More

    ನಂಬಿಕೆಗೆ ಅರಿಹಂತ ಸಂಸ್ಥೆ ಹೆಸರುವಾಸಿ

    ಬೋರಗಾಂವ: ಸಹಕಾರಿ ಹಿರಿಯ ಧುರೀಣ ರಾವಸಾಹೇಬ ಪಾಟೀಲ ಸ್ಥಾಪಿಸಿದ ಬೋರಗಾಂವ ಶ್ರೀ ಅರಿಹಂತ ಕೋ-ಆಪ್ ಕ್ರೆಡಿಟ್ ಸೊಸೈಟಿ ಮಹಾರಾಷ್ಟ್ರದ ಜೈಸಿಂಗಪುರದಲ್ಲಿ ಶಾಖೆ ವಿಸ್ತರಿಸಿಕೊಳ್ಳುವ ಮೂಲಕ ಸಹಕಾರಿ ಕ್ಷೇತ್ರದಲ್ಲಿ ತನ್ನದೆ ಪ್ರಾಮುಖ್ಯ ಗಳಿಸಿದೆ ಎಂದು ಶಾಸಕ ರಾಜೇಂದ್ರ ಪಾಟೀಲ ಯಡ್ರಾವಕರ ಹೇಳಿದರು.

    ಸಮೀಪದ ಜೈಸಿಂಗಪುರದಲ್ಲಿ ಬುಧವಾರ ಬೋರಗಾಂವ ಅರಿಹಂತ್ ಸೊಸೈಟಿ (ಬಹುರಾಜ್ಯ) ಸಂಸ್ಥೆಯ 57ನೇ ಶಾಖೆ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದರು. ಅರಿಹಂತ ಸೊಸೈಟಿ ನಂಬಿಕೆ, ಪಾರದರ್ಶಕತೆ ಮತ್ತು ಪ್ರಾಮಾಣಿಕತೆಗೆ ವಿಶೇಷ ಪ್ರಾಮುಖ್ಯ ನೀಡಿದೆ. ಜೈಸಿಂಗಪುರದಲ್ಲಿ ಶಾಖೆ ತೆರೆಯುವ ಮೂಲಕ ಸಹಕಾರಿ ಕ್ಷೇತ್ರದ ಬಲವರ್ಧನೆಗೆ ಮುಂದಾಗಿದೆ ಎಂದರು.

    ಯುವ ಮುಖಂಡ ಉತ್ತಮ ಪಾಟೀಲ ಮಾತನಾಡಿ, ನಂಬಿಕೆಯಿದ್ದರೆ ಸಹಕಾರಿ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಲು ಸಾಧ್ಯ. ಈ ನಂಬಿಕೆಯನ್ನು ಅರಿಹಂತ ಸಂಸ್ಥೆ 33 ವರ್ಷಗಳಿಂದ ಉಳಿಸಿಕೊಂಡು ಬಂದಿದೆ. ಜಯಸಿಂಗಪುರ ನಗರದ ಆರ್ಥಿಕತೆ ಬಲಪಡಿಸುವ ಉದ್ದೇಶದಿಂದ ಶಾಖೆ ಪ್ರಾರಂಭಿಸಲಾಗಿದೆ ಎಂದರು. ಸ್ವಸ್ತಿಶ್ರೀ ಜಿನಸೇನ ಭಟ್ಟಾರಕ ಪಟ್ಟಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿಕೊಂಡಿದ್ದರು. ಸಂಸ್ಥೆಯ ಸಂಸ್ಥಾಪಕ ರಾವಸಾಹೇಬ ಪಾಟೀಲ, ದತ್ತ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಗಣಪತರಾವ ಪಾಟೀಲ ಉದ್ಘಾಟಿಸಿದರು.

    ಜೈಸಿಂಗಪುರ ನಗರಸಭೆ ಮಾಜಿ ಅಧ್ಯಕ್ಷ ಸಂಜಯ ಪಾಟೀಲ, ಅಮರಸಿಂಗ ಪಾಟೀಲ, ಕಾರ್ಯಾಧ್ಯಕ್ಷ ಅಭಿನಂದನ ಪಾಟೀಲ, ಪಥ್ವಿರಾಜ ಪಾಟೀಲ, ವಿನೋದ ಘೋಡಾವತ, ರಾಜೇಂದ್ರ ನಾಂದ್ರೇಕರ, ದಾದಾ ಪಾಟೀಲ, ರಾಜು ಝೆಲೆ, ವಿಜಯರಾಜ ಮಗದುಮ್ಮ, ವಿನಾಯಕ ಭೋಸಲೆ, ಸಿ.ಬಿ. ಪಾಟೀಲ, ಧನಗೊಂಡ ಪಾಟೀಲ, ವಿನೋದ ಚೋರ್ಡಿಯಾ, ರಾಕೇಶ ಘೋಡಾವತ, ಸುನೀಲ ಪಾಟೀಲ, ರಾಜು ಚೌಧರಿ, ಮಿಲಿಂದ ಭಿಡೆ, ನಿಕೇಶ ಗಿಡವಾನಿ, ವರ್ಧಮಾನ ಪಾಟೀಲ, ಸಂಸ್ಥೆಯ ಸಿಇಒ ಅಶೋಕ ಬಂಕಾಪುರೆ, ರಾಜಕುಮಾರ್ ಖಾವಟೆ, ಶಾಖಾಧಿಕಾರಿ ಶಾಂತಿನಾಥ ತೇರದಾಳೆ ಇತರರಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts