More

    ಬಳ್ಳಾರಿ ಜಿಪಂ ಸದಸ್ಯ ಭರತ ರೆಡ್ಡಿ ಹೆಸರಲ್ಲಿ ನಕಲಿ ಫೇಸ್‌ಬುಕ್ ಖಾತೆ: ಹಣದ ಬೇಡಿಕೆ ಇಟ್ಟ ವ್ಯಕ್ತಿ ವಿರುದ್ಧ ಪ್ರಕರಣ ದಾಖಲು

    ಬಳ್ಳಾರಿ: ಉದ್ಯಮಿ, ಕೊರ್ಲಗುಂದಿ ಜಿಪಂ ಸದಸ್ಯ ನಾರಾ ಭರತರೆಡ್ಡಿ ಹೆಸರಿನಡಿ ಫೇಸ್‌ಬುಕ್‌ನಲ್ಲಿ ನಕಲಿ ಖಾತೆ ರಚಿಸಿದ ವಂಚಕನೊಬ್ಬ, ಭರತರೆಡ್ಡಿಗೇ ಹಣದ ಬೇಡಿಕೆ ಇಟ್ಟ ವಿಷಯ ಬೆಳಕಿಗೆ ಬಂದಿದೆ.

    ‘ನಾರಾ ಭರತ್ ರೆಡ್ಡಿ ಯುವರ್ಸ್ ಫ್ರೆಂಡ್ಸ್ ಆನ್ ಫೇಸ್ ಬುಕ್ ಲೈವ್ ಇನ್ ಹೊಸಪೇಟೆ’ ಹೆಸರಿನಡಿ ಅನಾಮಧೇಯ ವ್ಯಕ್ತಿಯು ಫೇಸ್‌ಬುಕ್‌ನಲ್ಲಿ ನಕಲಿ ಖಾತೆ ತೆರೆದಿದ್ದು, ಖುದ್ದಾಗಿ ಭರತ ರೆಡ್ಡಿ ಅವರೊಂದಿಗೆ ಚಾಟಿಂಗ್ ವಾಡಿ ಹಣದ ಬೇಡಿಕೆ ಇಟ್ಟಿದ್ದಾನೆ. ಮೊದಲು ಭರತರೆಡ್ಡಿ ಕುಶಲೋಪರಿ ವಿಚಾರಿಸಿದ ಬಳಿಕ, ಸಂಬಂಧಿಕರನ್ನು ಆಸ್ಪತ್ರೆಗೆ ದಾಖಲಿಸಿದ್ದೇವೆ. ನನಗೆ ತುರ್ತಾಗಿ 13000 ರೂ. ಬೇಕಾಗಿದೆ. ಗೂಗಲ್ ಪೇ ಅಥವಾ ಫೋನ್ ಪೇ ಮಾಡುವಂತೆ ಕೋರಿದ್ದಾರೆ.

    ಆಗ ಭರತರೆಡ್ಡಿ, ಪೇಟಿಎಂ ನಂಬರ್ ಇದ್ದರೆ ಕಳಿಸಿ ಅಂತಾ ಹೇಳಿದಾಗ, ಅದನ್ನೂ ಕಳಿಸುತ್ತಾನೆ. ಸರ್ವರ್ ಬಿಜಿ ಇರೋದರಿಂದ ಹಣವನ್ನು ನಿಮ್ಮ ಕೈಗೆ ತಲುಪಿಸುವೆ ಅಥವಾ ನಿಮ್ಮ ಸಂಬಂಧಿಕರು ಯಾವ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ ಅಂತ ಹೇಳಿ ಅಲ್ಲಿಗೆ ಹಣ ತಲುಪಿಸುವುದಾಗಿ ತಿಳಿಸುತ್ತಾರೆ. ಅದಕ್ಕೆ ಅನಾಮಧೇಯ ವ್ಯಕ್ತಿಯಿಂದ ಪ್ರತಿಕ್ರಿಯೆ ಬಾರದ್ದರಿಂದ ಈ ಫೇಸ್‌ಬುಕ್ ಖಾತೆ ನಕಲಿ ಎಂದು ಖಚಿತಪಡಿಸಿಕೊಂಡಿದ್ದಾರೆ.

    ಈ ಬಗ್ಗೆ ಸೈಬರ್ ಕೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಜಿಪಂ ಸದಸ್ಯ ನಾರಾ ಭರತ್‌ರೆಡ್ಡಿ, ಯಾರೋ ಕಿಡಿಗೇಡಿಗಳು ನನ್ನ ಹೆಸರಿನಲ್ಲಿ ಫೇಸ್‌ಬುಕ್ ನಕಲಿ ಖಾತೆ ರಚಿಸಿ ಸಾರ್ವಜನಿಕರಿಂದ ಹಣ ಕೇಳುತ್ತಿದ್ದಾರೆ. ಈ ರೀತಿಯ ಮೆಸೇಜ್ ಬಂದರೆ ಯಾರು ಕಿವಿಗೊಡಬೇಡಿ ಎಂದು ಕೋರಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts