More

    ಬೆಂಗಳೂರಿನ 35 ಜಂಕ್ಷನ್​ಗಳ ಸುಧಾರಣೆಗೆ ಬಜೆಟ್​ನಲ್ಲಿ 100 ಕೋಟಿ ರೂಪಾಯಿ ಮೀಸಲು: ಚಾಲುಕ್ಯ ವೃತ್ತದ ಬದಲಾಗಲಿರುವ ಸ್ವರೂಪ ಹೀಗಿದೆ ನೋಡಿ

    ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನ ಚಾಲುಕ್ಯ ವೃತ್ತದ ಸ್ವರೂಪ ಬದಲಾಗಲಿದೆ. ಬಿಬಿಎಂಪಿ ಮೇಯರ್ ಎಂ. ಗೌತಮ್​ ಕುಮಾರ್ ಕೆಲವು ದಿನಗಳ ಹಿಂದೆ ವಿಜಯವಾಣಿ ಕಚೇರಿಯಲ್ಲಿ ನಡೆದ ಫೋನ್ ಇನ್ ಕಾರ್ಯಕ್ರಮದ ವೇಳೆ ಈ ವಿಷಯ ಪ್ರಸ್ತಾಪಿಸಿದ್ದರು. ಈಗ ಚಾಲುಕ್ಯ ವೃತ್ತದ ಬದಲಾಗಲಿರುವ ಸ್ವರೂಪದ ನೀಲಿ ನಕ್ಷೆಯನ್ನು ಅವರು ಇಂದು ಸಂಜೆ ಟ್ವೀಟ್​ ಮೂಲಕ ಬಹಿರಂಗಪಡಿಸಿದ್ದಾರೆ.

    ಬೆಂಗಳೂರಿನ ಚಾಲುಕ್ಯ ವೃತ್ತ ಸೇರಿ 35 ಜಂಕ್ಷನ್​ಗಳ ನೋಟ ಮತ್ತು ಸಂಚಾರ ಅನುಭವವನ್ನು ಸುಗಮಗೊಳಿಸುವ ಸಲುವಾಗಿ ಬಿಬಿಎಂಪಿ ಬೃಹತ್ ಯೋಜನೆಯೊಂದನ್ನು ಅಂತಿಮಗೊಳಿಸಿದೆ. ಇದರ ಅಂದಾಜು ವೆಚ್ಚ 100 ಕೋಟಿ ರೂಪಾಯಿ ಆಗಿರಲಿದೆ ಎಂದು ಮೇಯರ್ ವಿವರಿಸಿದ್ದಾರೆ.

    ಈ ಪೈಕಿ ಚಾಲುಕ್ಯ ಸರ್ಕಲ್ ನ ಸುಧಾರಣೆಗೆ ಮೂರು ಕೋಟಿ ರೂಪಾಯಿ ಮೀಸಲಿಡಲು ತೀರ್ಮಾನಿಸಲಾಗಿದೆ. ಈ ಯೋಜನೆ ಆರಂಭದ ಪ್ರಾಜೆಕ್ಟ್​ ಇದುವೇ ಆಗಿದ್ದು, ಶೀಘ್ರವೇ ಚಾಲನೆ ಸಿಗಲಿದೆ. ಬಿಬಿಎಂಪಿ ಸಿದ್ಧಪಡಿಸಿರುವ ಈ ಪ್ರಸ್ತಾವನೆ ಈ ಸಲದ ಬಜೆಟ್​ನಲ್ಲಿ ಒಳಗೊಂಡಿರಲಿದೆ ಎಂದು ಮೇಯರ್ ಗೌತಮ್ ಕುಮಾರ್ ಹೇಳಿದ್ದಾರೆ.

    ಮೂವತ್ತೈದು ಜಂಕ್ಷನ್​ಗಳು ಇಂತಿವೆ: ಚಾಲುಕ್ಯ ಸರ್ಕಲ್​, ಅನಿಲ್ ಕುಂಬ್ಳೆ ಸರ್ಕಲ್, ಟ್ರಿನಿಟಿ ಸರ್ಕಲ್, ಲಾಲ್​ಬಾಗ್ ವೆಸ್ಟ್​ಗೇಟ್ ಜಂಕ್ಷನ್, ಸುರಂಜನ್ ದಾಸ್ ರಸ್ತೆ ಮತ್ತು ಬಿಇಎಂಎಲ್ ಜಂಕ್ಷನ್, ಮೈಸೂರು ಬ್ಯಾಂಕ್ ಜಂಕ್ಷನ್, ಮದರ್ ತೆರೇಸಾ ಮತ್ತು ಓಲ್ಡ್ ರೇಸ್ ಕೋರ್ಸ್ ರೋಡ್ ಜಂಕ್ಷನ್​, ಕೃಪಾನಿಧಿ ಕಾಲೇಜು-ಸರ್ಜಾಪುರ ರಸ್ತೆ ಜಂಕ್ಷನ್​, ಟಿ.ಸಿ.ಎಂ ರಾಯನ್​ ರಸ್ತೆ ಮತ್ತು ಬಿನ್ನಿ ಮಿಲ್​ ರಸ್ತೆ ಜಂಕ್ಷನ್​, ಡಾ.ರಾಜ್​ ಕುಮಾರ್ ರೋಡ್- ಮಾಗಡಿ ರೋಡ್ ಜಂಕ್ಷನ್, ಡಾ.ರಾಜ್​ ಕುಮಾರ್ ರೋಡ್​-ನವರಂಗ್ ಥಿಯೇಟರ್ ಜಂಕ್ಷನ್​, ಶೇಷಾದ್ರಿಪುರಂ ಪೊಲೀಸ್ ಸ್ಟೇಷನ್ ಜಂಕ್ಷನ್​, ರಾಜಾಜಿನಗರ ಇಎಸ್ಐ ಆಸ್ಪತ್ರೆ ಜಂಕ್ಷನ್, ಮೋದಿ ಆಸ್ಪತ್ರೆ ಜಂಕ್ಷನ್, ಕೆ.ಜಿ.ರಸ್ತೆ ಕೆಂಪೇಗೌಡ ಸರ್ಕಲ್ ಜಂಕ್ಷನ್, ಕೆ.ಜಿ.ರಸ್ತೆ ಸಾಗರ್ ಥಿಯೇಟರ್ ಜಂಕ್ಷನ್, ಧನ್ವಂತರಿ ರಸ್ತೆ ಉಪ್ಪಾರಪೇಟೆ ಪೊಲೀಸ್ ಸ್ಟೇಷನ್ ಜಂಕ್ಷನ್, ಸಿ.ವಿ.ರಾಮನ್ ರೋಡ್- ಎಂ.ಎಸ್.ರಾಮಯ್ಯ ರೋಡ್ ಜಂಕ್ಷನ್, ಎಂ.ಎಸ್.ರಾಮಯ್ಯ- ಮತ್ತಿಕೆರೆ ಜಂಕ್ಷನ್, ಪ್ಯಾಲೇಸ್ ರೋಡ್​-ಎಂ.ವಿ.ಜಯರಾಮನ್ ರೋಡ್​ ಜಂಕ್ಷನ್, ಎಂ.ಎಂ.ರೋಡ್​-ಟ್ಯಾನೆರಿ ರೋಡ್ ಜಂಕ್ಷನ್, ತರಳಬಾಳು ಜಂಕ್ಷನ್, ಕಮ್ಮನಹಳ್ಳಿ ಸರ್ಕಲ್ ಜಂಕ್ಷನ್​, ಕಮ್ಮನಹಳ್ಳಿ ಮೇನ್ ರೋಡ್​ – ಮರಿಯಪ್ಪ ಸರ್ಕಲ್ ಜಂಕ್ಷನ್, ಬಾಣಸವಾಡಿ ಮೇನ್ ರೋಡ್​- ಏಳನೇ ಮುಖ್ಯರಸ್ತೆ ಜಂಕ್ಷನ್, ಬಾಣಸವಾಡಿ ಮೇನ್ ರೋಡ್​- 100 ಫೀಟ್​ ರೋಡ್ ಜಂಕ್ಷನ್​, ಕೋಲ್ಸ್​ ರೋಡ್-ಮಸೀದಿ ರಸ್ತೆ ಜಂಕ್ಷನ್, ಪಾಟೆರಿ ರೋಡ್​- ಕೂಕ್ಸನ್ ರೋಡ್ ಜಂಕ್ಷನ್​, ನಾಗವಾರ ಮೇನ್ ರೋಡ್​- ಗೋವಿಂದಪುರ ರೋಡ್ ಜಂಕ್ಷನ್, ಬಿಟಿಎಸ್ ಜಂಕ್ಷನ್​, ಮಿನರ್ವ ಸರ್ಕಲ್​, ಬಿಎಂಸಿ ಜಂಕ್ಷನ್, ಶಿವಶಂಕರ ರಾವ್ ರೋಡ್​- ಕೆಆರ್ ರೋಡ್ ಜಂಕ್ಷನ್​, ಯಡಿಯೂರು ಸರ್ಕಲ್​-ಕನಕಪುರ ರೋಡ್ ಜಂಕ್ಷನ್, ವಿದ್ಯಾಪೀಠ ಸರ್ಕಲ್​.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts