More

    ಬೆಲೆ ಸಿಗದೆ ಬೆಳೆಗಾರನಿಂದಲೇ 2 ಎಕರೆಯಲ್ಲಿ ಬೆಳೆದಿದ್ದ ಹಿಪ್ಪುನೇರಳೆ ನಾಶ

    ಚನ್ನಪಟ್ಟಣ: ತಾಲೂಕಿನ ಅಂಕುಶನಹಳ್ಳಿ ರೈತನೊಬ್ಬ ರೇಷ್ಮೆಬೆಳೆಗೆ ಸೂಕ್ತ ಬೆಲೆ ಸಿಗುತ್ತಿಲ್ಲ ಎಂದು ನೊಂದು 2 ಎಕರೆಯಲ್ಲಿ ಬೆಳೆದಿದ್ದ ಹಿಪ್ಪುನೇರಳೆ ಬೆಳೆ ನಾಶಮಾಡಿದ್ದಾನೆ.

    ರೇಷ್ಮೆ ಬೆಳೆದು ಬದುಕು ಕಟ್ಟಿಕೊಳ್ಳುವ ಕನಸು ಕಂಡಿದ್ದ ಗ್ರಾಮದ ಯುವರೈತ ಸುರೇಶ್ 4 ಎಕರೆ ಜಮೀನಿನಲ್ಲಿ ಹಿಪ್ಪುನೇರಳೆ ಬೆಳೆಯುತ್ತಿದ್ದರು. ಆದರೆ, ಕಳೆದ ನಾಲ್ಕು ಬೆಳೆಗಳು ನಿರಂತರವಾಗಿ ನಷ್ಟವಾದ ಹಿನ್ನೆಲೆಯಲ್ಲಿ ಹಾಗೂ ಕರೊನಾ ಹಿನ್ನೆಲೆಯಲ್ಲಿ ರೇಷ್ಮೆಬೆಲೆ ಇಳಿಮುಖವಾಗಿರುವುದು. ಮುಂದಿನ ದಿನದಲ್ಲೂ ರೇಷ್ಮೆಗೆ ಮಾರುಕಟ್ಟೆ ಇರುವುದಿಲ್ಲ ಎಂಬ ಆತಂಕಕ್ಕೆ ಒಳಗಾದ ಈ ರೈತ, ತಾನು ಕಷ್ಟಪಟ್ಟು ಬೆಳೆಸಿದ ಬೆಳೆಯನ್ನು ಮಂಗಳವಾರ ನಾಶಪಡಿಸಿದ್ದಾನೆ.

    ಪತ್ರಿಕೆ ಜತೆ ಮಾತನಾಡಿದ ಸುರೇಶ್, ಕಳೆದ ನಾಲ್ಕು ಬೆಳೆಗಳು ನಷ್ಟವಾಗಿವೆೆ. ಪ್ರತಿ ಬೆಳೆಗೆ 20 ಸಾವಿರ ರೂ. ಖರ್ಚಾಗಿದೆ. ಇದುವರೆಗೆ 80 ಸಾವಿರ ರೂ. ನಷ್ಟವಾಗಿದೆ. ಕಷ್ಟಪಟ್ಟು ಬೆಳೆದ ಬೆಳೆ ಕೈಸೇರದಂತಾಗಿದೆ. ಲಾಕ್‌ಡೌನ್ ಮುಂದುವರಿದರೆ ರೇಷ್ಮೆ ಬೆಲೆ ಇನ್ನಷ್ಟು ಕುಸಿಯಲಿದೆ. ಕೇವಲ ರೇಷ್ಮೆ ಅಲ್ಲದೆ ಬಾಳೆ, ಮಾವು ಬೆಳೆಯಲ್ಲೂ ತೀವ್ರ ಆರ್ಥಿಕ ನಷ್ಟ ಅನುಭವಿಸಿದ್ದೇನೆ. ರೇಷ್ಮೆಬೆಳೆಯನ್ನೇ ನಂಬಿದರೆ ಇನ್ನಷ್ಟು ಸಂಕಷ್ಟಕ್ಕೆ ಸಿಲುಕಬೇಕಾಗುತ್ತದೆ ಎಂಬ ಆತಂಕದಲ್ಲಿ ಬೆಳೆ ನಾಶಪಡಿಸಿದ್ದೇನೆ. ಕಷ್ಟಪಟ್ಟು ಬೆಳೆದ ಬೆಳೆ ನಾಶಪಡಿಸಲು ಹೊಟ್ಟೆಗೆ ಬೆಂಕಿ ಬಿದ್ದಂತಾಗುತ್ತದೆ. ಆದರೂ ವಿಧಿಯಿಲ್ಲದೆ ಇಂದು ಎರಡು ಎಕರೆ ಬೆಳೆ ಕಿತ್ತುಹಾಕಿದ್ದೇನೆ. ನಾಳೆ ಮಿಕ್ಕ 2 ಎಕರೆ ಕೀಳಲಿದ್ದೇನೆ ಎಂದು ತಿಳಿಸಿದರು. ರೇಷ್ಮೆ, ಮಾವು, ಬಾಳೆ ಬೆಳೆಗಳನ್ನು ನಂಬಿ ಬ್ಯಾಂಕ್‌ನಲ್ಲಿ 7 ಲಕ್ಷ ರೂ. ಸಾಲ ಮಾಡಿದ್ದೇನೆ. ಮುಂದೆ ಏನು ಮಾಡುವುದು ಎಂದು ದಿಕ್ಕು ತೋಚುತ್ತಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts