More

    VIDEO| ಬಾಲ್​ ನೋಡದೆ ಸಿಕ್ಸರ್​ ಸಿಡಿಸಿದ ಫ್ಲೆಚರ್: ವೈರಲ್​​ ವಿಡಿಯೋ ನೋಡಿದ್ರೆ ಫಿದಾ ಆಗೋದು ಗ್ಯಾರೆಂಟಿ​!

    ಸಿಡ್ನಿ: ದುಬೈನಲ್ಲಿ ನಡೆದ ಐಪಿಎಲ್ ಮನರಂಜನೆಯ​ ಬಳಿಕ ಆಸ್ಟ್ರೇಲಿಯಾದಲ್ಲಿ ಆರಂಭವಾಗಿರುವ ಬಿಗ್​ ಬ್ಯಾಷ್​ ಲೀಗ್​ ಟಿ20 ಕ್ರಿಕೆಟ್​ ಅಭಿಮಾನಿಗಳಿಗೆ ಮತ್ತೊಮ್ಮೆ ಮನರಂಜನೆಯ ರಸದೌತಣ ಉಣಬಡಿಸುತ್ತಿದೆ. ಕರೊನಾದಿಂದ ವರ್ಷಗಳವರೆಗೆ ಕ್ರಿಕೆಟ್​ ಮಿಸ್​ ಮಾಡಿಕೊಂಡಿದ್ದ ಅಭಿಮಾನಿಗಳಿಗೆ ಸಾಲು ಸಾಲು ಕ್ರಿಕೆಟ್​ ಪಂದ್ಯಗಳಿಂದ ಉಲ್ಲಾಸಗೊಂಡಿದ್ದಾರೆ.

    ಬಿಗ್​ ಬ್ಯಾಷ್​ ಲೀಗ್​ ಡಿಸೆಂಬರ್​ 10ರಿಂದ ಆರಂಭವಾಗಿದೆ. ಟೂರ್ನಿಯ ಎರಡನೇ ಪಂದ್ಯದಲ್ಲಿ ಮೆಲ್ಬೋರ್ನ್​ ಸ್ಟಾರ್ಸ್​ ತಂಡವು ಬ್ರಿಸ್ಬೇನ್​ ಹೀಟ್​​ ತಂಡದ ವಿರುದ್ಧ 6 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ. ಇಡೀ ಪಂದ್ಯದಲ್ಲಿ 10 ಸಿಕ್ಸರ್​ಗಳು ಸಿಡಿದಿದ್ದು, ಮೆಲ್ಬೋರ್ನ್​ ಸ್ಟಾರ್ಸ್​ ಆಟಗಾರ ಆ್ಯಂಡ್ರೆ ಫ್ಲೆಚರ್​ ಚೆಂಡು ನೋಡದೇ ಸಿಡಿಸಿದ ಸಿಕ್ಸರ್​ ಕ್ರೀಡಾಭಿಮಾನಿಗಳನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿದೆ.

    ಇದನ್ನೂ ಓದಿ: ಗ್ರಾಮಾಯಣ | ಅವಿರೋಧ ಆಯ್ಕೆಯ ಮೇಲೆ ಆಯೋಗ ಕಣ್ಣು

    ಕ್ರೀಸ್​ನಲ್ಲಿ ನಿಂತಿದ್ದ ಫ್ಲೆಚರ್​ ಮೊದಲೇ ಚೆಂಡಿನ ಅಳತೆಯನ್ನು ಗ್ರಹಿಸಿ ಸರಿಯಾದ ಸ್ಥಾನದಲ್ಲಿ ನಿಂತು ಚೆಂಡನ್ನು ನೋಡದೇ ಬಿಗ್​ ಸಿಕ್ಸರ್​ ಸಿಡಿಸಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಬಾಲ್​ ನೋಡದೇ ಬಾರಿಸಿದ ಫ್ಲೆಚರ್​ ಬ್ಯಾಟಿಂಗ್​ ಶೈಲಿ ಆಸಿಸ್​ ಮಾಜಿ ಆಟಗಾರರಾದ ಆ್ಯಡಮ್​ ಗಿಲ್ಕ್ರಿಸ್ಟ್​ ಮತ್ತು ಬ್ರೆಟ್​ ಲೀ ಸೇರಿದಂತೆ ಕಾಮೆಂಟೇಟರ್ಸ್​ಗೂ ಬಲು ಇಷ್ಟವಾಗಿದೆ.

    ಗ್ಲೇನ್​ ಮ್ಯಾಕ್ಸ್​ವೆಲ್​ ನಾಯಕತ್ವದ ಮೆಲ್ಬೋರ್ನ್​ ಸ್ಟಾರ್ಸ್​ ತಂಡವು ಟಾಸ್​ ಗೆದ್ದು ಬೌಲಿಂಗ್​ ಆಯ್ದುಕೊಂಡಿತು. ಮೊನೆಚಾದ ಬೌಲಿಂಗ್​ ದಾಳಿ ನಡೆಸಿದ ಮೆಲ್ಬೋರ್ನ್​ ಸ್ಟಾರ್ಸ್​ ಬೌಲರ್​ಗಳು ಎದುರಾಳಿ ಬ್ರಿಸ್ಬೇನ್​ ಹೀಟ್​ ತಂಡವನ್ನು ಕೇವಲ 125 ರನ್​ಗಳಿಗೆ ಕಟ್ಟಿಹಾಕಿತು. ಗುರಿ ಬೆನ್ನತ್ತಿದ ಮೆಲ್ಬೋರ್ನ್​ ಸ್ಟಾರ್ಸ್​ ಹಿಲ್ಟನ್​ ಕಾರ್ಟ್​ರೈಟ್​ (46) ಮತ್ತು ನಾಯಕ ಮ್ಯಾಕ್ಸ್​ವೆಲ್​ (26 ಎಸೆತಕ್ಕೆ46 ರನ್​) ನೆರವಿನಿಂದ 6 ವಿಕೆಟ್​ಗಳ ಅಂತರದಿಂದ ಜಯ ಸಾಧಿಸಿತು. ಆದರೆ ಇಡೀ ಪಂದ್ಯದಲ್ಲಿ ಫ್ಲೆಚರ್​ ಬಾರಿಸಿದ ಸಿಕ್ಸರ್​ ಮಾತ್ರ ತುಂಬಾ ಆಕರ್ಷಣೀಯವಾಗಿತ್ತು. (ಏಜೆನ್ಸೀಸ್​)

    PHOTO | ಗೆಳತಿಯೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಐಪಿಎಲ್ ಸ್ಟಾರ್ ವರುಣ್ ಚಕ್ರವರ್ತಿ

    ರೋಹಿತ್ ಶರ್ಮ ಆಸ್ಟ್ರೇಲಿಯಾಕ್ಕೆ ಹೋದರೂ ಟೆಸ್ಟ್ ಆಡುವುದು ಖಚಿತವಿಲ್ಲ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts