More

    ಸ್ವಾವಲಂಬನೆಯ ಬದುಕು ಕಟ್ಟಿಕೊಂಡು ಆರ್ಥಿಕವಾಗಿ ಸಬಲರಾಗಿ

    ಕುರುಗೋಡು: ಉಚಿತ ಸಾಮೂಹಿಕ ವಿವಾಹಗಳು ಬಡ ಕುಟುಂಬಗಳ ಪಾಲಿಗೆ ಸಂಜೀವಿನಿಯಾಗಿವೆ ಎಂದು ಶ್ರೀ ಶಂಕರಪ್ಪ ತಾತನವರ ಸೇವಾ ಟ್ರಸ್ಟ್ ಸದಸ್ಯ ಗ್ಯಾಂಗಿ ಹನುಮಂತಪ್ಪ ಅಭಿಪ್ರಾಯ ಪಟ್ಟರು.

    ಸಮೀಪದ ಕುಡತಿನಿ ಪಟ್ಟಣದಲ್ಲಿ ಬಸವ ಜಯಂತಿ ಅಂಗವಾಗಿ ಭಾನುವಾರ ಹಮ್ಮಿಕೊಂಡಿದ್ದ ಶ್ರೀ ಶಂಕರಪ್ಪ ತಾತನವರ 12ನೇ ವಾರ್ಷಿಕೋತ್ಸವ ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಸೇವಾ ಟ್ರಸ್ಟ್‌ನಿಂದ 12ವಷರ್ದಿಂದ ಸಾಮೂಹಿಕ ವಿವಾಹ ಕೈಗೊಂಡು ಬಡವರ ಬಾಳಿಗೆ ಆಶಾಕಿರಣವಾಗಿದೆ. ಇಂತಹ ಸೇವಾ ಕಾರ್ಯ ಮಹತ್ತರವಾದದ್ದು. ದಾಂಪತ್ಯ ಜೀವನಕ್ಕೆ ಅಡಿಯಿಟ್ಟ ಸತಿ-ಪತಿಗಳ ಬಾಳು ಹಸನಾಗಲಿ. ಸ್ವಾವಲಂಬನೆಯ ಬದುಕು ಕಟ್ಟಿಕೊಂಡು ಆರ್ಥಿಕವಾಗಿ ಸಬಲರಾಗುವ ಜತೆಗೆ ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು ಎಂದು ಹೇಳಿದರು.

    ಅರಿತು ಸಹಬಾಳ್ವೆ ಮಾಡುವುದು ಮುಖ್ಯ

    ಕಲಾವಿದ ಕೆ.ಎಂ.ಬಸವರಾಜಸ್ವಾಮಿ ಮಾತನಾಡಿ, ಮದುವೆಯಾಗುವುದು ಮುಖ್ಯವಲ್ಲ, ಸತಿ-ಪತಿಗಳು ಅರಿತು ಸಹಬಾಳ್ವೆ ಮಾಡುವುದು ಮುಖ್ಯ. ವಧುವರರ ಮನಸ್ಸು ಒಂದಾಗಿ ಸಹಬಾಳ್ವೆ ನಡೆಸಿದಾಗ ಎಂದಿಗೂ ಆ ಸಂಸಾರಕ್ಕೆ ಆಪತ್ತು ಬರುವುದಿಲ್ಲ. ಸಾಮೂಹಿಕ ವಿವಾಹದಲ್ಲಿ ಬಡವ, ಶ್ರೀ ಮಂತ, ಮೇಲು ಕೀಳು ಭಾವನೆ ಅಳಿದು ಎಲ್ಲರೂ ಒಂದೇ ಎನ್ನುವ ಭಾವನೆ ಮೂಡುತ್ತದೆ. ಮುಂಬರುವ ದಿನಗಳಲ್ಲಿ ಎಲ್ಲಡೆ ಸಾಮೂಹಿಕ ವಿವಾಹಗಳು ಹೆಚ್ಚಾಗಿ ನಡೆದು, ದುಂದು ವೆಚ್ಚದ ಮದುವೆಗಳಿಗೆ ಕಡಿವಾಣ ಬೀಳಬೇಕು ಎಂದರು.

    ಇದನ್ನೂ ಓದಿ:ಸಾಮೂಹಿಕ ವಿವಾಹ; ಯುವತಿಯರಿಗೆ ಕನ್ಯತ್ವ ಪರೀಕ್ಷೆ …ಮುಂದೆನಾಯ್ತು..?

    ಸಾಮೂಹಿಕ ವಿವಾಹದಲ್ಲಿ 10 ಜೋಡಿಗಳು ನವ ಜೀವನಕ್ಕೆ ಕಾಲಿಟ್ಟರು. ಶಂಕರಪ್ಪ ತಾತ ದೇವಸ್ಥಾನದಿಂದ ಆಂಜಿನೇಯ್ಯ ದೇವಸ್ಥಾನದವರೆಗೆ ಮೆರವಣಿಗೆ ನಡೆಯಿತು.
    ಮುಖಂಡರಾದ ಎ.ಎಂ.ಟಿ ವೀರಯ್ಯಸ್ವಾಮಿ, ಶಂಕರಗೌಡ, ಕೋಟೆ ಪಂಪಾಪತಿ, ಲೋಕೇಶ, ಕೆ.ನಾಗರಾಜ, ಕೆಬಿ.ನಾಗಪ್ಪ, ಮಾಲಪ್ಪ, ದೊಡ್ಡ ಬಸಪ್ಪ, ಕೆ.ಬಸವರಾಜ, ಕೆ.ಯರ್ರಿಸ್ವಾಮಿ, ಕೆ.ಶಿವರಾಜ, ವಕೀಲ ಪ್ರಕಾಶ್, ಕೆ.ವೆಂಕಟೇಶ, ಜಂಭಯ್ಯ, ಪ್ರಭಾಕರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts