More

    ಕರೊನಾ 4ನೇ ಅಲೆ ಎದುರಿಸಲು ಬಿಬಿಎಂಪಿ ಸನ್ನದ್ಧ: ಮುಖ್ಯ ಆಯುಕ್ತ ತುಷಾರ್ ಗಿರಿನಾಥ್

    ಬೆಂಗಳೂರು: ಕರೊನಾ 4ನೇ ಅಲೆ ಎದುರಿಸಲು ಪಾಲಿಕೆ ಸರ್ವಸನ್ನದ್ಧವಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದಾರೆ.

    ಪಾಲಿಕೆ ವ್ಯಾಪ್ತಿಯ ಆಸ್ಪತ್ರೆಗಳಲ್ಲಿ ಹಾಸಿಗೆ, ಆಕ್ಸಿಜನ್ ಸಾಂಧ್ರಕಗಳು, ವೆಂಟಿಲೇಟರ್, ಐಸಿಯು ಬೆಡ್ ಮತ್ತು ಆಕ್ಸಿಜನ್ ಘಟಕಗಳು ಎಷ್ಟಿವೆ ಸೇರಿ ಇತರ ಮಾಹಿತಿ ಪಡೆಯಲಾಗುತ್ತಿದೆ. ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮದ (ಕೆಎಸ್‌ಎಂಎಸ್‌ಸಿಎಲ್) ಜತೆ ಔಷಧ ಸರಬರಾಜು ವಿಚಾರ ಬಗ್ಗೆ ಸಮನ್ವಯತೆ ಹೊಂದಿದ್ದೇವೆ. ಕರೊನಾ ಒಂದೇ ಅಲೆಯಿಂದ 3ನೇ ಅಲೆ ಸಂದರ್ಭದಲ್ಲಿ ಏನಾಗಿದೆ ಎಂಬುದರ ಬಗ್ಗೆ ನಮಗೂ ಅನುಭವ ಆಗಿದೆ. ಅಂಥ ಪರಿಸ್ಥಿತಿ ಮರುಕಳಿಸದಂತೆ 4ನೇ ಅಲೆಯನ್ನು ಸಮರ್ಥವಾಗಿ ಎದುರಿಸಲು ನಾವೆಲ್ಲರೂ ಸಿದ್ಧವಾಗಿದ್ದೇವೆ. ಇದಕ್ಕಾಗಿ ಬೇಕಾದ ಎಲ್ಲ ವ್ಯವಸ್ಥೆಯನ್ನೂ ಮಾಡಲಾಗುತ್ತಿದೆ ಎಂದು ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮುಖ್ಯ ಆಯುಕ್ತರು ಮಾಹಿತಿ ನೀಡಿದರು.

    4ನೇ ಅಲೆಯು ಸದ್ಯ ಪ್ರಾರಂಭಿಕ ಹಂತದಲ್ಲಿದ್ದು, ಕಡಿಮೆ ಪ್ರಮಾಣದಲ್ಲಿ ದೈನಂದಿನ ಕೇಸ್‌ಗಳು ವರದಿಯಾಗುತ್ತಿವೆ. ಕೋವಿಡ್ ತಾಂತ್ರಿಕ ಸಲಹಾ ಸಮಿತಿ ನೀಡುವ ಶಿಫಾರಸ್ಸುಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುವುದು. ಕರೊನಾ ನಿಯಂತ್ರಿಸಲು ಸರ್ಕಾರ ಹೊರಡಿಸಿರುವ ಮಾರ್ಗಸೂಚಿಗಳನ್ನು ಯಥವತ್ತಾಗಿ ಪಾಲಿಕೆ ವ್ಯಾಪ್ತಿಯಲ್ಲಿ ಅನುಷ್ಠಾನಕ್ಕೆ ತರಲಾಗುವುದು. ಇದರ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಆಸ್ಪತ್ರೆಗಳ ಹೊರ ರೋಗಿಗಳ ವಿಭಾಗದಲ್ಲಿ ರೋಗಿಗಳ ಸಂಖ್ಯೆ ಹೆಚ್ಚಿಲ್ಲ. ಮುನ್ನೆಚ್ಚರಿಕಾ ಕ್ರಮವಾಗಿ ಜನರು ಸಾರ್ವಜನಿಕರ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದು, ವ್ಯಕ್ತಿಗತ ಅಂತರ ಪಾಲನೆ ಮಾಡಬೇಕೆಂದು ತುಷಾರ್ ಗಿರಿನಾಥ್ ಸಲಹೆ ನೀಡಿದರು.

    ಜನವರಿ ಕೊನೇ ವಾರದಲ್ಲಿ ಎಕ್ಸ್‌ಪೈರಿ: ಬೂಸ್ಟರ್ ಡೋಸ್ ಮತ್ತು ಕೋವ್ಯಾಕ್ಸಿನ್ ಸಾಕಷ್ಟು ಪ್ರಮಾಣದಲ್ಲಿ ದಾಸ್ತಾನು ಇದೆ. ಸದ್ಯ ಕೋವಿಶೀಲ್ಡ್ ಲಭ್ಯತೆ ಇಲ್ಲ. ಬೇಡಿಕೆ ಅನುಗುಣವಾಗಿ ಕೋವಿಶೀಲ್ಡ್ ಪೂರೈಸುವ ಸಂಬಂಧ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಕಳೆದ ವರ್ಷ ಪಾಲಿಕೆ ವ್ಯಾಪ್ತಿಯಲ್ಲಿ ಶೇ.90 ಮಂದಿ ಕೋವಿಶೀಲ್ಡ್ ಪಡೆದಿದ್ದರೆ, 9-10 ಲಕ್ಷ ಮಂದಿ ಕೋವಾಕ್ಸಿನ್ ತೆಗೆದುಕೊಂಡಿದ್ದಾರೆ. 45 ವರ್ಷ ಮೇಲ್ಪಟ್ಟವವರು ಬೂಸ್ಟರ್ ಡೋಸ್ ಪಡೆಯುತ್ತಿದ್ದಾರೆ. ಹೆಚ್ಚು ಮಂದಿ ಕೋವಿಡ್‌ಶೀಲ್ಡ್ ಲಸಿಕೆ ಪಡೆದಿರುವ ಹಿನ್ನೆಲೆಯಲ್ಲಿ ಕೋವ್ಯಾಕ್ಸಿನ್ ಉಳಿದಿದೆ. ಜನವರಿ ಕೊನೆಯ ವಾರದಲ್ಲಿ ಬೂಸ್ಟರ್ ಡೋಸ್ ಅವಧಿ ಮುಗಿಯಲಿದೆ. ಅಷ್ಟರೊಳಗೆ ಅವಶ್ಯಕತೆ ಇರುವವರಿಗೆ ಇದನ್ನು ಹಾಕಲಾಗುವುದು ಎಂದು ತುಷಾರ್ ಗಿರಿನಾಥ್ ಸ್ಪಷ್ಟಪಡಿಸಿದರು. ಕೋವಾಕ್ಸಿನ್ ಬಳಕೆ ಹೆಚ್ಚಿರುವ ಕಡೆಗಳಲ್ಲಿ ನಮ್ಮಲ್ಲಿರುವ ಕೋವಾಕ್ಸಿನ್ ಔಷಧವನ್ನು ಅಲ್ಲಿಗೆ ಕಳುಹಿಸಲಾಗುವುದು. ಉಳಿದ ಔಷಧಗಳನ್ನು ಸರ್ಕಾರಕ್ಕೆ ಕಳುಹಿಸಲಾಗುವುದು ಎಂದು ಹೇಳಿದ ಅವರು, ಹೊಸ ವರ್ಷದ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಪಬ್ ಮತ್ತು ಬಾರ್ ಮಾಲೀಕರ ಸಂಘಗಳು ನಮಗೆ ನೀಡಿರುವ ಸಲಹೆಗಳನ್ನು ಆರೋಗ್ಯ ಇಲಾಖೆಗೆ ರವಾನಿಸಲಾಗುವುದು. ಜಲಮಂಡಳಿ ಸಹಯೋಗದಲ್ಲಿ ಕೊಳಚೆ ನೀರಿನ ಸ್ಯಾಂಪಲ್ ಪಡೆದು ವೈರಸ್ ಇರುವ ಬಗ್ಗೆ ಪರೀಕ್ಷೆ ನಡೆಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ವಿವರಿಸಿದರು.

    ಭಾರತ-ಚೀನಾ ಗಡಿ ಸಮೀಪ ಪ್ರಪಾತಕ್ಕೆ ಬಿದ್ದ ಭಾರತೀಯ ಸೇನಾ ವಾಹನ: ಮೂವರು ಆಫೀಸರ್​ ಸೇರಿ 16 ಸೈನಿಕರು ದುರ್ಮರಣ

    ಭಾರತ-ಚೀನಾ ಗಡಿ ಸಮೀಪ ಪ್ರಪಾತಕ್ಕೆ ಬಿದ್ದ ಭಾರತೀಯ ಸೇನಾ ವಾಹನ: ಮೂವರು ಆಫೀಸರ್​ ಸೇರಿ 16 ಸೈನಿಕರು ದುರ್ಮರಣ

    ಬಾಳಿ ಬದುಕಬೇಕಿದ್ದ ಮಗ-ಸೊಸೆ ಜತೆ ಸಾವಿನ ಮನೆಯ ಕದ ತಟ್ಟಿದ ತಾಯಿ! ಕಿರಿ ಮಗನ ತಪ್ಪಿಗೆ ನಡೆದೇ ಹೋಯ್ತು ಘೋರ ದುರಂತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts