More

    ವಿದ್ಯಾರ್ಥಿಗಳ ಪ್ರತಿಭೆ ಪೋಷಣೆಯಾಗಲಿ

    ಅಥಣಿ: ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಯನ್ನು ಶಿಕ್ಷಕರು ಮತ್ತು ಪಾಲಕರು ಗುರುತಿಸಿ ಪ್ರೋತ್ಸಾಹಿಸಿದರೆ ಅವರು ಉತ್ತಮ ಸಾಧಕರಾಗಲು ಸಾಧ್ಯ. ಅದಕ್ಕೆ ವಿಜ್ಞಾನ ವಸ್ತು ಪ್ರದರ್ಶನವೂ ಸಹಾಯಕವಾಗಲಿದೆ ಎಂದು ಅಥಣಿ ಸಿವಿಲ್ ನ್ಯಾಯಾಧೀಶ ಜಗದೀಶ ಬಿಸಿರೊಟ್ಟಿ ಹೇಳಿದರು.

    ಪಟ್ಟಣದ ಕೆಎಲ್‌ಇ ಸಂಸ್ಥೆಯ ಎಸ್.ಎಂ.ಎಸ್. ಮಹಾವಿದ್ಯಾಲಯದಲ್ಲಿ ಶನಿವಾರ ಆಯೋಜಿಸಿದ್ದ ವಿಜ್ಞಾನ ಮತ್ತು ವಸ್ತು ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು. ಆಧುನಿಕ ಜೀವನಕ್ಕೆ ಗಾಳಿ ಮತ್ತು ನೀರಿನಷ್ಟೇ ವಿಜ್ಞಾನ ಮತ್ತು ತಂತ್ರಜ್ಞಾನವೂ ಮುಖ್ಯವಾಗಿದೆ. ವಿದ್ಯಾರ್ಥಿಗಳು ವಿಜ್ಞಾನ-ತಂತ್ರಜ್ಞಾನದಲ್ಲಿ ಆಸಕ್ತಿ ವಹಿಸಿದರೆ ಇಸ್ರೋ ವಿಜ್ಞಾನಿಗಳಂತೆ ಸಾಧನೆ ಮಾಡಬಹುದು. ಪಠ್ಯದ ಜತೆಗೆ ಮಾನವೀಯ ಮೌಲ್ಯ ಮತ್ತು ಪ್ರಾಮಾಣಿಕತೆ ರೂಢಿಸಿಕೊಳ್ಳಬೇಕು ಎಂದರು.

    ಅಥಣಿ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಪ್ರಶಾಂತ ನಾಗಲಪುರ ಮಾತನಾಡಿ, ಮಕ್ಕಳ ಸೃಜನಾತ್ಮಕ ಕಲಾಭಿವ್ಯಕ್ತಿಗೆ ವಿಜ್ಞಾನ ವಸ್ತು ಪ್ರದರ್ಶನ ಸೂಕ್ತ ವೇದಿಕೆ. ದೇಶಕ್ಕೆ ಸಂವಿಧಾನದಷ್ಟೇ ವಿಜ್ಞಾನ ಮತ್ತು ತಂತ್ರಜ್ಞಾನ ಅಗತ್ಯವಾಗಿದೆ ಎಂದರು. ಎಸ್.ಎಂ.ಎಸ್. ಮಹಾವಿದ್ಯಾಲಯದ ಸ್ಥಾನಿಕ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಡಾ.ಮಲ್ಲಿಕಾರ್ಜುನ ಹಂಜಿ ಮಾತನಾಡಿ, ಪ್ರಾಚೀನ ಕಾಲದಿಂದಲೂ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಭಾರತೀಯರು ಅಪಾರ ಸಾಧನೆ ಮಾಡಿದ್ದಾರೆ. ವಿಜ್ಞಾನ ಜೀವನದ ಒಂದು ಅವಿಭಾಜ್ಯ ಅಂಗವಾಗಿದೆ ಎಂದರು.

    ಸ್ಥಾನಿಕ ಆಡಳಿತ ಮಂಡಳಿ ಸದಸ್ಯರಾದ ಶಂಭುಲಿಂಗ ಮಮದಾಪುರ, ವಿಜಯ ಬುರ್ಲಿ, ಪ್ರಕಾಶ ಪಾಟೀಲ, ಪ್ರಾಚಾರ್ಯ ಬಿ.ಎಸ್.ಕಾಂಬಳೆ, ಆರ್.ಎನ್.ಇನಾಮದಾರ್, ನ್ಯಾಯವಾದಿ ಮಿತೇಶ ಪಟ್ಟಣ, ಉಪನ್ಯಾಸಕ ಬಿ.ಆರ್.ರಾಥೋಡ, ಎಸ್.ಎಂ.ಜನಗೌಡ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts