More

    ಈ ಯುವತಿ ತನ್ನ ತಾಯಿಯ ಚಿಕಿತ್ಸೆಗಾಗಿ ಸಚಿವರು, ಶಾಸಕರ ಗಮನ ಸೆಳೆದಿದ್ದು ಹೇಗೆ ನೋಡಿ…

    ಹಗರಿಬೊಮ್ಮನಹಳ್ಳಿ (ಬಳ್ಳಾರಿ): ಕಷ್ಟಕಾಲದಲ್ಲಿ ಸಾಮಾಜಿಕ ಜಾಲತಾಣಗಳ ಬಳಕೆಯೂ ಆಸರೆಯಾಗುತ್ತದೆ ಎಂಬ ಮಾತಿಗೆ ಈ ಘಟನೆ ಸಾಕ್ಷಿಯಾಗಿದೆ. ಸಂಕಷ್ಟದಲ್ಲಿದ್ದ ಯುವತಿಯೊಬ್ಬಳು ಟಿಕ್‌ಟಾಕ್ ಮೂಲಕ ತನ್ನ ಸಂಕಷ್ಟ ಹೇಳಿಕೊಂಡು, ಸರ್ಕಾರದಿಂದ ವೈದ್ಯಕೀಯ ನೆರವು ಪಡೆದುಕೊಂಡಿದ್ದಾರೆ.

    ಪಟ್ಟಣದ ನಿವಾಸಿ ಜ್ಯೋತಿ ಕಟ್ಟಿಮನಿ ಎಂಬುವವರೇ ಆ ಯುವತಿ. ತನ್ನ ತಾಯಿಯ ಅನಾರೋಗ್ಯದ ಬಗ್ಗೆ ಟಿಕ್‌ಟಾಕ್‌ನಲ್ಲಿ ಅಳಲು ತೋಡಿಕೊಂಡು, ಚಿಕಿತ್ಸೆಗೆ ನೆರವಾಗುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಕೋರಿದ್ದರು. ಕಣ್ಣೀರು ಹಾಕುತ್ತಲೇ ಮನವಿ ಮಾಡಿಕೊಂಡಿದ್ದ ಆಕೆ, 15 ದಿನಗಳ ಹಿಂದೆ ತಂದೆಯನ್ನು ಕಳೆದುಕೊಂಡಿದ್ದಾಗಿಯೂ ಅದರಲ್ಲಿ ಹೇಳಿಕೊಂಡಿದ್ದರು. ತಾಯಿ ಪಾರ್ಶ್ವವಾಯುವಿನಿಂದ ಬಳಲುತ್ತಿದ್ದು, ಚಿಕಿತ್ಸೆಗೆ ತೊಂದರೆಯಾಗಿ ಸಂಕಷ್ಟಕ್ಕೆ ಸಿಲುಕಿದ್ದಾಗಿ ತಿಳಿಸಿದ್ದರು. ತಾಯಿಯ ಚಿಕಿತ್ಸೆಗೆ ಸಹಕರಿಸಲು, ತನಗೆ ಉದ್ಯೋಗ ನೀಡುವಂತೆ ಮುಖ್ಯಮಂತ್ರಿಯನ್ನು ಕೋರಿದ್ದರು. ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿರುವ ತಾನು ಲಾಕ್‌ಡೌನ್ ಘೋಷಣೆಯಾಗಿದ್ದರಿಂದ ಸ್ವಗ್ರಾಮಕ್ಕೆ ಹಿಂದಿರುಗಿದ್ದಾಗಿ ಹೇಳಿಕೊಂಡಿದ್ದರು. ತಾಯಿಯ ಕಾಲಿಗೆ ಗ್ಯಾಂಗ್ರಿನ್ ಆಗಿದ್ದು, ಬೆರಳೊಂದನ್ನು ಕತ್ತರಿಸಲಾಗಿದೆ. ಒಂದೆಡೆ ಆರ್ಥಿಕ ಸಮಸ್ಯೆ, ಇನ್ನೊಂದೆಡೆ ಅನಾರೋಗ್ಯ. ಹೀಗಾಗಿ ತಾಯಿಯನ್ನು ಉಳಿಸಿಕೊಳ್ಳಲು ಸಹಾಯ ಮಾಡಬೇಕು ಎಂದು ಮನವಿ ಮಾಡಿದ್ದರು.

    ಟಿಕ್‌ಟಾಕ್‌ನಲ್ಲಿ ಈ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಯುವತಿಯ ಸಂಕಷ್ಟಕ್ಕೆ ಸ್ಥಳೀಯ ಶಾಸಕ ಭೀಮಾನಾಯ್ಕ ಸ್ಪಂದಿಸಿದರು. ತಹಸೀಲ್ದಾರ್ ಮತ್ತಿತರ ಅಧಿಕಾರಿಗಳನ್ನು ಕಳುಹಿಸಿ ಸ್ಥಳೀಯವಾಗಿ ಚಿಕಿತ್ಸೆಗೆ ಅನುಕೂಲ ಮಾಡಿಕೊಟ್ಟರು. ಅವರ ಮನೆಗೆ ಒಂದು ತಿಂಗಳಿಗಾಗುವಷ್ಟು ಆಹಾರ ಸಾಮಗ್ರಿಯನ್ನೂ ಒದಗಿಸಿದರು.

    ನಂತರ, ಅರಣ್ಯ ಸಚಿವ ಆನಂದ ಸಿಂಗ್ ಕೂಡ ಈಕೆಯ ಕಷ್ಟಕ್ಕೆ ಸ್ಪಂದಿಸಿದರು. ಯುವತಿಯ ತಾಯಿಗೆ ವಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕಲ್ಪಿಸಲು ಆದೇಶಿಸಿದರು. ಕೂಡಲೇ ಆಂಬುಲೆನ್ಸ್ ಮೂಲಕ ಜ್ಯೋತಿ ಅವರ ತಾಯಿಯನ್ನು ಬಳ್ಳಾರಿಯ ವಿಮ್ಸ್‌ಗೆ ಸೇರಿಸಲಾಯಿತು. ಕರೊನಾ ಲಾಕ್‌ಡೌನ್ ವೇಳೆಯಲ್ಲಿ ಸಾಮಾಜಿಕ ಜಾಲತಾಣವನ್ನು ಬಳಸಿಕೊಂಡು ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಲ್ಲಿ ಜ್ಯೋತಿ ಕಟ್ಟಿಮನಿ ಯಶಸ್ವಿಯಾಗಿದ್ದು ಹೀಗೆ.

    ಕರೊನಾ ಭೀತಿಯ ನಡುವೆಯೇ ಬಾಹ್ಯಾಕಾಶ ಸಂಪನ್ಮೂಲ ಖರೀದಿಗೆ ಆದೇಶ ಹೊರಡಿಸಿದವರು ಯಾರು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts