More

    ಕರೊನಾ ಕಪಿಮುಷ್ಟಿ ಚುನಾವಣಾ ದೃಷ್ಟಿ: ಬಿಬಿಎಂಪಿ ಬಜೆಟ್​ನಲ್ಲಿ ಮಹಾನಗರ ಜನತೆಗೆ ಸಿಕ್ಕ ಬಂಪರ್​ ಕೊಡುಗೆಗಳೇನು?

    ಬೆಂಗಳೂರು: ಕರೊನಾ ಸಂಕಷ್ಟದ ನಡುವಿನಲ್ಲೆ ಅನಿವಾರ್ಯವೆಂಬಂತೆ ಬಿಬಿಎಂಪಿ 10,899 ಕೋಟಿ ರೂ. ಬಜೆಟ್ ಮಂಡಿಸಿದೆ. 10 ಸಾವಿರ ಲೀ. ವರೆಗೆ ಕಾವೇರಿ ನೀರನ್ನು ಉಚಿತವಾಗಿ ನೀಡುವ ಘೋಷಣೆಯನ್ನು ಮಹಾನಗರದ ಸಾಮಾನ್ಯವರ್ಗದ ಜನರ ಮತಗಳನ್ನು ಗುರಿಯಾಗಿರಿಸಿ ಮಾಡಲಾಗಿದೆ.

    ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷ ನೇತೃತ್ವದ ಅರವಿಂದ ಕೇಜ್ರಿವಾಲ್ ಸರ್ಕಾರ ಅಧಿಕಾರಕ್ಕೆ ಬರಲು ಪ್ರಮುಖ ಕಾರಣ ಎನ್ನಲಾಗುವ ಈ ಯೋಜನೆಯ ಫಲವನ್ನು ಆಡಳಿತಾರೂಢ ಬಿಜೆಪಿ ನಿರೀಕ್ಷಿಸಿದೆ. ಸ್ಮಾರ್ಟ್ ಶಿಕ್ಷಣ – ಭವಿಷ್ಯದ ಬೆಳಕು, ಶುದ್ಧ ಕುಡಿಯುವ ನೀರು-ಉತ್ತಮ ಆರೋಗ್ಯ, ಪರಿಸರ ಸಂರಕ್ಷಣೆ-ಉತ್ತಮ ನೈರ್ಮಲ್ಯ ಹಾಗೂ ಮೂಲ ಸೌಕರ್ಯ – ಸಮಗ್ರ ಅಭಿವೃದ್ಧಿ ಎಂಬ ನಾಲ್ಕು ದೃಷ್ಟಿಕೋನದಲ್ಲಿ ಪಾಲಿಕೆ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಎಲ್. ಶ್ರೀನಿವಾಸ್ ಬಜೆಟ್ ರೂಪಿಸಿ ಮಂಡಿಸಿದ್ದಾರೆ.

    ಇದೇ ಮೊದಲ ಬಾರಿಗೆ ವಿಡಿಯೋ ಕಾನ್ಪರೆನ್ಸಿಂಗ್ ಮೂಲಕ ಮಂಡಿಸಿದ ಬಜೆಟ್​ನಲ್ಲಿ ಅಹಿಂದ ಸಮುದಾಯವನ್ನು ಗಮನದಲ್ಲಿರಿಸಿಕೊಳ್ಳುವ ಜತೆಗೆ ಮಹಿಳೆ, ಅಂಗವಿಕಲ, ಸಾಮಾನ್ಯ ಜನರಿಗೂ ಪ್ರತ್ಯೇಕವಾಗಿ ಯೋಜನೆಗಳನ್ನು ಘೋಷಿಸಲಾಗಿದೆ. ಕೇಂದ್ರ ಸರ್ಕಾರದ ಒತ್ತಾಸೆ ಮೇರೆಗೆ ಉದ್ಯಮ ಸ್ನೇಹಿ ವಾತಾವರಣ, ಪೌರಕಾರ್ವಿುಕರಿಗೆ ಸಹಕಾರದ ಜತೆಗೆ ಬಿಜೆಪಿ ನಾಯಕ ಅನಂತಕುಮಾರ್ ಹೆಸರಿನಲ್ಲಿ ವಿದ್ಯಾರ್ಥಿಗಳಿಗೆ ಲ್ಯಾಪ್​ಟಾಪ್ ನೀಡಿಕೆ, ಪಂಡಿತ್ ದೀನದಯಾಳ್ ಉಪಾಧ್ಯಾಯ ಹೆಸರಿನಲ್ಲಿ ಮಕ್ಕಳ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ವಿುಸುವ ಘೋಷಣೆ ಮೂಲಕ ಚುನಾವಣೆಯತ್ತ ದೃಷ್ಟಿ ಹರಿಸಲಾಗಿದೆ. ನಾಡಪ್ರಭು ಕೆಂಪೇಗೌಡ ಹೆಸರಿನಲ್ಲಿ 8 ಸ್ವಾಗತ ಕಮಾನು ನಿರ್ವಣದ ಮೂಲಕ, ಬೆಂಗಳೂರಿಗರ ಮನಗೆಲ್ಲಲು ಯತ್ನಿಸಲಾಗಿದೆ. ಪಾಲಿಕೆ ಶಾಲೆಗಳ ಶಿಕ್ಷಕರಿಗೂ ಸಮವಸ್ತ್ರ ನೀಡುವ ಘೋಷಣೆ ಮಾಡಲಾಗಿದೆ. ಸಂಪನ್ಮೂಲ ಕ್ರೋಢೀಕರಣಕ್ಕೆ ತಂತ್ರಾಂಶ ಉನ್ನತೀಕರಣ ಕಾರ್ಯಕ್ರಮಗಳಿದ್ದು, ಹೊಸ ನೀತಿಯ ಜಾಹೀರಾತಿನ ಮೂಲಕವೂ ಆದಾಯ ನಿರೀಕ್ಷಿಸಲಾಗಿದೆ.

    ಆಸ್ತಿತೆರಿಗೆ ಬಾಕಿ ಇದ್ದರೆ ಇಸಿಯಲ್ಲಿ ನಮೂದು

    ಆಸ್ತಿತೆರಿಗೆಯಿಂದ 3,500 ಕೋಟಿ ರೂ. ನಿರೀಕ್ಷಿಸಲಾಗಿದೆ. ಆಸ್ತಿ ತೆರಿಗೆಯನ್ನು 3 ವರ್ಷಗಳಿಂದ ಬಾಕಿ ಉಳಿಸಿಕೊಂಡಿದ್ದರೆ ಆ ವಿವರವನ್ನು ಋಣಭಾರ ಪ್ರಮಾಣಪತ್ರದಲ್ಲಿ (ಇಸಿ) ನಮೂದಿಸಲು ಬಿಬಿಎಂಪಿ ನಿರ್ಧರಿಸಿದೆ. ಆಸ್ತಿತೆರಿಗೆ ಸಂಗ್ರಹ ಹೆಚ್ಚಳಕ್ಕೆ ಮತ್ತಷ್ಟು ಕ್ರಮಕ್ಕೆ ಮುಂದಾಗಿದ್ದು, ತೆರಿಗೆ ಸಂಗ್ರಹಕ್ಕೆ ಅಧಿಕಾರಿಗಳನ್ನು ಉತ್ತೇಜಿಸುವ ಸಲುವಾಗಿ ಪ್ರಸಕ್ತ ಸಾಲಿನಲ್ಲಿ ಆಸ್ತಿ ತೆರಿಗೆಯಲ್ಲಿ ಶೇ.95ಕ್ಕೂ ಹೆಚ್ಚು ಸಂಗ್ರಹ ಮಾಡುವ ಎಆರ್​ಒ ಮತ್ತು ಸಿಬ್ಬಂದಿಗೆ ಒಟ್ಟು 1 ಲಕ್ಷ ರೂ. ಪ್ರೋತ್ಸಾಹಧನ ನೀಡಲು ಪ್ರಸ್ತಾಪಿಸಲಾಗಿದೆ.

    ಇತರೆ ಆದಾಯ

    • ಹೊಸ ಜಾಹೀರಾತು ಬೈಲಾ ರೂಪಿಸಲಾಗಿದ್ದು, 40 ಕೋಟಿ ರೂ. ಆದಾಯ ನಿರೀಕ್ಷೆ
    • ಹೊಸ ವಲಯಗಳಲ್ಲಿ ಭೂ-ಪರಿವರ್ತನೆ ಯಾಗಿರುವ ಆಸ್ತಿಗಳಿಂದ ಇರುವ ಸುಧಾರಣಾ ಶುಲ್ಕ ವಸೂಲಿಯಿಂದ 300 ಕೋಟಿ ರೂ. ನಿರೀಕ್ಷೆ
    • ಕೇಂದ್ರ ಮತ್ತು ರಾಜ್ಯ ಸರ್ಕಾರಿ ಕಟ್ಟಡಗಳು ಹಾಗೂ ಆಸ್ತಿ ತೆರಿಗೆಯಿಂದ ವಿನಾಯಿತಿ ಹೊಂದಿರುವ ಶಿಕ್ಷಣ ಸಂಸ್ಥೆಗಳು ಆಸ್ತಿ ತೆರಿಗೆ ಮೇಲೆ ಸೇವಾ ಶುಲ್ಕ ವಸೂಲಿ
    • ಮುದ್ರಾಂಕ ಶುಲ್ಕದ ಮೇಲೆ ಶೇ.2 ಅಧಿಬಾರ ಶುಲ್ಕದಿಂದ 100 ಕೋಟಿ ರೂ. ನಿರೀಕ್ಷೆ

    ಬಿ ಖಾತಾ ಪರಿವರ್ತನೆ ನಿರೀಕ್ಷೆ

    ಬೆಂಗಳೂರಿನಲ್ಲಿ ಬಹಳ ವರ್ಷಗಳಿಂದ ಕೇಳಿಬರುತ್ತಿರುವ ಬಿ ಖಾತಾ ಪರಿವರ್ತನೆಯಿಂದ ಆದಾಯ ನಿರೀಕ್ಷೆಯನ್ನೇ ಬಿಬಿಎಂಪಿ ಮುಖ್ಯವಾಗಿ ಇರಿಸಿಕೊಂಡಿದೆ. ಪಾಲಿಕೆಯ ಸ್ವಂತ ಆದಾಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಬಿ ವಹಿಯಲ್ಲಿರುವ ಆಸ್ತಿಗಳನ್ನು ಎ ಖಾತಾಗಳಾಗಿ ಪರಿವರ್ತಿಸುವುದರಿಂದ ಹೆಚ್ಚಿನ ಆದಾಯ ಬರಲಿದ್ದು, ಈಗಾಗಲೇ ಸರ್ಕಾರಕ್ಕೆ ಸಲ್ಲಿಸಿರುವ ಪ್ರಸ್ತಾವನೆಗೆ ಅನುಮೋದನೆ ನಿರೀಕ್ಷಿಸಲಾಗಿದೆ. ಬಿಟ್ಟು ಹೋಗಿರುವ ಆಸ್ತಿಗಳನ್ನು ಗುರುತಿಸಿ ಆಸ್ತಿ ತೆರಿಗೆ ಜಾಲದೊಳಗೆ ತರಲು ವ್ಯಾಪಕ ಆಂದೋಲನ, ಹೊಸ ವಲಯಗಳಲ್ಲಿನ ಆಸ್ತಿಗಳ ಖಾತಾ ನಕಲು ಮತ್ತು ಖಾತಾ ದೃಢೀಕರಣ ಪತ್ರಗಳ ಗಣಕೀಕರಣ, ಆಸ್ತಿ ತೆರಿಗೆ ಪಾವತಿಯ ವಿಧಾನ ಸುಧಾರಣೆ ಪ್ರಸ್ತಾವಿಸಲಾಗಿದೆ. ಟೋಟಲ್ ಸ್ಟೇಷನ್ ಸರ್ವೆ ಮೂಲಕ ಎಲ್ಲಾ ವಲಯಗಳಿಂದ ಅಂದಾಜು ರೂ.325 ಕೋಟಿ ವ್ಯತ್ಯಾಸದ ಆಸ್ತಿ ತೆರಿಗೆ ಬಾಕಿ ಕಂಡುಬಂದಿದ್ದು ವಸೂಲಾತಿಗೆ ಉದ್ದೇಶಿಸಲಾಗಿದೆ. ಖಾತಾ ನಕಲು ಮತ್ತು ಖಾತಾ ಧೃಢೀಕರಣ ಪತ್ರದ ಶುಲ್ಕವನ್ನು ದ್ವಿಗುಣಗೊಳಿಸುವಂತಹ ಕ್ರಮಗಳ ಮೂಲಕ ಸಂಪನ್ಮೂಲ ಕ್ರೋಢೀಕರಣಕ್ಕೆ ಉದ್ದೇಶಿಸಲಾಗಿದೆ.

    ಅಹಿಂದಕ್ಕೆ 469 ಕೋಟಿ ರೂ.

    ಎಸ್​ಸಿಎಸ್​ಪಿ ಟಿಎಸ್​ಪಿ ಅಡಿಯಲ್ಲಿ ಪರಿಶಿಷ್ಟ ಜಾತಿ-ಪಂಗಡ ಹಾಗೂ ಪೌರ ಕಾರ್ವಿುಕರ ಕಲ್ಯಾಣಕ್ಕೆ ಅನೇಕ ಯೋಜನೆಗಳನ್ನು ಘೋಷಣೆ ಮಾಡಲಾಗಿದೆ. ಅದೇ ರೀತಿ ಅಲ್ಪಸಂಖ್ಯಾತ, ಹಿಂದುಳಿದ ವರ್ಗವನ್ನೂ ಸೇರಿ ಒಟ್ಟಾರೆ 469.76 ಕೋಟಿ ರೂ. ಮೊತ್ತದ ವಿವಿಧ ಯೋಜನೆ, ಅನುದಾನಗಳನ್ನು ಪ್ರಸ್ತಾಪಿಸಲಾಗಿದೆ.

    ಪೌರ ಕಾರ್ವಿುಕರು, ಮಾಲಿಗಳು, ಗ್ಯಾಂಗ್​ವುನ್​ಗಳ ಮಕ್ಕಳ ಶಿಕ್ಷಣಕ್ಕಾಗಿ ಆರ್ಥಿಕ ಸಹಾಯ ನೀಡಲು 5 ಕೋಟಿ ರೂ. ಮೀಸಲಿಡಲಾಗಿದೆ. ಪೌರ ಕಾರ್ವಿುಕರ ಮಧ್ಯಾಹ್ನದ ಬಿಸಿಯೂಕ್ಕಾಗಿ 15 ಕೋಟಿ ರೂ., ನಾಲ್ಕನೇ ದರ್ಜೆಯ ಕಾಯಂ ಮತ್ತು ಗುತ್ತಿಗೆ ನೌಕರರ ಕಲ್ಯಾಣಕ್ಕಾಗಿ 10 ಕೋಟಿ ರೂ., ಪೌರ ಕಾರ್ವಿುಕರು ಮತ್ತು ಕುಟುಂಬದ ಆರೋಗ್ಯ ಕಾರ್ಯಕ್ರಮಗಳಿಗೆ 1 ಕೋಟಿ ರೂ., ಪೌರ ಕಾರ್ವಿುಕರು ವೈಯಕ್ತಿಕ ಮನೆಯನ್ನು ಹೊಂದಲು ಆರ್ಥಿಕ ಸಹಾಯಕ್ಕಾಗಿ ಒಟ್ಟು 36 ಕೋಟಿ ರೂ., ಪೌರ ಕಾರ್ವಿುಕರಿಗೆ ಸ್ವಚ್ಛತಾ ಕಿಟ್ ನೀಡಲು 5 ಕೋಟಿ ರೂ., ಎಸ್​ಸಿಎಸ್​ಟಿ ಸಮುದಾಯದವರು ವೈಯಕ್ತಿಕ ಮನೆ ಹೊಂದಲು ಆರ್ಥಿಕ ಸಹಾಯಕ್ಕೆ ಪ್ರತಿ

    ವಾರ್ಡ್​ಗೆ 5 ಮನೆಗಳಂತೆ ರೂ.49.5 ಕೋಟಿ ಅನುದಾನ ನೀಡಲು ಉದ್ದೇಶಿಸಲಾಗಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ವೈಯಕ್ತಿಕ ಕಾರ್ಯಕ್ರಮಗಳಡಿಯಲ್ಲಿ ಆರ್ಥಿಕ ಸಹಾಯ ನೀಡಲು 1 ಕೋಟಿ ರೂ., ಆರೋಗ್ಯ ಕಾರ್ಯಕ್ರಮಕ್ಕೆ 5 ಕೋಟಿ ರೂ., ಶಿಕ್ಷಣ ಕಾರ್ಯಕ್ರಮಕ್ಕೆ 25 ಕೋಟಿ ರೂ., ಕೌಶಲ ಅಭಿವೃದ್ಧಿ ಕಾರ್ಯಕ್ರಮಕ್ಕೆ 5 ಕೋಟಿ ರೂ., ಪಾಲಿಕೆ ವ್ಯಾಪ್ತಿಯ ಸ್ಮಶಾನ -ರುದ್ರಭೂಮಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವವರಿಗೆ ವೈಯಕ್ತಿಕ ಮನೆ ನಿರ್ವಿುಸಿಕೊಡಲು 1 ಕೋಟಿ ರೂ., ವಸತಿ ಪ್ರದೇಶದಲ್ಲಿ ಮೂಲಸೌಕರ್ಯಕ್ಕೆ 75 ಕೋಟಿ ರೂ., ವೈಯಕ್ತಿಕ ಮತ್ತು ಸಮುದಾಯ ಅಭಿವೃದ್ದಿ ಕಾರ್ಯಕ್ರಮಕ್ಕೆ 5 ಕೋಟಿ ರೂ. ಸೇರಿ ಒಟ್ಟಾರೆ 361.34 ಕೋಟಿ ರೂ. ಒದಗಿಸಲು ಘೋಷಣೆ ಮಾಡಲಾಗಿದೆ. ಹಿಂದುಳಿದ ಮತ್ತು ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ವೈಯಕ್ತಿಕ ಮನೆ ನಿರ್ವಣಕ್ಕೆ 44.50 ಕೋಟಿ ರೂ., ಆರೋಗ್ಯ ಕಾರ್ಯಕ್ರಮಕ್ಕೆ 2 ಕೋಟಿ ರೂ., ಶಿಕ್ಷಣ ಕಾರ್ಯಕ್ರಮಕ್ಕೆ 5 ಕೋಟಿ ರೂ., ವಸತಿ ಪ್ರದೇಶದಲ್ಲಿ ಮೂಲಸೌಕರ್ಯಕ್ಕೆ 15 ಕೋಟಿ ರೂ. ಸೇರಿ ಒಟ್ಟಾರೆ 108.42 ಕೋಟಿ ರೂ. ಮೀಸಲಿಡಲಾಗಿದೆ.

    ಕೋವಿಡ್ ವಿರುದ್ಧ ಸೆಣಸಲು -ಠಿ;50 ಕೋಟಿ

    ವಿಶ್ವವನ್ನೇ ಕಾಡುತ್ತಿರುವ ಕರೊನಾ ಸೋಂಕನ್ನು ಎದುರಿಸಲು ಬಿಬಿಎಂಪಿ ವತಿಯಿಂದ 49.5 ಕೋಟಿ ರೂ. ನೀಡಲಾಗುವುದು ಎಂದು ಬಜೆಟ್​ನಲ್ಲಿ ತಿಳಿಸಲಾಗಿದೆ. ಕರೊನಾ ತಡೆಗಟ್ಟುವ ದೃಷ್ಟಿಯಿಂದ ವಿಪತ್ತು ನಿರ್ವಹಣೆಯನ್ನು ತುರ್ತಾಗಿ ಕೈಗೊಳ್ಳಲು ಮುಖ್ಯಮಂತ್ರಿಗಳ ವಿವೇಚನೆಗೆ ಒಳಪಟ್ಟಂತೆ ಹಣವನ್ನು ಬಳಸಬಹುದಾಗಿದೆ. ವಾರ್ಡ್ ಅನುದಾನದಲ್ಲಿ ಪ್ರತಿ ವಾರ್ಡ್​ನಿಂದ 25 ಲಕ್ಷ ರೂ.ನಂತೆ ಒಟ್ಟು 49.50 ಕೋಟಿ ರೂ. ಕರೊನಾ ವಿಪತ್ತು ನಿಧಿಗೆ ವರ್ಗಾಯಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಲಾಗಿದೆ.

    ಸಾಂಸ್ಕೃತಿಕ ನಗರವಾಗಿಸುವ ಉದ್ದೇಶ

    ನಾಡಪ್ರಭು ಕೆಂಪೇಗೌಡರ ಹೆಸರಿನಲ್ಲಿ ಬೊಮ್ಮನಹಳ್ಳಿ, ಮಹದೇವಪುರ, ಯಲಹಂಕ ಮತ್ತು ದಾಸರಹಳ್ಳಿ ವಲಯಗಳಲ್ಲಿ ಹೊಸದಾಗಿ ಪಾಲಿಕೆಯ ಶಾಲೆಗಳನ್ನು ನಿರ್ಮಾಣ ಮಾಡಲು ಉದ್ದೇಶಿಸಲಾಗಿದ್ದು, ಇದಕ್ಕಾಗಿ 10 ಕೋಟಿ ರೂ. ಮೀಸಲಿರಿಸಿದೆ. ಕೆಂಪೇಗೌಡ ದಿನಾಚರಣೆಯನ್ನು ಬೆಂಗಳೂರು ಹಬ್ಬವನ್ನಾಗಿ ಆಚರಿಸುವ ಸಲುವಾಗಿ ಕೆಂಪೇಗೌಡ ಜಯಂತಿಯಂದು ಅಣ್ಣಮ್ಮದೇವಿ ಉತ್ಸವ, ಕರಗ, ಕೆಂಪೇಗೌಡ ಜಯಂತಿ ಮತ್ತು ಊರ ಹಬ್ಬ ಆಚರಣೆಗೆ ಉತ್ತೇಜಿಸುವ ಮೂಲಕ ಬೆಂಗಳೂರನ್ನು ಸಾಂಸ್ಕೃತಿಕ ನಗರವನ್ನಾಗಿಸಲು ಉದ್ದೇಶಿಸಲಾಗಿದೆ.

    ಕೆಂಪೇಗೌಡ ಸ್ವಾಗತ ಕಮಾನು: ನಗರಕ್ಕೆ ಸಂಪರ್ಕ ಕಲ್ಪಿಸುವ ಮೈಸೂರು ರಸ್ತೆ, ಕೋಲಾರ ರಸ್ತೆ, ತುಮಕೂರು ರಸ್ತೆ, ಹೊಸೂರು ರಸ್ತೆ, ಕನಕಪುರ ರಸ್ತೆ, ದೇವನಹಳ್ಳಿ ರಸ್ತೆ, ದೊಡ್ಡಬಳ್ಳಾಪುರ ರಸ್ತೆ ಹಾಗೂ ಮಾಗಡಿ ರಸ್ತೆಗಳಿಗೆ ನಾಡಪ್ರಭು ಕೆಂಪೇಗೌಡರ ಹೆಸರಿನಲ್ಲಿ ಸ್ವಾಗತ ಕಮಾನು ನಿರ್ವಿುಸಲು 10 ಕೋಟಿ ರೂ., ಎಲ್ಲ ವಾರ್ಡ್​ಗಳ ರಸ್ತೆ ಅಭಿವೃದ್ಧಿಗೆ 451 ಕೋಟಿ ರೂ., ಕುಡಿವ ನೀರಿನ ಪೈಪ್​ಲೈನ್ ಅಳವಡಿಕೆಗೆ 50 ಕೋಟಿ ರೂ, ಶಾಲಾ ಕಾಲೇಜು ಮುಂದೆ ಡಿಜಿಟಲ್ ಫಲಕ ಅಳವಡಿಕೆಗೆ 5 ಕೋಟಿ ರೂ. ಮೀಸಲಿಡಲಾಗಿದೆ.

    ಕನ್ನಡ ಕಾರ್ಯಕರ್ತರಿಗೆ ತಲಾ -ಠಿ;1 ಲಕ್ಷ

    ಹೊಸ ಬೆಳಕು ಕಾರ್ಯಕ್ರಮದಲ್ಲಿ ಆರ್ಥಿಕ ಸಂಕಷ್ಟದಲ್ಲಿರುವ 75 ವರ್ಷ ಮೀರಿದ ಕನ್ನಡಪರ ಹೋರಾಟಗಾರರು ಮತ್ತು ಅಶಕ್ತ ಕನ್ನಡ ಕಲಾವಿದರಿಗೆ ಸ್ವಾತಂತ್ರ್ಯ ದಿನದಂದು ಆರ್ಥಿಕ ಸಹಾಯ ನೀಡಲು ಬಜೆಟ್​ನಲ್ಲಿ ಪ್ರಸ್ತಾಪಿಸಲಾಗಿದೆ. ಅರ್ಹ 100 ಜನರನ್ನು ಗುರುತಿಸಿ ತಲಾ 1 ಲಕ್ಷ ರೂ. ನೀಡಲು 1 ಕೋಟಿ ರೂ.ಮೀಸಲಿರಿಸಿದೆ.

    110 ಹಳ್ಳಿಗಳಿಗೆ ಸಿಸಿ ಕ್ಯಾಮರಾ

    ಬಿಬಿಎಂಪಿಗೆ ಸೇರ್ಪಡೆಯಾದ 110 ಹಳ್ಳಿಗಳಲ್ಲಿ ಸಿಸಿ ಕ್ಯಾಮರಾ ಅಳವಡಿಕೆ ಹಾಗೂ ವಿದ್ಯುತ್ ಫಿಟ್ಟಿಂಗ್​ಗೆ ತಲಾ 10 ಕೋಟಿ ರೂ.; ಪಾಲಿಕೆ ವಾಹನ ಚಾಲಕರ ವಾಸಕ್ಕಾಗಿ 100 ವಸತಿಗೃಹ ನಿರ್ವಿುಸಲು ಮೊದಲ ಹಂತವಾಗಿ 5 ಕೋಟಿ ರೂ.

    ಮಲ್ಟಿ ಲೆವೆಲ್ ರ್ಪಾಂಗ್

    ಸರ್ ಎಂ. ವಿಶ್ವೇಶ್ವರಯ್ಯ ಹೆಸರಿನಲ್ಲಿ ನಗರ ಕೆಲವು ಪ್ರದೇಶಗಳಲ್ಲಿ ಸಾರ್ವಜನಿಕ ಸಹಭಾಗಿತ್ವ ಯೋಜನೆ (ಪಿಪಿಪಿ) ಅಡಿಯಲ್ಲಿ ಮಲ್ಟಿ ಲೆವೆಲ್ ವಾಹನ ನಿಲ್ದಾಣ ನಿರ್ವಿುಸಲು ಯೋಜನೆ ರೂಪಿಸಲಾಗಿದೆ. ಪಾಲಿಕೆ ವ್ಯಾಪ್ತಿಯ ಪ್ರಮುಖ ಮತ್ತು ಸಣ್ಣ ರಸ್ತೆಗಳ ನಿರ್ವಹಣೆಗೆ 105 ಕೋಟಿ ರೂ., ಸೇತುವೆಗಳ ಸದೃಢತೆ ಕಾಪಾಡಲು 10 ಕೋಟಿ ರೂ., ಮೇಲ್ಸೇತುವೆ, ಅಂಡರ್​ಪಾಸ್​ಗಳ ನಿರ್ವಹಣೆಗೆ 40 ಕೋಟಿ ರೂ., ಜಂಕ್ಷನ್​ಗಳ ಅಭಿವೃದ್ಧಿಗೆ 15 ಕೋಟಿ ರೂ. ಮೀಸಲಿಡಲಾಗಿದೆ. ಸಿಎಸ್​ಆರ್ ಯೋಜನೆಯಲ್ಲಿ ಹಲವು ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗುತ್ತದೆ.

    ಹೊಸ ರುದ್ರಭೂಮಿಗಳ ನಿರ್ಮಾಣ

    ಧೋಬಿ ಘಾಟ್ ಉನ್ನತೀಕರಣ ಹಾಗೂ ಅಲ್ಲಿ ಬಟ್ಟೆ ತೊಳೆಯುವವರ ಅನುಕೂಲಕ್ಕಾಗಿ ವಾಶಿಂಗ್ ಮಿಷನ್ ಅಳವಡಿಕೆಗೆ 3 ಕೋಟಿ ರೂ. ಹಾಗೂ ಹೊಸ ರುದ್ರಭೂಮಿ ನಿರ್ವಿುಸಲು 10 ಕೋಟಿ ರೂ., 4 ಹೊಸ ವಲಯ ಕಚೇರಿಗಳ ಉನ್ನತಿಗೆ ತಲಾ 50 ಲಕ್ಷ ರೂ., ಟೈಲರಿಂಗ್ ಕೇಂದ್ರ ನಿರ್ವಹಣೆಗೆ 1 ಕೋಟಿ ರೂ., ಸಮುದಾಯ ಭವನ ನಿರ್ವಹಣೆಗೆ 1 ಕೋಟಿ ರೂ., ಬೀದಿದೀಪಗಳ ನಿರ್ವಹಣೆಗೆ 65 ಕೋಟಿ ರೂ. ಮೀಸಲಿಡಲಾಗಿದೆ.

    ನೀರಿನ ಮಿತವಾದ ಬಳಕೆಗೆ ಪ್ರೋತ್ಸಾಹ ನೀಡಲು 10 ಸಾವಿರ ಲೀಟರ್ ಒಳಗೆ ನೀರು ಬಳಸುವ 2.5 ಲಕ್ಷ ಜನರಿಗೆ ಉಚಿತವಾಗಿ ನೀರು ಕೊಡುತ್ತೇವೆ. ಜತೆಗೆ, ಕರೊನಾ ಹಿನ್ನೆಲೆಯಲ್ಲಿ ಎಲ್ಲ 198 ವಾರ್ಡ್​ಗಳಿಗೆ ತಲಾ 25 ಲಕ್ಷ ರೂ. ಅನುದಾನ ನೀಡಲಾಗುತ್ತದೆ. ಕೆರೆ, ಶಿಕ್ಷಣ, ಆರೋಗ್ಯ ಸೌಲಭ್ಯಕ್ಕೂ ಬಜೆಟ್​ನಲ್ಲಿ ಒತ್ತು ನೀಡಲಾಗಿದೆ.

    | ಎಂ. ಗೌತಮ್ುಮಾರ್ ಮೇಯರ್

    ಇತಿಹಾಸದಲ್ಲೇ ಮೊದಲ ಬಾರಿ ಅಮೆರಿಕ ತೈಲ ಬೆಲೆ ಶೂನ್ಯ ಡಾಲರ್​ಗೂ ಕೆಳಕ್ಕೆ! : ಮಂಗಳವಾರ ಮತ್ತೆ ಚೇತರಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts