More

    ರಾಷ್ಟ್ರಪತಿ ಭವನದಲ್ಲಿ ಒಂದು COVID19 ಪಾಸಿಟಿವ್ ಕೇಸ್ ಪತ್ತೆ- 125 ಕುಟುಂಬಗಳಿಗೆ ಸೆಲ್ಫ್ ಕ್ವಾರಂಟೈನ್

    ನವದೆಹಲಿ: ಕರೊನಾ ಆತಂಕ ದಿನೇದಿನೇ ಹೆಚ್ಚಾಗುತ್ತಿದ್ದು, ದೇಶದಲ್ಲಿ ಕರೋನಾ COVID19 ವೈರಾಣು ಸೋಂಕಿತರ ಸಂಖ್ಯೆ 18,000ದ ಗಡಿದಾಟಿದೆ. ಕರ್ನಾಟಕದಲ್ಲೂ 400ರ ಗಡಿ ದಾಟಿದೆ. ಕರೊನಾ ಹರಡುವಿಕೆ ತಡೆಗಟ್ಟಲು ದೇಶಾದ್ಯಂತ ಎರಡನೇ ಅವಧಿಯ ಲಾಕ್​ಡೌನ್ ಚಾಲ್ತಿಯಲ್ಲಿದೆ. ಈ ನಡುವೆ, ಕೆಲವು ರಾಜ್ಯಗಳು ಲಾಕ್​ಡೌನ್​ ನಿಯಮಗಳನ್ನು ಸಡಿಲಗೊಳಿಸಿವೆ. ಇದೇ ವಿಚಾರವಾಗಿ ಕೇರಳ ಮತ್ತು ಕೇಂದ್ರ ಸರ್ಕಾರಗಳ ನಡುವೆ ಜಟಾಪಟಿಯೂ ಶುರುವಾಗಿದೆ.

    ಈ ಎಲ್ಲ ಬೆಳವಣಿಗೆಗಳ ನಡುವೆ ರಾಷ್ಟ್ರಪತಿ ಭವನದಲ್ಲೂ ಒಂದು ಪಾಸಿಟಿವ್ ಕೇಸ್ ಪತ್ತೆಯಾಗಿರುವುದಾಗಿ ಎಎನ್​ಐ ಸುದ್ದಿ ಸಂಸ್ಥೆ ವರದಿಮಾಡಿದೆ. ರಾಷ್ಟ್ರಪತಿ ಭವನದಲ್ಲಿ 500 ಕುಟುಂಬಗಳಿದ್ದು ಈ ಪೈಕಿ 125 ಕುಟುಂಬಗಳಿಗೆ ಮುಂಜಾಗ್ರತಾ ಕ್ರಮವಾಗಿ ಸೆಲ್ಫ್ ಕ್ವಾರಂಟೈನ್​ನಲ್ಲಿ ಇರುವಂತೆ ಆರೋಗ್ಯ ಸಚಿವಾಲಯ ನಿರ್ದೇಶನ ನೀಡಿದೆ.

    ದೆಹಲಿಯಲ್ಲಿ ಕರೊನಾ ಪೀಡಿತರ ಸಂಖ್ಯೆ ಅಧಿಕವಾಗಿದ್ದು, ಹೆಚ್ಚಿನ ಮುಂಜಾಗ್ರತಾ ಕ್ರಮಗಳನ್ನು ಅಲ್ಲಿ ಸರ್ಕಾರ ತೆಗೆದುಕೊಂಡಿದೆ. (ಏಜೆನ್ಸೀಸ್)

    ಯಾರನ್ನೂ ಬಿಡಲ್ಲ ಮಟ್ಟಹಾಕ್ತೇವೆ: ಈಶ್ವರಪ್ಪ ಗುಡುಗು |ದುರ್ಬಳಕೆ ರಾಜಕಾರಣದ ಬಗ್ಗೆ ಮುಸ್ಲಿಮರು ಎಚ್ಚೆತ್ತುಕೊಳ್ಳಲಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts