More

    ಬೆಳಗಾವಿ ಯೋಧನ ವಿರುದ್ಧದ ಕೇಸ್ ಹಿಂತೆಗೆದುಕೊಳ್ಳುತ್ತಾ ರಾಜ್ಯ ಪೊಲೀಸ್ ಇಲಾಖೆ?

    ನವದೆಹಲಿ/ಬೆಂಗಳೂರು: ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯ ಸಿಆರ್‌ಪಿಎ್ ಕೋಬ್ರಾ ಕಮಾಂಡೋ ಸಚಿನ್ ಸುನೀಲ್ ಸಾವಂತ್ ಅವರ ಮೇಲೆ ಪೊಲೀಸರು ಹಲ್ಲೆ ನಡೆಸಿ ಕಬ್ಬಿಣದ ಸರಪಳಿಯಿಂದ ಕಟ್ಟಿ ಹಾಕಿದ ಪ್ರಕರಣಕ್ಕೆ ಮಂಗಳ ಹಾಡಲು ರಾಜ್ಯ ಪೊಲೀಸ್ ನಿರ್ಧರಿಸಿದೆಯೇ?

    ಹೌದು ಎನ್ನುತ್ತವೆ ವಿಶ್ವಸನೀಯ ಮೂಲಗಳು. ಸಚಿನ್ ವಿರುದ್ಧ ದಾಖಲಿಸಲಾಗಿರುವ ಕೇಸನ್ನು ಹಿಂತೆಗೆದುಕೊಂಡು ಸಿಆರ್‌ಪಿಎಫ್ ಮತ್ತು ಪೊಲೀಸ್ ಇಲಾಖೆ ನಡುವೆ ಉಂಟಾಗಿರುವ ತ್ವೇಷಮಯ ಪರಿಸ್ಥಿತಿಯನ್ನು ತಿಳಿಗೊಳಿಸಲು ಪೊಲೀಸರು ತೀರ್ಮಾನಿಸಿದ್ದಾರೆ ಸುದ್ದಿಸಂಸ್ಥೆಗಳು ವರದಿ ಮಾಡಿವೆ.

    ಕೇಸ್ ಹಿಂತೆಗೆದುಕೊಳ್ಳುವ ಸಂಬಂಧ ಈಗಾಗಲೇ ಸಿಆರ್‌ಪಿಎಫ್ ಅಧಿಕಾರಿಗಳಿಗೆ ಕರ್ನಾಟಕದ ಪೊಲೀಸ್ ಮಹಾ ನಿರ್ದೇಶಕರೇ ಭರವಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

    ಈ ಮಧ್ಯೆ, ಪ್ರಕರಣದ ಸಂಬಂಧ ಸ್ವಯಂಪ್ರೇರಿತ ಪಿಐಎಲ್ ದಾಖಲಿಸಿಕೊಂಡು ವಿಚಾರಣೆ ನಡೆಸುವಂತೆ ಹೈಕೋರ್ಟ್‌ಗೆ ವಕೀಲ ಜಿ.ಆರ್. ಮೋಹನ್ ಇ-ಮೇಲ್ ಮೂಲಕ ಮನವಿ ಮಾಡಿದ್ದಾರೆ.

    ‘‘ಯೋಧ ಸಚಿನ್ ವಿರುದ್ಧ ಸದಲಗ ಠಾಣೆ ಪೊಲೀಸರು ಐಪಿಸಿ ಸೆಕ್ಷನ್ 323 ಮತ್ತು 345 ಅಡಿಯಲ್ಲಿ ಎಫ್​ಐಆರ್ ದಾಖಲಿಸಿರುವುದನ್ನು ಪ್ರಶ್ನಿಸುತ್ತಿಲ್ಲ. ಆದರೆ, ಯೋಧನ ಕೈ-ಕಾಲುಗಳನ್ನು ಕಬ್ಬಿಣದ ಸರಪಳಿಯಿಂದ ಕಟ್ಟಿ ಹಾಕಿ ನೆಲದ ಮೇಲೆ ಕೂರಿಸಿದ ಪೊಲೀಸರ ನಡೆ ಆಕ್ಷೇಪಾರ್ಹ’’ ಎಂದು ದೂರಿದ್ದಾರೆ.

    ಪ್ರೇಮ್ ಕುಮಾರ್ ಶುಕ್ಲಾ ಹಾಗೂ ದೆಹಲಿ ಸರ್ಕಾರ ನಡುವಿನ ಪ್ರಕರಣ, ಸಿಟಿಜನ್ ಫಾರ್ ಡೆಮಾಕ್ರಸಿ ಹಾಗೂ ಅಸ್ಸಾಂ ಸರ್ಕಾರದ ನಡುವಿನ ಪ್ರಕರಣದಲ್ಲಿ ಕೈಕೋಳ ತೊಡಗಿಸುವ ವಿಚಾರವಾಗಿ ಸುಪ್ರೀಂಕೋರ್ಟ್ ನೀಡಿರುವ ಆದೇಶವನ್ನು ಸದಲಗ ಪೊಲೀಸರು ಉಲ್ಲಂಸಿದ್ದಾರೆ. ಆದ್ದರಿಂದ ಈ ಸಂಬಂಧ ಸ್ವಯಂಪ್ರೇರಿತ ಪಿಐಎಲ್ ದಾಖಲಿಕೊಂಡು ವಿಚಾರಣೆ ನಡೆಸಬೇಕು ಎಂದು ಮನವಿ ಮಾಡಿದ್ದಾರೆ.

    ಬಿಸಿಲು ಜಾಸ್ತಿ ಇದ್ರೆ ಕರೊನಾ ತನ್ನಿಂತಾನೇ ಸಾಯುತ್ತಾ? ಮಹಾರಾಷ್ಟ್ರ, ಕರ್ನಾಟಕದಲ್ಲಿ ನಡೆದ ಅಧ್ಯಯನ ಏನು ಹೇಳುತ್ತೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts