್ತದೆ ಅಂದರೆ ಅದರಿಂದ ಅನುಷ್ಠಾನಕ್ಕೆ ಪೂರಕವಾಗಿ ಸ್ಪಂದಿಸುವುದು ನಮ್ಮ ಕರ್ತವ್ಯ. ಕಾಲೇಜಿಗೆ ಜಾಗ ಕೊಡಲು ವಿವಿ ಸಿದ್ಧವಾಗಿದೆ.
    | ಪ್ರೊ.ಸಿದ್ದು ಅಲಗೂರು, ಕುಲಪತಿ, ವಿಎಸ್‌ಕೆ ವಿವಿ, ಬಳ್ಳಾರಿ.

    ಅನೇಕ ವರ್ಷಗಳಿಂದ ಜಿಲ್ಲೆಗೆ ಕೃಷಿ ಕಾಲೇಜು ಬೇಕೆಂದು ಸಾಕಷ್ಟು ಬಾರಿ ಮನವಿ ಮಾಡಲಾಗಿದೆ. ಆದರೆ, ಈವರೆಗೂ ಇದಕ್ಕೆ ಕಿವಿಗೊಡದ ಸರ್ಕಾರ ಈಗ ಮತ್ತಷ್ಟು ಗಣಿಯನ್ನು ಲೂಟಿಹೊಡೆಯಲು ಗಣಿ ಕಾಲೇಜು ನಿರ್ಮಿಸಲು ಹೊರಟಿದೆ. ಇದಕ್ಕೆ ನಮ್ಮ ವಿರೋಧವಿದೆ.
    | ಪನ್ನರಾಜ್ ಸಿರಿಗೇರಿ, ಜಿಲ್ಲಾ ಘಟಕದ ಅಧ್ಯಕ್ಷ, ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts