More

    ದೇವರಪುರದಲ್ಲಿ ಬೇಡು ಹಬ್ಬಕ್ಕೆ ಚಾಲನೆ

    ಗೋಣಿಕೊಪ್ಪ: ದಕ್ಷಿಣ ಕೊಡಗಿನ ದೇವರಪುರ ಗ್ರಾಮದಲ್ಲಿ ಅಯ್ಯಪ್ಪ ಭದ್ರಕಾಳಿ ದೇವಾಲಯದ ಬೇಡು ಹಬ್ಬಕ್ಕೆ ಬುಧವಾರ ಚಾಲನೆ ದೊರೆಯಿತು.

    ಜಿಲ್ಲೆಯ ಎಲ್ಲ ಬೇಡು ಹಬ್ಬಗಳಲ್ಲಿ ದೊಡ್ಡದಾದ ಮತ್ತು ಹೆಚ್ಚು ಜನರು ಸೇರುವ ಹಬ್ಬ ಇದಾಗಿದೆ. ಹರಕೆ ಹೊತ್ತವರು ಮತ್ತು ಆಸಕ್ತರು ಕಳಿ ಹಾಕಿ ಗೋಣಿಕೊಪ್ಪ ಸುತ್ತಮುತ್ತ ವ್ಯಾಪ್ತಿಗಳಲ್ಲಿ ಹಾಡು ಹಾಡುವುದರ ಜತೆಗೆ ಬೈಯುತ್ತಾ, ಭಿಕ್ಷಾಟನೆ ಮಾಡಿದರು. ಗುರುವಾರ ಮಧ್ಯಾಹ್ನ ದೇವಾಲಯಕ್ಕೆ ತೆರಳಿ ಹರಕೆ ತೀರಿಸುತ್ತಾರೆ.

    ತಿತಿಮತಿ, ಪಾಲಿಬೆಟ್ಟ, ಗೋಣಿಕೊಪ್ಪ, ದೇವರಪುರ ಸೇರಿದಂತೆ ಹತ್ತಿರದ ಊರುಗಳಲ್ಲಿಯೂ ನಾನಾ ವೇಷ ತೊಟ್ಟ ಭಕ್ತರು ಕುಣಿದು ಕುಪ್ಪಳಿಸುವ ದೃಶ್ಯ ಕಂಡು ಬಂತು. ಎಲ್ಲೆಡೆ ಕುಂಡೆ ಒಂದೇ ದಿನ.. ಕುಂಡೆ ತೀರಿ ಹೋತ..ಕುಂಡೆ ನಾಕಾಣೆ… ಕುಂಡೆ ಅಂದ ಕುಂಡೇವ ನಂಗ ಹಬ್ಬ ಬೇಡು ಹಬ್ಬ.. ನಂಗ ದೇವ ಅಯ್ಯಪ್ಪ ದೇವ…ಇತ್ಯಾದಿ ಹಾಡುಗಳನ್ನು ಹಾಡುತ್ತ, ಬೈಯುತ್ತಾ ಸಾಗಿದರು.

    ಸಣ್ಣುವಂಡ ಕುಟುಂಬಸ್ಥ ಐನ್ ಮನೆಯಿಂದ ದೇವಾಲಯಕ್ಕೆ ಭಂಡಾರ ತರಲಾಯಿತು. ಊರು ಕುದುರೆ ಮತ್ತು ಹರಕೆ ಕುದುರೆಗಳನ್ನು ಕಟ್ಟುವ ಕಾರ್ಯ ಸಾಗಿತು. ನಾಳೆ ದೇವಾಲಯದ ಅಂಬಾಲದಲ್ಲಿ ಸಾವಿರಾರು ಜನರು ಸೇರುವ ನಿರೀಕ್ಷೆ ಇದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts