More

    ದುಡುಕನ್ನು ಮೆಟ್ಟಿ ನಿಲ್ಲುವುದೇ ತಾಳ್ಮೆ, ಸಾಹಿತಿ ಡಾ.ಮಾನಕರಿ ಶ್ರೀನಿವಾಸಾಚಾರ್ಯ ವ್ಯಾಖ್ಯಾನ

    ಬಳ್ಳಾರಿ: ತಾಳ್ಮೆಯನ್ನು ಅಳವಡಿಸಿಕೊಂಡು ಸಾಗಿದರೆ ಬದುಕಿನಲ್ಲಿ ಬರುವ ಆತಂಕ, ಉದ್ವೇಗ, ಸಿಟ್ಟು ಮುಂತಾದವುಗಳನ್ನು ಸುಲಭವಾಗಿ ಗೆಲ್ಲಬಹುದು. ಬದುಕನ್ನು ನರಕವಾಗಿಸಿಕೊಳ್ಳದೆ ನೆಮ್ಮದಿಯಿಂದ ಬಾಳಬಹುದು ಎಂದು ಸಾಹಿತಿ ಡಾ.ಮಾನಕರಿ ಶ್ರೀನಿವಾಸಾಚಾರ್ಯ ವ್ಯಾಖ್ಯಾನಿಸಿದರು.

    ಶ್ರೀಮತಿ ಸರಳಾದೇವಿ ಸತೀಶ್ಚಂದ್ರ ಅಗರವಾಲ್ ಸರ್ಕಾರಿ ಪ್ರಥಮ ದರ್ಜೆ(ಸ್ವಾಯತ್ತ) ಕಾಲೇಜಿನಲ್ಲಿ ಕನ್ನಡ ವಿಭಾಗ ಶುಕ್ರವಾರ ಆಯೋಜಿಸಿದ್ದ ‘ತಾಳುವಿಕೆಗಿಂತನ್ಯ ತಪವು ಇಲ್ಲ’ ಎನ್ನುವ ವಿಷಯದ ಮೇಲೆ ವಿಶೇಷ ಉಪನ್ಯಾಸ ನೀಡಿದರು.

    ಆಧುನಿಕ ಕಾಲದಲ್ಲಿ ಪ್ರತಿಯೊಬ್ಬರೂ ಒತ್ತಡದ ಬದುಕಿಗೆ ಸಿಲುಕಿ ಶಾಂತಿಯನ್ನು ಕಳೆದುಕೊಂಡು ಹತಾಶರಾಗುತ್ತಿದ್ದಾರೆ. ಪ್ರತಿ ಗಳಿಗೆಯಲ್ಲೂ ತಾಳ್ಮೆಯಿಂದ ಇರಬೇಕು. ದಾಸ ಸಾಹಿತ್ಯದ ಕಣ್ಮಣಿಗಳಾದ ವಾದಿರಾಜರು ತಮ್ಮ ಕೀರ್ತನೆಗಳ ಮೂಲಕ ಅನುಭಾವ ಮತ್ತು ಲೋಕನೀತಿಗಳನ್ನು ಅರ್ಥಪೂರ್ಣವಾಗಿ ಅಭಿವ್ಯಕ್ತಿಸಿದ್ದಾರೆ. ದುಡುಕು, ಮಿಡುಕು, ಸಿಡುಕು ಮೊದಲಾದ ದೌರ್ಬಲ್ಯಗಳನ್ನು ಮೆಟ್ಟಿ ನಿಂತು, ಧೈರ್ಯದಿಂದ ನೈತಿಕ ಬಲದಿಂದ ಮೌಲಿಕ ಬದುಕನ್ನು ಕಟ್ಟಿಕೊಳ್ಳುವ ಮಾನಸಿಕ ಸಾಧನವೇ ತಾಳ್ಮೆ ಎಂದರು.

    ಪ್ರಾಚಾರ್ಯ ಡಾ.ಎಚ್.ಕೆ.ಮಂಜುನಾಥ್‌ರೆಡ್ಡಿ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಗುರಿಗಳನ್ನು ಸಾಧಿಸಲು, ಬದುಕನ್ನು ಸಾರ್ಥಕ ಪಡಿಸಿಕೊಳ್ಳಲು ತಾಳ್ಮೆಯ ಮೊರೆ ಹೋಗಬೇಕು ಎಂದರು. ಕನ್ನಡ ವಿಭಾಗದ ಮುಖ್ಯಸ್ಥ ಡಾ.ದಸ್ತಗೀರಸಾಬ್ ದಿನ್ನಿ ಮಾತನಾಡಿದರು. ಉಪನ್ಯಾಸಕ ಸತ್ಯಮೂರ್ತಿ, ಸಹ ಪ್ರಾಧ್ಯಾಪಕರಾದ ಡಾ.ಬಿ.ಜಿ.ಕಲಾವತಿ, ಪ್ರವೀಣ್ ಕುಮಾರ್ ಎಂ.ಎನ್. ಲಿಂಗಪ್ಪ, ಡಾ.ಜ್ಯೋತಿ ಅಣ್ಣಾರಾವ್, ಮಂಜುನಾಥ ಉಲವತ್ತಿ ಶೆಟ್ಟರ್, ಚೂಡಾಮಣಿ, ಡಾ.ಕೆ.ಬಸಪ್ಪ , ಮಹಾಂತೇಶ, ಹುಲುಕುಂಟೇಶ್ವರ, ಗೋವಿಂದ, ಮೇಘರಾಜ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts