More

    ಪೊಲೀಸರ ವಿರೋಧದ ನಡುವೆಯೂ ಬೆಳಗಾವಿ ಪಾಲಿಕೆ ಮುಂಭಾಗ ಹಾರಿತು ನಾಡಧ್ವಜ!

    ಬೆಳಗಾವಿ: ಇಲ್ಲಿನ ಪಾಲಿಕೆ ಮುಂಭಾಗ ಕನ್ನಡಿಗರು ಧ್ವಜಸ್ತಂಭ ನೆಟ್ಟು ನಾಡಧ್ವಜ ಹಾರಿಸಿದ್ದು, 15 ವರ್ಷದ ವರ್ಷ ಹಿಂದೆ ಕನ್ನಡ ಹೋರಾಟಗಾರ್ತಿ ಕಸ್ತೂರಿ ಭಾವಿ ಮಾಡಿ ಪ್ರತಿಜ್ಞೆಯಂತೆ ಇಂದು ಕಾಲಿಗೆ ಚಪ್ಪಲಿ ಧರಿಸಿದರು.

    ಮಹಾನಗರ ಪಾಲಿಕೆ ಕಟ್ಟಡದ ಮೇಲೆ ಮತ್ತು ಆವರಣದಲ್ಲಿ ಕನ್ನಡ ಧ್ವಜ ಹಾರಿಸಬೇಕು ಎಂದು 1998 ರಿಂದ ಕನ್ನಡ ಸಂಘಟನೆಗಳ ಕಾರ್ಯಕರ್ತರು ಹೋರಾಟ ನಡೆಸುತ್ತಿದ್ದಾರೆ. ಆದರೆ, ಪಾಲಿಕೆ ಚುಕ್ಕಾಣಿ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಹಿಡಿತದಲ್ಲಿರುವ ಕಾರಣ ಅದು ಸಾಧ್ಯವಾಗಿರಲಿಲ್ಲ. 2018ರಿಂದ ಪಾಲಿಕೆಯು ಆಡಳಿತಾಧಿಕಾರಿ ಹಿಡಿತದಲ್ಲಿ ಮುನ್ನಡೆಯುತ್ತಿದೆ. ಇದೇ ಸಂದರ್ಭ ಬಳಸಿಕೊಂಡ ಹೋರಾಟಗಾರರು ಸೋಮವಾರ ಏಕಾಏಕಿ ಧ್ವಜಸ್ತಂಭ ನೆಟ್ಟು, ನಾಡಧ್ವಜ ಹಾರಿಸಿದರು.

    ಮರಾಠ ಪ್ರಾಧಿಕಾರ ಸ್ಥಾಪನೆ ಬಳಿಕ ಎದ್ದಿದ್ದ ವಿವಾದದ ಕಿಚ್ಚು ತಣ್ಣಗಾಗುತ್ತಿದ್ದಂತೆ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ಪಾಲಿಕೆ ಮುಂಭಾಗದಲ್ಲಿ ಧ್ವಜಸ್ತಂಭ ನೆಟ್ಟು ನಾಡಧ್ವಜ ಹಾರಿಸಿರುವುದು ವಿವಾದಕ್ಕೀಡಾಗಿದೆ. ಧ್ವಜಸ್ತಂಭ ತೆರವುಗೊಳಿಸಲು ಆಗಮಿಸಿದ ಪೊಲೀಸರು ಹಾಗೂ ಹೋರಾಟಗಾರರ ಮಧ್ಯೆ ವಾಗ್ವಾದ ನಡೆಯಿತು. ಇದನ್ನೂ ಓದಿರಿ ಎಟಿಎಂನಲ್ಲಿ ಕನ್ನಡ ಮಾಯ

    ಕನ್ನಡ ನಾಡಿನ ಮಹಾನಗರ ಪಾಲಿಕೆ ಆವರಣದಲ್ಲಿ ನಾಡಧ್ವಜ ಹಾರಿಸಲು ಯಾರ ಅಪ್ಪಣೆ ಬೇಕಿಲ್ಲ. ಧ್ವಜ ತೆರವುಗೊಳಿಸಲು ಮುಂದಾದರೆ ಉಗ್ರ ಹೋರಾಟ ನಡೆಸಲಾಗುವುದು. ನಾವು ಪ್ರಾಣ ಕೊಡಲು ಕೂಡ ಸಿದ್ಧ ಎಂದು ಹೋರಾಟಗಾರರಾದ ಶ್ರೀನಿವಾಸ ತಾಳೂರಕರ್, ಕಸ್ತೂರಿ ಭಾವಿ ಎಚ್ಚರಿಕೆ ನೀಡಿದರು.

    ಈಗಾಗಲೇ ಸುವರ್ಣ ಸೌಧ ಮುಂಭಾಗ, ನಗರದ ಪ್ರಮುಖ ವೃತ್ತಗಳಲ್ಲಿ ನಾಡಧ್ವಜ ಅಳವಡಿಸಲಾಗಿದೆ. ಅದಕ್ಕೆ ಯಾರೂ ವಿರೋಧ ವ್ಯಕ್ತಪಡಿಸಿಲ್ಲ. ಆದರೆ, ಮಹಾನಗರ ಪಾಲಿಕೆ ಮುಂಭಾಗದಲ್ಲಿ ಧ್ವಜ ಅಳವಡಿಸಲು ಪೊಲೀಸ್ ಮತ್ತು ಪಾಲಿಕೆ ಅಧಿಕಾರಿಗಳೇ ಅಡ್ಡಿಪಡಿಸುತ್ತಿದ್ದಾರೆ. ಕೆಲ ಹಾಲಿ ಮತ್ತು ಮಾಜಿ ಶಾಸಕರು ರಾಜಕೀಯ ಲಾಭಕ್ಕಾಗಿ ಮರಾಠಿಗರನ್ನು ಓಲೈಸುವ ಕೆಲಸ ಮಾಡುತ್ತಿದ್ದಾರೆ. ಇದೀಗ ನಾಡಧ್ವಜ ತೆರವುಗೊಳಿಸಲು ಪರೋಕ್ಷವಾಗಿ ಪ್ರಯತ್ನಿಸುತ್ತಿದ್ದಾರೆ ಎಂದು ಹೋರಾಟಗಾರರು ದೂರಿದ್ದಾರೆ. ಇದನ್ನೂ ಓದಿರಿ ಯಾವ ಜಯಂತಿನ್ಲಾ? ಹನುಮ ಹುಟ್ಟಿದ ತಾರೀಖು‌‌ ನಿನಗೆ ಗೊತ್ತಾ? ಸುಮ್ನೆ ಚಿಕನ್​ ತಿನ್ಲಾ: ಸಿದ್ದರಾಮಯ್ಯ

    ಪೊಲೀಸರ ವಿರೋಧದ ನಡುವೆಯೂ ಬೆಳಗಾವಿ ಪಾಲಿಕೆ ಮುಂಭಾಗ ಹಾರಿತು ನಾಡಧ್ವಜ!ಬೆಳಗಾವಿ ಪ್ರಾದೇಶಿಕ ಆಯುಕ್ತ ಕಚೇರಿ ಮತ್ತು ಮಹಾನಗರ ಪಾಲಿಕೆ ಕಚೇರಿ ಮುಂಭಾಗದಲ್ಲಿ ನಾಡಧ್ವಜ ಹಾರುವವರೆಗೂ ಚಪ್ಪಲಿ ಮೆಟ್ಟುವುದಿಲ್ಲ ಎಂದು 15 ವರ್ಷದ ಹಿಂದೆ ಕನ್ನಡ ಹೋರಾಟಗಾರ್ತಿ ಕಸ್ತೂರಿ ಭಾವಿ ಪ್ರತಿಜ್ಞೆ ತೊಟ್ಟಿದ್ದರು. ಈಗಾಗಲೇ ಬೆಳಗಾವಿ ಪ್ರಾದೇಶಿಕ ಆಯುಕ್ತ ಮುಂಭಾಗದಲ್ಲಿ ನಾಡಧ್ವಜ ನೆಡಲಾಗಿದೆ. ಸೋಮವಾರ ಮಹಾನಗರ ಪಾಲಿಕೆ ಕಚೇರಿ ಮುಂಭಾಗದಲ್ಲಿ ಧ್ವಜ ಹಾರಿಸಿದ ಬಳಿಕ ಕಸ್ತೂರಿ ಭಾವಿ ಚಪ್ಪಲಿ ಧರಿಸಿದರು.

    ಈಗಾಗಲೇ ಸುವರ್ಣ ಸೌಧ ಮುಂಭಾಗ, ನಗರದ ಪ್ರಮುಖ ವೃತ್ತಗಳಲ್ಲಿ ನಾಡಧ್ವಜ ಅಳವಡಿಸಲಾಗಿದೆ. ಅದಕ್ಕೆ ಯಾರೂ ವಿರೋಧ ವ್ಯಕ್ತಪಡಿಸಿಲ್ಲ. ಆದರೆ, ಮಹಾನಗರ ಪಾಲಿಕೆ ಮುಂಭಾಗದಲ್ಲಿ ಧ್ವಜ ಅಳವಡಿಸಲು ಪೊಲೀಸ್ ಮತ್ತು ಪಾಲಿಕೆ ಅಧಿಕಾರಿಗಳೇ ಅಡ್ಡಿಪಡಿಸುತ್ತಿದ್ದಾರೆ. ಕೆಲ ಹಾಲಿ ಮತ್ತು ಮಾಜಿ ಶಾಸಕರು ತಮ್ಮ ರಾಜಕೀಯ ಲಾಭಕ್ಕಾಗಿ ಮರಾಠಿಗರನ್ನು ಓಲೈಸುವ ಕೆಲಸ ಮಾಡುತ್ತಿದ್ದಾರೆ. ಇದೀಗ ನಾಡಧ್ವಜ ತೆರವುಗೊಳಿಸಲು ಪರೋಕ್ಷವಾಗಿ ಪ್ರಯತ್ನಿಸುತ್ತಿದ್ದಾರೆ ಎಂದು ಹೋರಾಟಗಾರರು ದೂರಿದ್ದಾರೆ.

    ಯುವಕನೊಂದಿಗೆ ಹೊಂಡಕ್ಕೆ ಜಿಗಿದ ಹೋರಿ ಅಭಿಮಾನಿಗಳ ಎದುರಲ್ಲೇ ಪ್ರಾಣಬಿಟ್ಟಿತು…

    ರಾತ್ರಿಗಿಂತ ಹಗಲಿನಲ್ಲೇ ಕಾಂಡಂ ಮಾರಾಟ ಜಾಸ್ತಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts