More

    ಜೆಇಇ ಪರೀಕ್ಷೆ ತೆಗೆದುಕೊಳ್ಳಲಿದ್ದೀರಾ…. ಹೀಗೆ ಮೋಸ ಹೋಗದಿರಿ…

    ನವದೆಹಲಿ: ರಾಷ್ಟ್ರದ ಪ್ರತಿಷ್ಠಿತ ಟೆಕ್ನಾಲಜಿ ಇನ್​ಸ್ಟಿಟ್ಯೂಟ್​ಗಳಿಗೆ ಪ್ರವೇಶ ಪಡೆಯುವ ಆಸೆಯಿಂದ ಜೆಇಇ ಮೇನ್ ಪರೀಕ್ಷೆ ತೆಗೆದುಕೊಳ್ಳಬಯಸಿದ್ದೀರಾ? ಫೀ ಕಟ್ಟುವ ಮುಂಚೆ ಇದನ್ನು ಓದಿಬಿಡಿ.
    ಜಾಯಿಂಟ್ ಎಂಟ್ರೆನ್ಸ್ ಮೇನ್ ಎಕ್ಸಾಂ (ಜೆಇಇ ಮೇನ್ 2021) ನಾಲ್ಕು ಹಂತಗಳಲ್ಲಿ ನಡೆಯುವುದಾಗಿ ಈಗಾಗಲೇ ನಿಗದಿಯಾಗಿದೆ. ಜನವರಿ 16 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಹೀಗಿರುವಾಗ ನೋಂದಣಿಗೆ ನಡೆಯುತ್ತಿರುವ ಕೊನೆ ಹಂತದ ತರಾತುರಿಯಲ್ಲಿ ಹಣ ಮಾಡುವ ಕೃತ್ಯಕ್ಕೆ ವಂಚಕರು ಕೈಹಾಕಿದ್ದಾರೆ. ಹೀಗೆ ಜೆಇಇ ಪರೀಕ್ಷೆಗೆ ನೋಂದಣಿ ಒದಗಿಸುವ ಹೆಸರಲ್ಲಿ ಫೀಸು ಕಟ್ಟಿಸಿಕೊಳ್ಳುತ್ತಿರುವ ನಕಲಿ ವೆಬ್​ಸೈಟೊಂದು ಕಂಡುಬಂದಿದೆ!

    ಜೆಇಇ ಪರೀಕ್ಷೆ ನಡೆಸುವ ಸರ್ಕಾರಿ ಸಂಸ್ಥೆ ನಾಷನಲ್ ಟೆಸ್ಟಿಂಗ್ ಏಜೆನ್ಸಿ(ಎನ್​ಟಿಎ)ಯು ಪರೀಕ್ಷೆಯನ್ನು ತೆಗೆದುಕೊಳ್ಳಲು ಉತ್ಸುಕರಾಗಿರುವ ವಿದ್ಯಾರ್ಥಿಗಳನ್ನು ಈ ನಕಲಿ ವೆಬ್​ಸೈಟ್​ನ ಬಗ್ಗೆ ಶುಕ್ರವಾರ ಎಚ್ಚರಿಸಿದೆ. jeeguide.co.in ಎಂಬ ಯುಆರ್​ಎಲ್ ಹೊಂದಿರುವ ವೆಬ್​ಸೈಟ್ ಇದಾಗಿದ್ದು, ಈಗಾಗಲೇ ಹಲವು ವಿದ್ಯಾರ್ಥಿಗಳು ವಂಚನೆಗೀಡಾಗಿದ್ದಾರೆ ಎಂದು ಎನ್​ಟಿಎ ತಿಳಿಸಿದೆ. ಈ ಬಗ್ಗೆ ದೆಹಲಿಯ ಸೈಬರ್ ಪೊಲೀಸರಿಗೆ ದೂರು ಸಲ್ಲಿಸಿದ್ದು, ವಿದ್ಯಾರ್ಥಿಗಳು-ಪಾಲಕರು ಈ ಬಗ್ಗೆ ಎಚ್ಚರದಿಂದಿರಬೇಕೆಂದು ಸಂಸ್ಥೆ ಕೋರಿದೆ.

    ಜೆಇಇ ಪರೀಕ್ಷೆಗೆ ನೋಂದಣಿ ಮಾಡಿಕೊಳ್ಳಲು, ಫೀಸು ಕಟ್ಟಲು ತನ್ನ ಅಧಿಕೃತ ವೆಬ್​ಸೈಟ್​ jeemain.nta.nic.in ಅನ್ನೇ ಉಪಯೋಗಿಸಬೇಕಾಗಿ ಕೂಡ ತಿಳಿಸಿದೆ. ಇಂತಹ ನಕಲಿ ವೆಬ್​ಸೈಟುಗಳ ಬಗ್ಗೆ ತಿಳಿದರೆ ತಕ್ಷಣ ಸ್ಥಳೀಯ ಪೊಲೀಸರಿಗೆ ದೂರು ನೀಡುವುದರೊಂದಿಗೆ [email protected] ಕ್ಕೆ ಈಮೇಲ್ ಮಾಡಿ ವಿಷಯ ತಿಳಿಸಬೇಕೆಂದು ಸಂಸ್ಥೆ ಕೋರಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts