More

    ಬಿಡಿಎಯಿಂದ ಅಂತರ್ಜಾಲ, ಹೊಸ ತಂತ್ರಾಂಶ ಅನಾವರಣ

    ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಮೇಲ್ದರ್ಜೆಗೇರಿಸಿರುವ ವೆಬ್‌ಸೈಟ್ ಹಾಗೂ ನಾಗರಿಕರ ಕುಂದು-ಕೊರತೆ ನಿವಾರಿಸಲು ರೂಪಿಸಿರುವ ಹೊಸ ತಂತ್ರಾಂಶವನ್ನು ಸಂಸ್ಥೆಯ ಅಧ್ಯಕ್ಷ ಎನ್.ಎ.ಹ್ಯಾರಿಸ್ ಅನಾವರಣಗೊಳಿಸಿದರು.

    ಸಂಸ್ಥೆಯ ಕಚೇರಿಯಲ್ಲಿ ಆಯೋಜಿಸಿದ್ದ ಸರಳ ಸಮಾರಂಭದಲ್ಲಿ ವೆಬ್‌ಸೈಟ್ ಹಾಗೂ ತಂತ್ರಾಂಶ ಬಿಡುಗಡೆಗೊಳಿಸಿ ಮಾತನಾಡಿದ ಎನ್.ಎ.ಹ್ಯಾರಿಸ್, ಹೊಸ ತಂತ್ರಾಂಶವು ಸಾರ್ವಜನಿಕರು ಭೇಟಿ ಮಾಡುವ ನಿಗದಿತ ವಿಭಾಗದ ಅಧಿಕಾರಿಯನ್ನು ಭೇಟಿ ಮಾಡಲು ಅನುಕೂಲವಾಗುತ್ತದೆ. ನಾಗರಿಕರ ಸಮಯವನ್ನು ವ್ಯರ್ಥ ಮಾಡದೇ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಾಗಲಿದೆ. ಈ ತಂತ್ರಾಂಶದಿಂದ ನಾಗರಿಕರ ಮನೆಯಲ್ಲಿಯೇ ಕುಳಿತು ಬಗೆಹರಿಸಿಕೊಳ್ಳಬಹುದು ಎಂದರು.

    ಈ ತಂತ್ರಾಂಶದಲ್ಲಿ ಸಮಸ್ಯೆಗಳನ್ನು ನಮೂದಿಸಿ ಸಲ್ಲಿಸಿದ ನಂತರ ಪ್ರಾಧಿಕಾರದ ನಿಗದಿತ ವಿಭಾಗದ ಅಧಿಕಾರಿಗೆ ರವಾನೆಯಾಗುತ್ತದೆ. ಅಧಿಕಾರಿಯು ಆ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ದಿನಾಂಕ ಮತ್ತು ಸಮಯವನ್ನು ನಿಗದಿಗೊಳಿಸುತ್ತಾರೆ. ನಂತರ ಸಾರ್ವಜನಿಕರ ಮೊಬೈಲ್​​ಗೆ ಲಿಂಕ್ ಕಳುಹಿಸಲಾಗುವುದು. ಅಧಿಕಾರಿಗಳು ನಿಗದಿಗೊಳಿಸಿದ ದಿನದಂದು ಪ್ರಾಧಿಕಾರದ ಪ್ರವೇಶದ್ವಾರದಲ್ಲಿ ಲಿಂಕ್ ಸಲ್ಲಿಸಿದ ಬಳಿಕ ಸಂಬಂಧಪಟ್ಟ ಅಧಿಕಾರಿಯನ್ನು ಭೇಟಿ ಮಾಡಿ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು ಎಂದು ತಿಳಿಸಿದರು.

    ಸರ್ಕಾರದ ಸಿಎಸ್‌ಜಿ ವಿಭಾಗದ ಕಾರ್ಯನಿರ್ವಾಹಕ ನಿರ್ದೇಶಕ ಯಶವಂತ್ ವಿ.ಗುರುಕರ್ ಮಾತನಾಡಿ, ಬಿಡಿಎಗೆ ಭೇಟಿ ನೀಡುವ ನಾಗರಿಕರ ಸಮಸ್ಯೆಗಳನ್ನು ಆನ್‌ಲೈನ್‌ನಲ್ಲಿಯೇ ಪರಿಹರಿಸಿಕೊಳ್ಳಲು ನೂತನ ತಂತ್ರಾಂಶವನ್ನು ಸಿದ್ದಪಡಿಸಲಾಗಿದೆ. ಇದರಿಂದ ಸಾರ್ವಜನಿಕರ ಅಮೂಲ್ಯ ಸಮಯ ಹಾಗೂ ಹಣ ಉಳಿತಾಯವಾಗಲಿದೆ. ಜತೆಗೆ ಪದೇ ಪದೆ ಕಚೇರಿಗೆ ಬರುವ ಅಗತ್ಯತೆ ಇರದು. ಆನ್‌ಲೈನ್ ಮೂಲಕ ತ್ವರಿತವಾಗಿ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಲಿದೆ ಎಂದರು.

    ಕಾರ್ಯಕ್ರಮದಲ್ಲಿ ಸರ್ಕಾರದ ಡಿಪಿಎಆರ್ ಇಲಾಖೆಯ ಪ್ರಧಾನ ಕಾರ್ಯದರ್ಶಿ ಉಜ್ವಲ್ ಕುಮಾರ್ ಘೋಬಿಡಿಎ ಅಭಿಯಂತರ ಸದಸ್ಯ ಎಚ್.ಆರ್. ಶಾಂತರಾಜಣ್ಣ, ಕಾರ್ಯದರ್ಶಿ ವೈ.ಬಿ. ಶಾಂತರಾಜು, ನಗರ ಯೋಜನಾ ಸದಸ್ಯ ಶಶಿಕುಮಾರ್ ಹಿರಿಯ ಅಧಿಕಾರಿಗಳಾದ ಡಾ. ಸೌಜನ್ಯ. ಎ., ಮಲ್ಲಿಕಾರ್ಜುನಸ್ವಾಮಿ ಉಪಸ್ಥಿತರಿದ್ದರು.

    ಬಿಡಿಎನಲ್ಲಿ ಮಧ್ಯವರ್ತಿಗಳ ಹಾವಳಿಯನ್ನು ತಡೆದು ಸಾರ್ವಜನಿಕರಿಗೆ ಅನುಕೂಲವಾಗಲು ಹೊಸ ತಂತ್ರಾಂಶವನ್ನು ಸಿದ್ದಪಡಿಸಲಾಗಿದೆ. ಈ ತಂತ್ರಾಂಶದ ಮೂಲಕ ಸಾರ್ವಜನಿಕರು ಪ್ರಾಧಿಕಾರದ ಅಧಿಕೃತ ಅಂತರ್ಜಾಲಕ್ಕೆ ಭೇಟಿ ನೀಡಿ ಅಲ್ಲಿ ತಮ್ಮ ಸಮಸ್ಯೆಗಳನ್ನು ನಮೂದಿಸಿ, ಸಂಬಂಧಪಟ್ಟ ಅಧಿಕಾರಿಯನ್ನು ಭೇಟಿ ಮಾಡಲು ಅವಕಾಶ ಪಡೆದು ನೇರವಾಗಿಯೇ ಪರಿಹಾರ ಪಡೆದುಕೊಳ್ಳಲು ಸಾಧ್ಯವಾಗಲಿದೆ.
    ಎನ್.ಜಯರಾಮ್, ಬಿಡಿಎ ಆಯುಕ್ತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts