More

    ಮೂರು ತಿಂಗಳ ಇಎಂಐ ಪಾವತಿಗೆ ವಿನಾಯಿತಿ, ಸೈಬರ್​ ಕಳ್ಳರಿಗೆ ಹಣ ದೋಚಲು ಅವಕಾಶ

    ಬೆಂಗಳೂರು: ಕೋವಿಡ್​ 19ನಿಂದಾಗಿ ದೇಶದಾದ್ಯಂತ ಲಾಕ್​ಡೌನ್​ ಘೋಷಿಸಿರುವ ಹಿನ್ನೆಲೆಯಲ್ಲಿ ಭಾರತೀಯ ರಿಸರ್ವ್​ ಬ್ಯಾಂಕ್​ (ಆರ್​ಬಿಐ) ಗೃಹ ಮತ್ತು ವಾಹನ ಸಾಲ ಸೇರಿ ವಿವಿಧ ಸಾಲಗಳಿಗೆ ಮೂರು ತಿಂಗಳ ಸಮಾನ ಮಾಸಿಕ ಕಂತುಗಳ (ಇಎಂಐ) ಪಾವತಿಗೆ ವಿನಾಯ್ತಿ ನೀಡುವಂತೆ ದೇಶದ ಎಲ್ಲ ಬ್ಯಾಂಕ್​ಗಳಿಗೆ ಸೂಚಿಸಿದೆ.

    ಕೆಲವು ಬ್ಯಾಂಕ್​ಗಳು ಇದನ್ನು ಕಡ್ಡಾಯವಾಗಿ ಜಾರಿಗೊಳಿಸಿವೆ. ಹಲವು ಬ್ಯಾಂಕ್​ಗಳು ಇದರ ಆಯ್ಕೆಯನ್ನು ಗ್ರಾಹಕರಿಗೆ ಬಿಟ್ಟಿವೆ. ಈ ಅವಕಾಶವನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ಸೈಬರ್​ ಕಳ್ಳರು ಗ್ರಾಹಕರ ಬ್ಯಾಂಕ್​ ಖಾತೆಗಳಿಗೆ ಕನ್ನ ಹಾಕಲಾರಂಭಿಸಿದ್ದಾರೆ.

    ಬ್ಯಾಂಕ್​ಗಳ ಗ್ರಾಹಕರಿಗೆ ಕರೆ ಮಾಡುತ್ತಿರುವ ಸೈಬರ್​ ಕಳ್ಳರು ಇಎಂಐ ಪಾವತಿಯ ವಿನಾಯ್ತಿ ಪಡೆದುಕೊಳ್ಳಲು ಸಹಕರಿಸುವುದಾಗಿ ಹೇಳಿ, ಒಟಿಪಿಗಳನ್ನು ಕಳುಹಿಸುತ್ತಿದ್ದಾರೆ. ಆ ಒಟಿಪಿಯನ್ನು ಕೊಡುವಂತೆ ಗ್ರಾಹಕರಿಗೆ ಸೂಚಿಸುತ್ತಾರೆ. ಒಟಿಪಿ ಕೊಡುತ್ತಲೇ ಗ್ರಾಹಕರ ಬ್ಯಾಂಕ್​ ಖಾತೆಗಳಿಂದ ಹಣ ದೋಚುತ್ತಿದ್ದಾರೆ.

    ಈ ರೀತಿಯ ಸಾಕಷ್ಟು ದೂರುಗಳು ಬೆಂಗಳೂರು ಸೈಬರ್​ ಕ್ರೈಂ ಬ್ರ್ಯಾಂಚ್​ನಲ್ಲಿ ದಾಖಲಾಗುತ್ತಿವೆ. ಈ ಹಿನ್ನೆಲೆಯಲ್ಲಿ ಯಾರಾದರೂ ಕರೆ ಮಾಡಿ ಇಎಂಐ ಪಾವತಿಯ ವಿನಾಯ್ತಿ ಕೊಡುವುದಾಗಿಯೂ, ಒಟಿಪಿ ಹೇಳುವಂತೆ ತಿಳಿಸಿದರೆ ಯಾರೂ ಕೂಡ ಕೊಡಬಾರದು ಎಂದು ಐಪಿಎಸ್​ ಅಧಿಕಾರಿ ಡಿ. ರೂಪಾ ಟ್ವೀಟ್​ ಮಾಡಿ, ಜನರನ್ನು ಎಚ್ಚರಿಸಿದ್ದಾರೆ.

    ಕಾಶ್ಮೀರ ಕಣಿವೆಗೆ ನುಸುಳಲು ಯತ್ನಿಸಿದ 9 ಉಗ್ರರ ಹತ್ಯೆ, ಭದ್ರತಾ ಪಡೆಯ ಮೂವರು ಸಿಬ್ಬಂದಿ ಹುತಾತ್ಮ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts