More

    ಟೀಂ ಇಂಡಿಯಾ ಟೆಸ್ಟ್​ ಆಟಗಾರರಿಗೆ ವಿಶೇಷ ವೇತನ ಘೋಷಣೆ ಮಾಡಿದ ಬಿಸಿಸಿಐ

    ಮುಂಬೈ: ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯನ್ನು ಭಾರತ 4-1 ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ ಬೆನ್ನೆಲ್ಲೇ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಕಾರ್ಯದರ್ಶಿ ಜಯ್ ಶಾ ಅವರು ಟೀಂ ಇಂಡಿಯಾ ಆಟಗಾರರಿಗೆ ಶುಭ ಸುದ್ದಿ ನೀಡಿದ್ದಾರೆ.

    ವಾರ್ಷಿಕ ಒಡಂಬಡಿಕೆಯ ವೇತನದ ಜತೆಗೆ ಹೆಚ್ಚುವರಿ ಮೊತ್ತ ನೀಡುವ ಘೋಷಣೆ ಮಾಡಿದ್ದಾರೆ. ಪಂದ್ಯ ಮುಗಿಯುತ್ತಿದ್ದಂತೆ ಜಯ್​ ಶಾ ಅವರು ಟ್ವೀಟ್​ ಮಾಡುವ ಮೂಲಕ ಇದನ್ನು ಪ್ರಕಟಿಸಿದರು.

    ಪ್ರಸ್ತುತ ಭಾರತದಲ್ಲಿ ಟೆಸ್ಟ್‌ ಪಂದ್ಯವೊಂದಕ್ಕೆ ಆಟಗಾರರಿಗೆ ಲಭಿಸುವ ವೇತನ 15 ಲಕ್ಷ ರೂ. ಐಪಿಎಲ್‌ ಬಳಿಕ ಒಂದು ಋತುವಿನ ಎಲ್ಲ ಟೆಸ್ಟ್‌ ಸರಣಿಗಳನ್ನು ಆಡುವ ಆಟಗಾರರಿಗೆ ಬೋನಸ್‌ ರೂಪದ ನೂತನ ಮಾದರಿಯಲ್ಲಿ ಉದಾಹರಣೆಗೆ ಒಂಬತ್ತು-ಪಂದ್ಯಗಳ ಋತುವಿನಲ್ಲಿ ಕನಿಷ್ಠ 5ರಿಂದ 6 ಟೆಸ್ಟ್‌ಗಳನ್ನು ಆಡುವ ಆಟಗಾರರು ಪ್ರತಿ ಪಂದ್ಯಕ್ಕೆ 15 ಲಕ್ಷದ ಬದಲಾಗಿ ಇನ್ನು ಮುಂದೆ ಪ್ರತಿ ಪಂದ್ಯಕ್ಕೆ 30 ಲಕ್ಷ ಪಡೆಯಲಿದ್ದಾರೆ.

    ಹಾಗೆಯೇ ವರ್ಷವೊಂದರಲ್ಲಿ ಕನಿಷ್ಠ 75 ಪ್ರತಿಶತ ಪಂದ್ಯಗಳಲ್ಲಿ ಕಾಣಿಸಿಕೊಳ್ಳುವ ಪ್ರತಿಯೊಬ್ಬ ಆಟಗಾರನ ವೇತನವು ಪ್ರತಿ ಪಂದ್ಯಕ್ಕೆ 22.5 ಲಕ್ಷದಿಂದ 45 ಲಕ್ಷಕ್ಕೆ ದ್ವಿಗುಣಗೊಂಡಿದೆ. ವರ್ಷದ ಎಲ್ಲ ಟೆಸ್ಟ್‌ ಸರಣಿಗಳಲ್ಲಿ ಪಾಲ್ಗೊಳ್ಳುವ ಆಟಗಾರರಿಗಷ್ಟೇ ಇದು ಅನ್ವಯವಾಗುತ್ತದೆ.

    ಆಟಗಾರರು ಟೆಸ್ಟ್‌ ಕ್ರಿಕೆಟ್‌ನತ್ತ ಹೆಚ್ಚಿನ ಆಸಕ್ತಿ ವಹಿಸಬೇಕು, ಹೆಚ್ಚೆಚ್ಚು ಟೆಸ್ಟ್‌ ಪಂದ್ಯಗಳನ್ನು ಆಡಬೇಕು, ಸಾಂಪ್ರದಾಯಿಕ ಕ್ರಿಕೆಟನ್ನು ಇನ್ನಷ್ಟು ಜನಪ್ರಿಯಗೊಳಿಸಬೇಕು ಎನ್ನುವುದು ಇದರ ಉದ್ದೇಶ ಎಂದು ಜಯ್​ ಶಾ ಅವರು ಅಭಿಪ್ರಾಯಪಟ್ಟಿದ್ದಾರೆ.

    ಜಯ್​ ಶಾ ಅವರು ಬಿಸಿಸಿಐ ಕಾರ್ಯದರ್ಶಿಯಾದ ಬಳಿಕ ಅನೇಕ ಹೊಸ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಇದರಲ್ಲಿ ಮಹಿಳಾ ಕ್ರಿಕೆಟ್​ ಲೀಗ್​ ಮತ್ತು ಮಹಿಳಾ ಕ್ರಿಕೆಟಿಗರಿಗೂ ಪುರುಷರಂತೆ ಸಮಾನವಾದ ವೇತನ ಪದ್ಧತಿ ಪ್ರಾಮುಖ್ಯವಾದದ್ದು.

    ಇಂಗ್ಲೆಂಡ್​​ ವಿರುದ್ಧ ಟೀಂ ಇಂಡಿಯಾಗೆ ಭರ್ಜರಿ ಗೆಲುವು! ಸರಣಿ ಕೈವಶ ಮಾಡಿಕೊಂಡ ರೋಹಿತ್​ ಪಡೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts