More

    ಠಾಕೂರ್, ಪ್ರಕಾಶಗೆ ಬಿಜೆಪಿಗೆ ಟಿಕೆಟ್

    ಬೀದರ್: ಬಿಜೆಪಿ ಎರಡನೇ ಪಟ್ಟಿ ಬುಧವಾರ ರಾತ್ರಿ ಪ್ರಕಟವಾಗಿದ್ದು, ತೀವ್ರ ಕುತೂಹಲ‌ ಕೆರಳಿಸಿದ್ದ ಬೀದರ್ ಉತ್ತರ ಕ್ಷೇತ್ರದಿಂದ ಹಿಂದು ಮುಖಂಡ ಈಶ್ವರಸಿಂಗ್ ಠಾಕೂರ್ ಹಾಗೂ ಭಾಲ್ಕಿ ಕ್ಷೇತ್ರದಿಂದ ಮಾಜಿ ಶಾಸಕ ಪ್ರಕಾಶ ಖಂಡ್ರೆ ಅವರಿಗೆ ಟಿಕೆಟ್ ನೀಡಲಾಗಿದೆ.

    ಬೀದರ್ ನಿಂದ ಬಿಜೆಪಿ ಪ್ರಬಲ ಆಕಾಂಕ್ಷೆಯಾಗಿದ್ದ ಕಳೆದ ಸಲದ ಪರಾಜಿತ ಅಭ್ಯರ್ಥಿ ಸೂರ್ಯಕಾಂತ ನಾಗಮಾರಪಳ್ಳಿ ಅವರಿಗೆ ವರಿಷ್ಠರು ಮನ್ನಣೆ ನೀಡಿಲ್ಲ. ಭಾಲ್ಕಿಯಿಂದ ಕಳೆದ ಸಲ ಸೋತ ಅಭ್ಯರ್ಥಿ ಡಿ.ಕೆ.ಸಿದ್ರಾಮ ಅವರಿಗೂ ಅವಕಾಶ ನೀಡಿಲ್ಲ. ಹೈಕಮಾಂಡ್ ನಿರ್ಣಯ ನಾಗಮಾರಪಳ್ಳಿ ಹಾಗೂ ಡಿ.ಕೆ. ಸಿದ್ರಾಮ ಅವರ ರಾಜಕೀಯ ಭವಿಷ್ಯಕ್ಕೆ ಭಾರಿ ಪೆಟ್ಟು ಹಾಕಿದೆ. ಟಿಕೆಟ್ ವಂಚಿತ ಇವರಿಬ್ಬರೂ ಯಾವ ಹೆಜ್ಜೆ ಇಡುತ್ತಾರೆ ಎಂಬ ಕುತೂಹಲವಿದೆ. ನಾಗಮಾರಪಳ್ಳಿ ಜೆಡಿಎಸ್ ಅಭ್ಯರ್ಥಿ ಆಗಬಹುದು ಎಂಬ‌ ಚರ್ಚೆ ನಡೆದಿದ್ದು, ಬಿಜೆಪಿಗೆ ಬಂಡಾಯದ ಭೀತಿ ಎದುರಾಗಿದೆ.

    ಬೀದರ್ ಹಾಗೂ ಭಾಲ್ಕಿ ಕ್ಷೇತ್ರದಿಂದ ಲಿಂಗಾಯತ ನಾನ್ ಲಿಂಗಾಯತ ಅಭ್ಯರ್ಥಿಗೆ ಟಿಕೆಟ್ ನೀಡುವ ಬಗ್ಗೆ ವರಿಷ್ಠರ‌ ಮಟ್ಟದಲ್ಲಿ ಲೆಕ್ಕಾಚಾರಗಳು ನಡೆದಿದ್ದವು. ಅದರಂತೆ ಬೀದರ್ ಕ್ಷೇತ್ರದಿಂದ ಭೋವಿ ಎಸ್ಸಿ ಸಮಾಜದ ಹೊಸ ಮುಖ ಈಶ್ವರಸಿಂಗ್ ಠಾಕೂರ್ ಅವರಿಗೆ ಅವಕಾಶ ನೀಡಲಾಗಿದೆ. ಸೂರ್ಯಕಾಂತ ಜತೆಗೆ ಹಿರಿಯ ಉದ್ಯಮಿ ಗುರುನಾಥ ಕೊಳ್ಳುರ್, ಎಂಎಲ್ಸಿ ರಘುನಾಥರಾವ್ ಮಲ್ಕಾಪುರೆ ಸಹ ಟಿಕೆಟ್ ಲಾಬಿ ನಡೆಸುತ್ತಿದ್ದರು. ಬೀದರ್ ನಲ್ಲಿ ನಾನ್ ಲಿಂಗಾಯತ ಸ್ಥಾನ ಕೊಟ್ಟಿದ ಕಾರಣ ಭಾಲ್ಕಿಯಿಂದ ಲಿಂಗಾಯತ ಸಮಾಜದ ಪ್ರಕಾಶ ಖಂಡ್ರೆ ಅವರಿಗೆ ಮಣೆ ಹಾಕಲಾಗಿದೆ. ಇಲ್ಲಿ ಡಿಕೆ‌ ಸಿದ್ರಾಮ ಜತೆಗೆ ಮರಾಠ ಸಮಾಜದ ಡಾ.ದಿನಕರ ಮೋರೆ ಟಿಕೆಟ್ ಆಕಾಂಕ್ಷೆ ಆಗಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts