More

    ಸೆಪ್ಟಿಕ್ ಟ್ಯಾಂಕ್ ನಿರ್ಮಿಸಲು ಮುಂದಾದ ಬಿಡಿಎ

    ಬೆಂಗಳೂರು: ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಅಪೂರ್ಣ ಮೂಲಸೌಕರ್ಯದಿಂದಾಗಿ ಸೈಟ್ ಹಂಚಿಕೆದಾರರು ಮನೆ ನಿರ್ಮಿಸಿಕೊಳ್ಳಲು ತೊಂದರೆ ಅನುಭವಿಸುತ್ತಿದ್ದು, ಹೊಸದಾಗಿ ಮನೆ ನಿರ್ಮಿಸಿಕೊಳ್ಳುವವರಿಗೆ ತಾತ್ಕಾಲಿಕವಾಗಿ ಸೆಪ್ಟಿಕ್ ಟ್ಯಾಂಕ್ ನಿರ್ಮಿಸಲು ಬಿಡಿಎ ಮುಂದಾಗಿದೆ.

    ಇತ್ತೀಚಿಗೆ ಬೆಳಗಾವಿ ಅಧಿವೇಶನದಲ್ಲಿ ಕೆಂಪೇಗೌಡ ಬಡಾವಣೆಯಲ್ಲಿ ಮೂಲಸೌಕರ್ಯ ಕಲ್ಪಿಸಿರುವ ಕುರಿತು ಶಾಸಕ ಸುರೇಶ್‌ಕುಮಾರ್ ಕೇಳಿದ್ದ ಪ್ರಶ್ನೆಗೆ ಡಿಸಿಎಂ ಶಿವಕುಮಾರ್ ಅವರ ಪರವಾಗಿ ಉತ್ತರ ನೀಡಿದ್ದ ಸಚಿವ ರಾಮಲಿಂಗಾರೆಡ್ಡಿ, ಲೇಔಟ್‌ನಲ್ಲಿ ರಸ್ತೆ, ಒಳಚರಂಡಿ ಸಹಿತ ಕೆಲ ಮೂಲಸೌಕರ್ಯ ಕಲ್ಪಿಸಲಾಗಿದೆ. ಕೆಲವೆಡೆ ರಸ್ತೆ ನಿರಂತರೆ ಇಲ್ಲದ ಕಾರಣ ಒಂದಿಷ್ಟು ಸೌಲಭ್ಯ ಕಲ್ಪಿಸಲು ಸಾಧ್ಯವಾಗಿಲ್ಲ ಎಂದು ಸಮಜಾಯಿಷಿ ನೀಡಿದ್ದರು.

    ಈ ವಿಚಾರವಾಗಿ ಸದನಕ್ಕೆ ತಪ್ಪು ಮಾಹಿತಿ ನೀಡಿರುವ ಬಿಡಿಎ ಕ್ರಮ ಆಕ್ಷೇಪಿ ಸುರೇಶ್‌ಕುಮಾರ್ ಅವರು ಡಿಸಿಎಂ ಅವರಿಗೆ ಪತ್ರ (ಜ.3) ಬರೆದು ಮೂಲಸೌಕರ್ಯ ಕಲ್ಪಿಸಿದ್ದರೆ ಅದನ್ನು ವೀಕ್ಷಿಸಲು ಸೂಕ್ತ ಸಮಯ ನಿಗದಿ ಮಾಡುವಂತೆ ಕೋರಿದ್ದರು. ಇದರ ಬೆನ್ನಲ್ಲೇ ಬಿಡಿಎ ಅಧಿಕಾರಿಗಳು ಲೇಔಟ್‌ನ ಭೀಮನಕುಪ್ಪೆ ಗ್ರಾಮದ ‘ಸಿ’ ಸೆಕ್ಟರ್‌ನ 6ನೇ ಬ್ಲಾಕ್‌ನಲ್ಲಿ ಸೆಪ್ಟಿಕ್ ಟ್ಯಾಂಕ್ ನಿರ್ಮಿಸಲು ಖಾಲಿ ನಿವೇಶನದಲ್ಲಿ ಜೆಸಿಬಿ ಯಂತ್ರದ ಮೂಲಕ ಕಾಮಗಾರಿ ಆರಂಭಿಸಿದ್ದಾರೆ.

    ಕೆಂಪೇಗೌಡ ಲೇಔಟ್ 4,043 ಎಕರೆ ವಿಸ್ತೀರ್ಣದಲ್ಲಿ ನಿರ್ಮಿಸಬೇಕಿದ್ದರೂ, ಸದ್ಯ ಅರ್ಧದಷ್ಟು ಪ್ರದೇಶದಲ್ಲಿ ಮಾತ್ರ ಅಭಿವೃದ್ಧಿಪಡಿಸಲಾಗುತ್ತಿದೆ. ಉಳಿದ ಜಮೀನು ಪೈಕಿ 600ಕ್ಕೂ ಹೆಚ್ಚು ಎಕರೆ ಪ್ರದೇಶವು ಹೈಕೋರ್ಟ್‌ನಲ್ಲಿ ವಿಚಾರಣೆ ಬಾಕಿ ಇದೆ. ಹೀಗಾಗಿ ಪ್ರಾಧಿಕಾರ ಇಡೀ ಬಡಾವಣೆಯನ್ನು ಕೇಂದ್ರೀಕರಿಸಿ ವ್ಯವಸ್ಥಿತವಾಗಿ ಸೌಲಭ್ಯ ಒದಗಿಸಲು ಸಾಧ್ಯವಾಗಿಲ್ಲ. ಪ್ರಸ್ತುತ ಬಡಾವಣೆಯಲ್ಲಿ 10 ಸಂಖ್ಯೆಯ ತ್ಯಾಜ್ಯ ಶುದ್ಧೀಕರಣ ಘಟಕ (ಎಸ್‌ಟಿಪಿ) ನಿರ್ಮಾಣ ಪ್ರಗತಿಯಲ್ಲಿದ್ದು, ಶೇ.90 ಕಾಮಗಾರಿ ಪೂರ್ಣಗೊಂಡಿದೆ. ಆದರೂ, ಹೊಸ ಮನೆಗಳಿಂದ ಹೊರಹೋಗುವ ತ್ಯಾಜ್ಯನೀರನ್ನು ಎಸ್‌ಟಿಪಿಗೆ ಸಂಪರ್ಕ ಕಲ್ಪಿಸಲು ಸಾಧ್ಯವಾಗಿಲ್ಲ. ಅಲ್ಲಲ್ಲಿ ಭೂಸ್ವಾಧೀನ ಕಾರ್ಯ ನೆನಗುದಿಗೆ ಬಿದ್ದಿರುವ ಕಾರಣ ಒಳಚರಂಡಿ ಮಾರ್ಗವನ್ನು ಪೂರ್ಣವಾಗಿ ಅಳವಡಿಸಲಾಗಿಲ್ಲ. ಈ ಕಾರಣದಿಂದ ಹಲವೆಡೆ ರಸ್ತೆ, ಒಳಚರಂಡಿ, ಕುಡಿಯುವ ನೀರು ಸೌಲಭ್ಯ ಕಲ್ಪಿಸಲು ಬಿಡಿಎ ಸಾಧ್ಯವಾಗಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts