More

    ಶಾಲೆ ಸಂಸ್ಕಾರ ಕಲಿಸುವ ದೇಗುಲವಾಗಲಿ

    ಗೋಕಾಕ: ಶಿಕ್ಷಣ ಸಂಸ್ಥೆಗಳ ಸಂಸ್ಕಾರ ಕಲಿಸುವ ದೇಗುಲಗಳಾದಾಗ ಒಳ್ಳೆಯ ಸಮಾಜ ನಿರ್ಮಿಸಲು ಸಾಧ್ಯ ಎಂದು ತಹಸೀಲ್ದಾರ್ ಡಾ.ಮೋಹನ ಭಸ್ಮೆ ಹೇಳಿದರು.

    ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಗೋಕಾಕ ಶಿಕ್ಷಣ ಸಂಸ್ಥೆಯ ಆದರ್ಶ ಕನ್ನಡ ಪೂರ್ವ ಪ್ರಾಥಮಿಕ, ಪ್ರಾಥಮಿಕ ಹಾಗೂ ಜಿಇಎಸ್ ಪ್ರೌಢಶಾಲೆಯ ವಾರ್ಷಿಕೋತ್ಸವ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು.

    ಅಂಕ ಗಳಿಕೆಯಷ್ಟೇ ವಿದ್ಯಾರ್ಥಿಗಳಿಗೆ ಜೀವನದಲ್ಲಿ ಸಂಸ್ಕಾರವೂ ಬಹಳ ಮುಖ್ಯ. ಸಮಾಜ ಒಳ್ಳೆಯತನ ಎದುರು ನೋಡುತ್ತದೆ. ಪಾಲಕರು ಮಕ್ಕಳನ್ನು ಇತರರೊಂದಿಗೆ ಹೋಲಿಕೆ ಮಾಡಬಾರದು. ಇದು ಮಕ್ಕಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಮಕ್ಕಳು ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಲು ಪಾಲಕರ ಪಾತ್ರ ಮುಖ್ಯವಾಗಿದೆ ಎಂದರು.

    ವಿವಿಧ ಕ್ರೀಡೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಸಂಸ್ಥೆ ಅಧ್ಯಕ್ಷ ವಿಶ್ವನಾಥ ಕಡಕೋಳ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಆರ್.ಎಂ ವಾಲಿ, ಶಶಿಲ ಮುನ್ನವಳ್ಳಿ, ಮುಖ್ಯಶಿಕ್ಷಕಿ ಎಸ್.ಎಸ್. ಇಜೇರಿ, ಪ್ರಧಾನ ಗುರುಮಾತೆ ಎ.ಎಂ.ಶೆಟ್ಟೆನ್ನವರ, ಆದರ್ಶ ವಿದ್ಯಾರ್ಥಿಗಳಾದ ಕುಮಾರಿ ಸಹನಾ ಕುರಬರ, ಮುನಾ ನಿಂಗಾಪುರ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts