More

    ಮಾನಸಿಕ ಅಸ್ವಸ್ಥ ಗರ್ಭಿಣಿಗೆ ಬಳ್ಳಾರಿಯ ವಿಮ್ಸ್‌ನಲ್ಲಿ ಚಿಕಿತ್ಸೆ

    ಬಳ್ಳಾರಿ: ಕಾಮುಕರ ತೃಷೆಗೆ ಬಲಿಯಾಗಿ ಗರ್ಭಿಣಿಯಾದ ಕೊಟ್ಟೂರು ತಾಲೂಕಿನ ಚಿರಬಿ ಗ್ರಾಮದ ಮಾನಸಿಕ ಅಸ್ವಸ್ಥೆಗೆ ಬುಧವಾರ ವಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು.

    ರಕ್ತದ ಕೊರತೆ, ಅನೇಮಿಯಾದಿಂದ ಮಾನಸಿಕ ಅಸ್ವಸ್ಥೆ ಚಂದ್ರಮ್ಮ ಬಿ. ಬಳಲುತ್ತಿದ್ದಾರೆ. ಆರೋಗ್ಯ ಇಲಾಖೆ ಮನೆಯವರಿಗೆ ಈ ವಿಷಯ ತಿಳಿಸಿದರೂ ಸರಿಯಾಗಿ ಸ್ಪಂದಿಸದೇ ಇರುವುದರಿಂದ ಅಂಗವಿಕಲರ ಕಲ್ಯಾಣ ಇಲಾಖೆ ಪೊಲೀಸ್ ಇಲಾಖೆ ನೆರವಿನೊಂದಿಗೆ ಮಾನಸಿಕ ಅಸ್ವಸ್ಥೆಯನ್ನು ಹೆಚ್ಚಿನ ಚಿಕಿತ್ಸೆಗೆ ವಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಬರಲಾಗಿದೆ. ಮಾನಸಿಕ ಅಸ್ವಸ್ಥೆಯ ತಾಯಿ ಮತ್ತು ತಮ್ಮನಿಗೂ ಈ ವಿಷಯದ ಕುರಿತು ಅರಿವು ಮೂಡಿಸಲು ಪ್ರಯತ್ನಿಸಿದರೂ ತಲೆಕೆಡಿಸಿಕೊಳ್ಳುತ್ತಿಲ್ಲ ಎಂಬ ಆಪಾದನೆ ಕೇಳಿ ಬಂದಿದೆ.

    ಮಾನಸಿಕ ಅಸ್ವಸ್ಥೆ ಗರ್ಭಿಣಿಯಾಗಿದ್ದು, ದೇಹದಲ್ಲಿ ರಕ್ತದ ಕೊರತೆ ಎದುರಾಗಿದೆ ಎಂದು ವೈದ್ಯರು ತಿಳಿಸಿದ್ದು, ಈ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿಯ ವಿಮ್ಸ್‌ಗೆ ಬುಧವಾರ ದಾಖಲಿಸಿದ್ದೇವೆ.
    | ಮಹಾಂತೇಶ, ಜಿಲ್ಲಾಧಿಕಾರಿ, ಅಂಗವಿಕಲ ಕಲ್ಯಾಣ ಇಲಾಖೆ, ಬಳ್ಳಾರಿ


    ಮಾನಸಿಕ ಅಸ್ವಸ್ಥೆಗೆ ಮೂವರು ವೈದ್ಯರಿಂದ ಚಿಕಿತ್ಸೆ ಕೊಡಲಾಗುತ್ತಿದೆ. ಆರೋಗ್ಯ ಸುಧಾರಿಸುವ ಲಕ್ಷಣ ಕಂಡು ಬರುತ್ತಿದ್ದು, ಚಿಕಿತ್ಸೆ ಪೂರ್ಣವಾದ ಬಳಿಕ ಅಸ್ವಸ್ಥೆಯ ಆರೋಗ್ಯ ಸ್ಥಿತಿ ಬಗ್ಗೆ ಮಾಹಿತಿ ನೀಡುತ್ತೇವೆ.
    | ಮರಿರಾಜ್, ಸುಪರಿಡೆಂಟ್, ವಿಮ್ಸ್, ಬಳ್ಳಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts