More

    ಡಿಸೆಂಬರ್ 24ರಂದು ಬಿಸಿಸಿಐ ಮಹತ್ವದ ಸಭೆ, ಐಪಿಎಲ್‌ಗೆ 2 ಹೊಸ ತಂಡಗಳ ಸೇರ್ಪಡೆ ಬಗ್ಗೆ ಚರ್ಚೆ

    ನವದೆಹಲಿ: ಮುಂದಿನ ಐಪಿಎಲ್ ಟೂರ್ನಿಗೆ 2 ಹೊಸ ತಂಡಗಳ ಸೇರ್ಪಡೆಗೆ ಅನುಮೋದನೆ ಪಡೆದುಕೊಳ್ಳಲು ಬಿಸಿಸಿಐನ ವಾರ್ಷಿಕ ಮಹಾಸಭೆ (ಎಜಿಎಂ) ಡಿಸೆಂಬರ್ 24ರಂದು ನಡೆಯಲಿದೆ. ಐಸಿಸಿಗೆ ಭಾರತದ ಪ್ರತಿನಿಧಿಗಳ ಆಯ್ಕೆ, ಮೂವರು ಆಯ್ಕೆಗಾರರ ನೇಮಕ ಸಹಿತ ಒಟ್ಟಾರೆ 23 ಅಂಶಗಳ ಅಜೆಂಡಾವನ್ನು ಈ ಮಹತ್ವದ ಸಭೆ ಹೊಂದಿದೆ.

    ಎಜಿಎಂಗೆ 21 ದಿನ ಮುಂಚಿತವಾಗಿ ತನ್ನ ಎಲ್ಲ ಸದಸ್ಯ ಸಂಸ್ಥೆಗಳಿಗೆ ನೀಡಲಾಗಿರುವ ನೋಟಿಸ್‌ನಲ್ಲಿ ಬಿಸಿಸಿಐ ಈ 23 ಅಂಶಗಳ ಬಗ್ಗೆ ಉಲ್ಲೇಖ ಮಾಡಿದೆ. ಈ ಪೈಕಿ ಐಪಿಎಲ್ ತಂಡಗಳ ಸಂಖ್ಯೆಯನ್ನು 10ಕ್ಕೇರಿಸಲು ಅಂಗೀಕಾರ ಪಡೆದುಕೊಳ್ಳುವುದು ಮಹತ್ವದ ವಿಚಾರವಾಗಿದೆ. ಐಪಿಎಲ್‌ನ 2 ಹೊಸ ತಂಡಗಳ ಪೈಕಿ ಒಂದು ್ರಾಂಚೈಸಿ ಖಂಡಿತವಾಗಿಯೂ ಅಹಮದಾಬಾದ್‌ನಿಂದ ಇರಲಿದೆ ಎನ್ನಲಾಗಿದೆ. ಅದಾನಿ ಗ್ರೂಪ್ ಮತ್ತು ಈ ಹಿಂದೆ ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್ ತಂಡದ ಒಡೆತನ ಹೊಂದಿದ್ದ ಸಂಜೀವ್ ಗೋಯೆಂಕಾರ ಆರ್‌ಪಿಜಿ ಗ್ರೂಪ್ ಹೊಸ ತಂಡಗಳ ಖರೀದಿಗೆ ಹೆಚ್ಚಿನ ಆಸಕ್ತಿ ಹೊಂದಿವೆ ಎನ್ನಲಾಗಿದೆ.

    ಐಸಿಸಿ ಮತ್ತು ಏಷ್ಯನ್ ಕ್ರಿಕೆಟ್ ಕೌನ್ಸಿಲ್‌ಗೆ ಬಿಸಿಸಿಐ ಪ್ರತಿನಿಧಿ ಆಯ್ಕೆಯಾಗಬೇಕಾಗಿದ್ದು, ಮಂಡಳಿಯ ಕಾರ್ಯದರ್ಶಿ ಜಯ್ ಷಾ ಅವರಿಗೆ ಈ ಅವಕಾಶ ಒಲಿಯುವ ನಿರೀಕ್ಷೆ ಇದೆ. ಆಯ್ಕೆ ಸಮಿತಿಗೆ ಮೂವರು ಹೊಸ ಸದಸ್ಯರ ಮತ್ತು ಅಧ್ಯಕ್ಷರ ನೇಮಕದ ಬಗ್ಗೆಯೂ ಸಭೆಯಲ್ಲಿ ನಿರ್ಧಾರ ಕೈಗೊಳ್ಳಬೇಕಾಗಿದೆ. ಮಂಡಳಿಯ ಹೊಸ ಸಂವಿಧಾನದ ಅನ್ವಯ ಅಂಪೈರ್ಸ್‌ ಸಮಿತಿಯ ರಚನೆ ಆಗಬೇಕಾಗಿದ್ದು, ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಗೆ (ಎನ್‌ಸಿಎ) ಸಂಬಂಧಿತ ವಿಚಾರಗಳ ಬಗ್ಗೆಯೂ ಸಭೆಯಲ್ಲಿ ಮಹತ್ವದ ಚರ್ಚೆ ನಡೆಯುವ ನಿರೀಕ್ಷೆ ಇದೆ.

    2021ರ ಭಾರತ ತಂಡದ ವೇಳಾಪಟ್ಟಿ, ಟಿ20 ವಿಶ್ವಕಪ್ ಟೂರ್ನಿಯ ಸಿದ್ಧತೆ ಮತ್ತು ತೆರಿಗೆ ವಿಚಾರದ ಚರ್ಚೆ ನಡೆಯಲಿದೆ. 2028ರ ಲಾಸ್ ಏಂಜಲಿಸ್ ಒಲಿಂಪಿಕ್ಸ್‌ಗೆ ಕ್ರಿಕೆಟ್ ಸೇರ್ಪಡೆಯ ಬಗ್ಗೆ ತನ್ನ ನಿಲುವನ್ನೂ ಬಿಸಿಸಿಐ ಸಭೆಯಲ್ಲಿ ಅಂತಿಮಗೊಳಿಸಬೇಕಿದೆ. ಮಹಿಮ್ ವರ್ಮ ರಾಜೀನಾಮೆಯ ಬಳಿಕ ತೆರವಾಗಿರುವ ಮಂಡಳಿಯ ಉಪಾಧ್ಯಕ್ಷರ ಸ್ಥಾನದ ಚುನಾವಣೆಯೂ ಸಭೆಯಲ್ಲಿ ನಡೆಯಬೇಕಿದೆ. ಹೊಸ ಉಪಾಧ್ಯಕ್ಷರ ಆಯ್ಕೆ ಅವಿರೋಧವಾಗಿ ನಡೆಯುವ ನಿರೀಕ್ಷೆ ಇದೆ.

    ಬಿಸಿಸಿಐ ಸಭೆಯ ಪ್ರಮುಖ ಅಜೆಂಡಾ:
    *ಉಪಾಧ್ಯಕ್ಷರ ಚುನಾವಣೆ.
    *ಐಪಿಎಲ್ ಆಡಳಿತ ಮಂಡಳಿಗೆ ಇಬ್ಬರು ಪ್ರತಿನಿಧಿಗಳ ಆಯ್ಕೆ.
    *2020-21ರ ವಾರ್ಷಿಕ ಬಜೆಟ್ ಅಂಗೀಕಾರ.
    *ಒಂಬುಡ್ಸ್‌ಮನ್-ಎಥಿಕ್ಸ್ ಅಧಿಕಾರಿ ನೇಮಕ ಅಂಗೀಕಾರ.
    *ಕ್ರಿಕೆಟ್ ಸಮಿತಿ ಮತ್ತು ಸ್ಥಾಯಿ ಸಮಿತಿಯ ರಚನೆ.
    *ಅಂಪೈರ್ಸ್‌ ಸಮಿತಿಯ ನೇಮಕ.
    *ಐಸಿಸಿ, ಏಷ್ಯನ್ ಕ್ರಿಕೆಟ್ ಕೌನ್ಸಿಲ್‌ಗೆ ಪ್ರತಿನಿಧಿಗಳ ಆಯ್ಕೆ.
    *2 ಹೊಸ ಐಪಿಎಲ್ ತಂಡಗಳ ಟೆಂಡರ್‌ಗೆ ಒಪ್ಪಿಗೆ.
    *2028ರ ಲಾಸ್ ಏಂಜಲಿಸ್ ಒಲಿಂಪಿಕ್ಸ್‌ಗೆ ಕ್ರಿಕೆಟ್ ಸೇರ್ಪಡೆ ಕುರಿತು ಮಂಡಳಿಯ ನಿಲುವು.
    *ಐಸಿಸಿ ವಿಷಯಗಳ ಮಾಹಿತಿ ಪರಿಷ್ಕರಣೆ.
    *ಎನ್‌ಸಿಎ ವಿಚಾರಗಳು.
    *ಭಾರತದಲ್ಲಿ ನಡೆಯಲಿರುವ 2021ರ ಟಿ20 ವಿಶ್ವಕಪ್.
    *ಭಾರತದ ಎಫ್​ಟಿಪಿ ವೇಳಾಪಟ್ಟಿ.

    ಏಕದಿನ ಕ್ರಿಕೆಟ್‌ನಲ್ಲಿ ಶತಕವಿಲ್ಲದೆ ವರ್ಷ ಮುಗಿಸಿದ ವಿರಾಟ್ ಕೊಹ್ಲಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts