More

    ಇತಿಹಾಸದಲ್ಲೇ ಮೊದಲ ಬಾರಿ ಅಮೆರಿಕ ತೈಲ ಬೆಲೆ ಶೂನ್ಯ ಡಾಲರ್​ಗೂ ಕೆಳಕ್ಕೆ! : ಮಂಗಳವಾರ ಮತ್ತೆ ಚೇತರಿಕೆ

    ಸಿಂಗಾಪುರ: ಇತಿಹಾಸದಲ್ಲೇ ಮೊದಲ ಸಲ ಅಮೆರಿಕದಲ್ಲಿ ತೈಲ ಬೆಲೆ ಶೂನ್ಯ ಡಾಲರ್​ಗಿಂತಲೂ ಕೆಳಕ್ಕೆ ಸೋಮವಾರ ಕುಸಿದಿತ್ತು. ಇತ್ತೀಚಿನ ಕೆಲವು ವಾರಗಳ ಅವಧಿಯಲ್ಲಿ ಕರೊನಾ ವೈರಸ್ ಸೋಂಕು ತಡೆಗೆ ಜಾರಿಯಲ್ಲಿರುವ ಲಾಕ್​ಡೌನ್ ಪರಿಣಾಮ ತೈಲಗಳ ಬೇಡಿಕೆ ಕುಸಿತವಾದುದೇ ಇದಕ್ಕೆ ಕಾರಣ. ಆದಾಗ್ಯೂ, ಮಂಗಳವಾರದ ವಹಿವಾಟಿನಲ್ಲಿ ತೈಲ ಬೆಲೆ ಮತ್ತೆ ಚೇತರಿಕೆ ದಾಖಲಿಸಿದ್ದು ಶೂನ್ಯ ಡಾಲರ್​ಗಿಂತ ಮೇಲಕ್ಕೆ ಪುಟಿದಿದೆ.

    ಅಮೆರಿಕದ ತೈಲಬೆಲೆ ಫ್ಯೂಚರ್ಸ್​ ವಹಿವಾಟಿನಲ್ಲಿ ಮೈನಸ್​ಗೆ ಹೋಗಿದ್ದು, ವೆಸ್ಟ್ ಟೆಕ್ಸಾಸ್​ ಇಂಟರ್​ಮೀಡಿಯೇಟ್​ ನ ಮೇ ತಿಂಗಳ ಡೆಲಿವರಿ ದರ ಬ್ಯಾರೆಲ್​ಗೆ 1.10 ಡಾಲರ್ ಆಗಿತ್ತು. ಮೇ ಫ್ಯೂಚರ್ಸ್​ ಕಾಂಟ್ರಾಕ್ಟ್​ ಮಂಗಳವಾರ ಕೊನೆಗೊಳ್ಳುತ್ತಿದ್ದು, ವಹಿವಾಟುದಾರರು ಲಾಭಗಿಟ್ಟಿಸಿಕೊಳ್ಳುವ ಸಲುವಾಗಿ ಖರೀದಿ ಮತ್ತು ಮಾರಾಟ ಪ್ರಕ್ರಿಯೆಯಲ್ಲಿ ತೊಡಗುತ್ತಾರೆ. ಇದೇ ವೇಳೇ, ಭೌತಿಕವಾಗಿ ತೈಲವನ್ನು ಯಾರಿಗಾದರೂ ಹಸ್ತಾಂತರಿಸುವ ಕೆಲಸವೂ ಇದೇ ವೇಳೆ ನಡೆಯುತ್ತದೆ. ಆದರೆ. ಸದ್ಯದ ಪರಿಸ್ಥಿತಿಯಲ್ಲಿ ತೈಲದ ದಾಸ್ತಾನು ಬಹುತೇಕ ಹಾಗೆಯೇ ಇರುವ ಕಾರಣ ಖರೀದಿಗೆ ಹಿಂಜರಿಯುತ್ತಿದ್ದಾರೆ.

    ಸದ್ಯದ ಪರಿಸ್ಥಿತಿಯಲ್ಲಿ ಟ್ರೇಡರ್ಸ್​ ಜೂನ್​ ತಿಂಗಳ ಡೆಲಿವರಿ ಕಡೆಗೆ ಹಚ್ಚಿನ ಗಮನಹರಿಸಿದ್ದಾರೆ. ಅದರ ಟ್ರೇಡಿಂಗ್ ಪ್ರಮಾಣ 30 ಪಟ್ಟು ಹೆಚ್ಚಿದೆ. ನ್ಯೂಯಾರ್ಕ್​ನಲ್ಲಿ ಪ್ರತಿ ಬ್ಯಾರೆಲ್​ಗೆ 20.43 ಡಾಲರ್ ಇದ್ದ ದರ ಮಂಗಳವಾರ ಪ್ರತಿ ಬ್ಯಾರೆಲ್​ಗೆ 21 ಡಾಲರ್ ಆಗಿದೆ. ಇನ್ನು, ಅಂತಾರಾಷ್ಟ್ರೀಯ ವಹಿವಾಟಿನ ಬ್ರೆಂಟ್ ಕ್ರೂಡ್ ಕೂಡ ಜೂನ್ ತಿಂಗಳ ಪೂರೈಕೆಯ ಪ್ರತಿ ಬ್ಯಾರೆಲ್​ಗೆ ಶೇಕಡ 0.15 ದರ ಹೆಚ್ಚಳದೊಂದಿಗೆ 25.61 ಡಾಲರ್​ನಲ್ಲಿ ಹಸ್ತಾಂತರಿಸುತ್ತಿದೆ. (ಏಜೆನ್ಸೀಸ್)

    ರಾಷ್ಟ್ರಪತಿ ಭವನದಲ್ಲಿ ಒಂದು COVID19 ಪಾಸಿಟಿವ್ ಕೇಸ್ ಪತ್ತೆ- 125 ಕುಟುಂಬಗಳಿಗೆ ಸೆಲ್ಫ್ ಕ್ವಾರಂಟೈನ್

    3 ತಿಂಗಳ ಕೂಸಿಗಾಗಿ 180 ಕಿ.ಮೀ ರಿಲೇ!: ಮಂಗಳೂರಿಂದ ಹೊನ್ನಾವರಕ್ಕೆ ಔಷಧ ತಲುಪಿಸಿದ ಕರೊನಾ ವಾರಿಯರ್ಸ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts