More

    ಬಾಬು ಜಗಜೀವನರಾಮ್ ಅಪ್ಪಟ ದೇಶಪ್ರೇಮಿ ಎಂದು ಬಣ್ಣಿಸಿದ ಶ್ರೀ ಕೃಷ್ಣದೇವರಾಯ ವಿವಿಯ ಕುಲಪತಿ ಪ್ರೊ.ಸಿದ್ದು.ಪಿ.ಆಲಗೂರ

    ಬಳ್ಳಾರಿ: ಬಾಬುಜಗಜೀವನರಾಮ್ ಅಪ್ಪಟ ದೇಶ ಪ್ರೇಮಿಗಳಾಗಿದ್ದು, ಅವರು ಸಾಮಾಜಿಕ ನ್ಯಾಯ ಮತ್ತು ಸಮಾನತೆಗಾಗಿ ಮಾಡಿದ ಹೋರಾಟ ಸದಾ ನೆನಪಿಸುವಂತಹದು ಎಂದು ವಿಜಯನಗರ ಶ್ರೀ ಕೃಷ್ಣದೇವರಾಯ ವಿವಿಯ ಕುಲಪತಿ ಪ್ರೊ.ಸಿದ್ದು.ಪಿ.ಆಲಗೂರ ನುಡಿದರು.

    ನಗರದ ವೀರಶೈವ ಮಹಾವಿದ್ಯಾಲಯದ ಸಮಾಜಶಾಸ ಇಭಾಗ ಹಾಗೂ ಕರ್ನಾಟಕ ರಾಜ್ಯಮುಕ್ತ ವಿಶ್ವವಿದ್ಯಾಲಯ ಆಶ್ರಯದಲ್ಲಿ ಬುಧವಾರ ಸಾಮಾಜಿಕ ಸಮಾನತೆ ಮತ್ತು ಸಾಮಾಜಿಕ ನ್ಯಾಯಕ್ಕೆ ಬಾಬುಜಗಜೀವನರಾಮ್ ಕೊಡುಗೆ ಕುರಿತು ಏರ್ಪಡಿಸಿದ್ದ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು. ಜಾತಿ ತಾರತಮ್ಯವಿಲ್ಲದೆ ಎಲ್ಲರನ್ನೂ ಒಂದೇ ರೀತಿಯಲ್ಲಿ ಕಾಣಬೇಕೆಂಬುದು ಅವರ ಬದುಕಿನ ಧ್ಯೇಯವಾಗಿತ್ತು. ಲಿಂಗ, ಜಾತಿ, ಮತ, ಜನಾಂಗೀಯ ಹಾಗೂ ವರ್ಗ ಭೇದಭಾವವಿಲ್ಲದೆ ಎಲ್ಲರಿಗೂ ಸಮಾನ ಅವಕಾಶ ಸಿಕ್ಕಾಗ ಸಾಮಾಜಿಕ ಸಮಾನತೆ ತರಲು ಸಾಧ್ಯ ಎಂದು ತಿಳಿಸಿದರು.

    ಮೈಸೂರಿನ ಸಂತ ಫಿಲೋಮಿನ ಪದವಿ ಕಾಲೇಜಿನ ಪ್ರಾಧ್ಯಾಪಕಿ ಶೀಲಾ ಖರೆ ಮಾತನಾಡಿ, ಬಾಬುಜಗಜೀವನರಾಮ್ ಒಬ್ಬ ಅಜಾತಶತ್ರುವಾಗಿದ್ದು, ನಾಡಿನ ಏಳಿಗೆಗಾಗಿ ನಿಸ್ವಾರ್ಥದಿಂದ ದುಡಿದ ಮೇಲ್ಪಂಕ್ತಿಯ ರಾಜಕಾರಣಿಯಾಗಿದ್ದರು ಎಂದು ಬಣ್ಣಿಸಿದರು.

    ಕಾಲೇಜಿನ ಪ್ರಾಚಾರ್ಯ ಡಾ.ಜಿ.ರಾಜಶೇಖರ, ವಿಎಸ್‌ಕೆ ವಿವಿಯ ಪ್ರಾಧ್ಯಾಪಕರಾದ ಡಾ.ವೀರೇಂದ್ರಕುಮಾರ, ಡಾ.ಮೋಹನ್‌ದಾಸ್, ಡಾ.ಶಾಂತಾನಾಯ್ಕ, ಆಡಳಿತ ಮಂಡಳಿ ಸದಸ್ಯ ಹಲಕುಂದಿ ಸತೀಶ್ ಕುಮಾರ, ರಾಜ್ಯಮುಕ್ತ ವಿವಿಯ ಬಾಬುಜಗಜೀವನ್‌ರಾಮ್ ಪೀಠದ ನಿರ್ದೇಶಕಿ ಡಾ.ಆರ್.ಶರಣಮ್ಮ, ಪದವಿ ಕಾಲೇಜಿನ ಪ್ರಾಧ್ಯಾಪಕರಾದ ಸಿದ್ದರಾಮ ಜಿ.ಮುಳಜೆ, ರಾಜಶ್ರೀ ಪಾಟೀಲ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts