More

    ಹಲಾಲ್ ವಿವಾದದಲ್ಲಿ ಟೀಮ್ ಇಂಡಿಯಾ; ಬಿಸಿಸಿಐ ವಿರುದ್ಧ ಕ್ರಿಕೆಟ್‌ಪ್ರೇಮಿಗಳ ಕಿಡಿ

    ನವದೆಹಲಿ: ಟಿ20 ವಿಶ್ವಕಪ್ ನಿರಾಸೆಯ ಬಳಿಕ ನ್ಯೂಜಿಲೆಂಡ್ ವಿರುದ್ಧ ಟಿ20 ಸರಣಿ ಕ್ಲೀನ್‌ಸ್ವೀಪ್ ಸಾಧಿಸಿ ಟೀಮ್ ಇಂಡಿಯಾ ಪುಟಿದೆದ್ದಿರುವ ನಡುವೆ ವಿವಾದಕ್ಕೆ ಸಿಲುಕಿದೆ. ಟೀಮ್ ಇಂಡಿಯಾದ ಆಟಗಾರರಿಗೆ ಕಟ್ಟುನಿಟ್ಟಿನ ಡಯೆಟ್ ಯೋಜನೆ ರೂಪಿಸಿರುವ ಬಿಸಿಸಿಐ, ಹಂದಿ ಮತ್ತು ದನದ ಮಾಂಸ ಸೇವನೆಯನ್ನು ನಿಷೇಧಿಸಿದೆ. ಜತೆಗೆ ‘ಹಲಾಲ್’ ಮಾಂಸ ಸೇವನೆಯನ್ನೂ ಕಡ್ಡಾಯಗೊಳಿಸಿದೆ. ಮಂಡಳಿಯ ಈ ನಡೆ ಇದೀಗ ಕ್ರಿಕೆಟ್ ಪ್ರೇಮಿಗಳ ಕೆಂಗಣ್ಣಿಗೆ ಗುರಿಯಾಗಿದ್ದು, ಜಾತ್ಯಾತೀತ ತಂಡದಲ್ಲಿ ಈ ರೀತಿಯ ಬಲವಂತದ ಹೇರಿಕೆ ಬಗ್ಗೆ ಆಕ್ಷೇಪ ಎತ್ತಿದ್ದಾರೆ. ಕ್ರಿಕೆಟಿಗರನ್ನು ಫಿಟ್ ಮತ್ತು ಆರೋಗ್ಯವಾಗಿಡುವ ಸಲುವಾಗಿ ಬಿಸಿಸಿಐ ಹೊಸ ಡಯೆಟ್ ಯೋಜನೆಯನ್ನು ರೂಪಿಸಿದೆ. ಯಾರಾದರು ಆಟಗಾರರು ಮಾಂಸಾಹಾರ ಸೇವಿಸಲು ಬಯಸಿದರೆ, ಹಲಾಲ್ ಮಾಂಸವನ್ನು ಮಾತ್ರ ಸೇವಿಸಬೇಕು. ಬೇರೆ ಯಾವ ರೀತಿಯ ಮಾಂಸವನ್ನೂ ಸೇವಿಸಬಾರದು ಎಂದು ಸೂಚಿಸಲಾಗಿದೆ.

    ಸಂಪ್ರದಾಯದ ಪ್ರಕಾರ ಮುಸ್ಲಿಮರು ಹಲಾಲ್ ಮಾಂಸವನ್ನು ಮಾತ್ರ ಸೇವಿಸುತ್ತಾರೆ. ಆದರೆ ಟೀಮ್ ಇಂಡಿಯಾದಲ್ಲಿರುವ ಹೆಚ್ಚಿನ ಆಟಗಾರರು ಹಿಂದುಗಳಾಗಿದ್ದಾರೆ. ಹೀಗಾಗಿ ಅವರಿಗೂ ಯಾಕೆ ಹಲಾಲ್ ಮಾಂಸ ಸೇವನೆ ಕಡ್ಡಾಯಗೊಳಿಸಲಾಗಿದೆ. ಈ ಮೂಲಕ ಬಿಸಿಸಿಐ ಯಾವ ಸಂದೇಶ ನೀಡಲು ಮುಂದಾಗಿದೆ? ಹಿಂದುಗಳ ಮೇಲೇಕೆ ಹಲಾಲ್ ಹೇರಿಕೆ ಮಾಡಲಾಗುತ್ತಿದೆ ಎಂದು ಕ್ರಿಕೆಟ್ ಪ್ರೇಮಿಗಳು ತಕರಾರು ಎತ್ತಿದ್ದಾರೆ.

    ಮುಸ್ಲಿಂ ಅಲ್ಲದಿರುವ ಆಟಗಾರರೂ ಯಾಕೆ ಹಲಾಲ್ ಮಾಂಸ ಸೇವಿಸಬೇಕು? ಆಟಗಾರರಿಗೆ ಅವರ ಸ್ವಾತಂತ್ರ್ಯದ ಆಹಾರವನ್ನು ಯಾಕೆ ಸೇವಿಸಲು ಅವಕಾಶ ಕಲ್ಪಿಸಿಲ್ಲ? ಧರ್ಮಭೇದವಿಲ್ಲದ ತಂಡದಲ್ಲಿ ಒಂದು ಧರ್ಮದ ಆಚಾರದ ಹೇರಿಕೆ ಯಾಕೆ ಎಂದೆಲ್ಲ ಕ್ರಿಕೆಟ್ ಪ್ರೇಮಿಗಳು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನೆಗಳನ್ನು ಎತ್ತಿದ್ದಾರೆ.

    ಬಿಸಿಸಿಐ ವಾರ್ಷಿಕ ಗುತ್ತಿಗೆ ನೀಡಿರುವ 28 ಆಟಗಾರರ ಪೈಕಿ ಇಬ್ಬರು ಮಾತ್ರ ಮುಸ್ಲಿಂ ಆಗಿದ್ದಾರೆ. ಈ ಶೇ. 3.4 ಜನರಿಗಾಗಿ ಉಳಿದ 26 ಆಟಗಾರರೂ ಹಲಾಲ್ ಆಹಾರವನ್ನು ಸೇವಿಸಬೇಕೇ? ಜಾತ್ಯಾತೀತ ಭಾರತದಲ್ಲಿ ಹಲಾಲ್ ಕಡ್ಡಾಯಗೊಳಿಸುವುದರ ಅರ್ಥವೇನು ಎಂದೂ ಕ್ರಿಕೆಟ್ ಪ್ರೇಮಿಗಳು ಬಿಸಿಸಿಐ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ‘ಆಟಗಾರರು ಏನು ಬೇಕಾದರೂ ತಿನ್ನಬಹುದು. ಆದರೆ ಹಲಾಲ್ ಮಾಂಸವನ್ನು ಕಡ್ಡಾಯಗೊಳಿಸುವ ಹಕ್ಕನ್ನು ಬಿಸಿಸಿಐಗೆ ನೀಡಿದವರು ಯಾರು? ಇದು ಕಾನೂನು ಬಾಹಿರ ಮತ್ತು ನಾವು ಇದಕ್ಕೆ ಅವಕಾಶ ನೀಡುವುದಿಲ್ಲ. ಬಿಸಿಸಿಐ ಕೂಡಲೆ ಈ ಸೂಚನೆ ಹಿಂಪಡೆಯಬೇಕು ಎಂದು ಬಿಜೆಪಿ ವಕ್ತಾರ ಹಾಗೂ ವಕೀಲ ಗೌರವ್ ಗೋಯೆಲ್ ಟ್ವಿಟರ್‌ನಲ್ಲಿ ತಿಳಿಸಿದ್ದಾರೆ.

    ಇನ್ನು ಬೀಫ್​ ಮತ್ತು ಫೋರ್ಕ್‌ಗಳನ್ನು ತಂಡ ಮೆನುವಿನಿಂದ ಕೈಬಿಟ್ಟಿರುವುದರಲ್ಲಿ ಯಾವುದೇ ಅಚ್ಚರಿ ಇಲ್ಲ ಎಂದು ಮಾಜಿ ಆಟಗಾರರೊಬ್ಬರು ಹೇಳಿದ್ದಾರೆ. ಯಾಕೆಂದರೆ ಭಾರತದಲ್ಲಿ ಆಡುವಾಗ ಯಾವತ್ತೂ ಈ ಆಹಾರ ತಂಡದ ಮೆನುವಿನಲ್ಲಿ ಕಾಣಿಸಿಕೊಂಡಿದ್ದೇ ಇಲ್ಲವಂತೆ.

    ಕ್ರಿಕೆಟ್ ಜಗತ್ತು ಕಂಡ ಅತಿ ವೇಗದ ಬೌಲರ್‌ಗೆ ಈಗ ಓಡಲಾಗದು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts