More

    ನಕಲಿ ದಾಖಲೆ ಸೃಷ್ಟಿಸಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ಗಿಟ್ಟಿಸಿಕೊಂಡ 11 ಜನರ ವಿರುದ್ಧ ಎಫ್‌ಐಆರ್

    ಹಾನಗಲ್ಲ: ತಾಲೂಕಿನ ಹೇರೂರ ಗ್ರಾಮದ ಬಸವೇಶ್ವರ ಲಿಬರಲ್ ಎಜ್ಯುಕೇಶನ್ ಸೊಸೈಟಿ ಹೆಸರಿನಲ್ಲಿ ಅಧ್ಯಕ್ಷನ ನಕಲಿ ಸಹಿ ಬಳಸಿ ಹೊಸ ಆಡಳಿತ ಮಂಡಳಿ ರಚನೆ ಮಾಡಿಕೊಂಡು ಮೋಸ ಮಾಡಿರುವ ಆರೋಪದ ಕುರಿತು ಆಡೂರ ಪೊಲೀಸ್ ಠಾಣೆಯಲ್ಲಿ 11 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.
    ಗ್ರಾಮದ ಪ್ರಕಾಶ ಬಾಗಣ್ಣನವರ, ಪ್ರಕಾಶ ಬಣಕಾರ, ಮಲ್ಲಿಕಾರ್ಜುನ ಬಾಗಣ್ಣನವರ, ಹನುಮಂತಪ್ಪ ಕಳ್ಳಿ, ಬಸವರಾಜ ವೆಂಕಟಾಪುರ, ಶಿವಪುತ್ರಪ್ಪ ಪೂಜಾರ, ಶಿವನಗೌಡ ಪಾಟೀಲ, ಜಗದೀಶ ಗುಳಪಣ್ಣನವರ, ಬಸವರಾಜ ಬಾಗಣ್ಣನವರ, ರಮೇಶ ಹಾದಿಮನಿ, ಅಶೋಕ ಬಡಿಗೇರಿ ಸೇರಿ ಒಟ್ಟು 11 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.
    ಈ ಕುರಿತು ಸಂಸ್ಥೆಯ ಕಾರ್ಯದರ್ಶಿ ಈಶ್ವರಾಧ್ಯ ಸಂಗಯ್ಯ ಹಿರೇಮಠ (62) ಪೊಲೀಸರಿಗೆ ದೂರು ನೀಡಿದ್ದಾರೆ. ಆರೋಪಿತರು ನಕಲಿ ದಾಖಲೆ ಸೃಷ್ಟಿಸಿ ನಕಲಿ ಸಹಿ ಮಾಡಿ ಸಂಸ್ಥೆಯ ಆಡಳಿತ ಮಂಡಳಿಯ ಈ ಹಿಂದಿನ ಅಧ್ಯಕ್ಷರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅಲ್ಲದೆ ಈ ಬಗ್ಗೆ ಜಿಲ್ಲಾ ಸಂಘಗಳ ನೋಂದಣಾಧಿಕಾರಿಗಳ ಕಚೇರಿಯಲ್ಲಿ ವಾರ್ಷಿಕ ಮಹಾಸಭೆ ಆಗಿದೆ ಎಂದು ವಾರ್ಷಿಕ ಸಭೆಯ ನೋಟಿಸ್‌ಅನ್ನು ಸೃಷ್ಠಿಸಿದ್ದಾರೆ.
    ನಂತರ 1ನೇ ಆರೋಪಿ ಪ್ರಕಾಶ ಬಾಗಣ್ಣನವರ ಅಧ್ಯಕ್ಷ, 2ನೇ ಆರೋಪಿ ಉಪಾಧ್ಯಕ್ಷ ಹಾಗೂ ಉಳಿದವರು ಸದಸ್ಯರು ಎಂದು ತಾವೇ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ. ಇವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಒತ್ತಾಯಿಸಿದ್ದಾರೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts