More

    ‘ಬೆಲ್​ ಬಾಟಮ್​’ನಲ್ಲಿ ಅಕ್ಷಯ್​ ಕುಮಾರ್ ಹೀಗೆ ಕಾಣ್ತಾರೆ ನೋಡಿ …

    ಯಾವಾಗ ಬಾಲಿವುಡ್​ ನಟ ಅಕ್ಷಯ್​ ಕುಮಾರ್​, ‘ಬೆಲ್​ ಬಾಟಮ್​’ ಎಂಬ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ ಎಂಬ ಸುದ್ದಿಯಾಯಿತೋ, ಆಗಿನಿಂದಲೇ ಅದು ಕನ್ನಡದ ಅದೇ ಹೆಸರಿನ ಚಿತ್ರದ ರೀಮೇಕ್​ ಇರಬಹುದಾ ಎಂಬ ಚರ್ಚೆ ಶುರುವಾಯಿತು. ಚಿತ್ರತಂಡದವರು ಈ ವಿಷಯವನ್ನು ಅಲ್ಲಗೆಳೆದರೂ, ಕೆಲವರಿಗೆ ಈ ವಿಷಯವಾಗಿ ಅನುಮಾನ ಇದ್ದೇ ಇತ್ತು.

    ಇದನ್ನೂ ಓದಿ: WWE ಖ್ಯಾತಿಯ ಡ್ವೇನ್​ ಜಾನ್ಸನ್​ ಕುಟುಂಬಕ್ಕೆ ಕರೊನಾ!

    ಈಗ ಚಿತ್ರದ ಫಸ್ಟ್​ ಲುಕ್​ ಬಿಡುಗಡೆಯಾಗಿದ್ದು, ಇದೊಂದು ಸ್ಪೈ ಥ್ರಿಲ್ಲರ್​ ಎಂದು ಹೇಳಲಾಗುತ್ತಿದೆ. 80ರ ದಶಕದಲ್ಲಿ ನಡೆದ ನೈಜ ಘಟನೆಯನ್ನಾಧರಿಸಿ ಈ ಚಿತ್ರವನ್ನು ರೂಪಿಸಲಾಗಿದ್ದು, ರೆಟ್ರೋ ಸ್ಟೈಲ್​ನಲ್ಲಿ ಈ ಚಿತ್ರವನ್ನು ಸೆರೆಹಿಡಿಯಲಾಗಿದೆ.

    ‘ಬೆಲ್​ ಬಾಟಮ್​’ ಚಿತ್ರಕ್ಕಾಗಿ ಅಕ್ಷಯ್​ ಕುಮಾರ್​ ಅವರು ಸ್ಕಾಟ್​​ಲ್ಯಾಂಡ್​ನಲ್ಲಿ ಚಿತ್ರೀಕರಣದಲ್ಲಿ ನಿರತರಾಗಿದ್ದು, ಅಲ್ಲಿಂದ ಒಂದಿಷ್ಟು ಫೋಟೋಗಳನ್ನು ಹಂಚಿಕೊಳ್ಳಲಾಗಿದೆ. ಈಗಾಗಲೇ ಈ ಫೋಟೋಗಳು ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿವೆ.

    ಈ ಚಿತ್ರವನ್ನು ಸಂಪೂರ್ಣವಾಗಿ ಸ್ಕಾಟ್​ಲ್ಯಾಂಡ್​ನಲ್ಲೇ ಚಿತ್ರೀಕರಿಸುವುದಕ್ಕೆ ಚಿತ್ರತಂಡ ಮುಂದಾಗಿದ್ದು, ಕಳೆದ ತಿಂಗಳು ಚಿತ್ರತಂಡದ ಸದಸ್ಯರೆಲ್ಲಾ ಸ್ಕಾಟ್​ಲ್ಯಾಂಡ್​ಗೆ ವಿಶೇಷ ವಿಮಾನದಲ್ಲಿ ಪ್ರಯಾಣ ಬೆಳೆಸಿದ್ದಾರೆ.

    ಇದನ್ನೂ ಓದಿ: ‘ನಶೆ’ಯ ನಗ್ನ ಸತ್ಯ; ಸುದ್ದಿಗೋಷ್ಠಿಯಲ್ಲಿ ​ಸ್ಫೋಟಕ ಮಾಹಿತಿ ನೀಡಿದ್ರು ಪೊಲೀಸ್​ ಕಮಿಷನರ್

    ರಂಜಿತ್​ ರಿವಾರಿ ನಿರ್ದೇಶನದ ಈ ಚಿತ್ರದಲ್ಲಿ ಅಕ್ಷಯ್​ ಕುಮಾರ್​ ಜತೆಗೆ ವಾಣಿ ಕಪೂರ್, ಹ್ಯೂಮಾ ಖುರೇಷಿ, ಲಾರಾ ದತ್ತಾ ಮುಂತಾದವರು ಅಭಿನಯಿಸುತ್ತಿದ್ದು, ಈಗಾಗಲೇ ಚಿತ್ರದ ಹಲವು ಪ್ರಮುಖ ದೃಶ್ಯಗಳನ್ನು ಸ್ಕಾಟ್​ಲ್ಯಾಂಡ್​ನ ಸುಂದರ ಪರಿಸರದಲ್ಲಿ ಸೆರೆಹಿಡಿಯಲಾಗಿದೆ.

    ಸುಳ್ಳುಸುದ್ದಿ ಹಬ್ಬಿಸುವವರ ಮೇಲೆ ಕಾನೂನು ಕ್ರಮ … ಶರ್ಮಿಳಾ ಎಚ್ಚರಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts