More

     ವಿದ್ಯಾರ್ಥಿಗಳಿಗೆ ಡಾ. ಸಿ. ಕೃಷ್ಣಮೂರ್ತಿ ಸಲಹೆ; ಗುರುವಿನ ಮಾರ್ಗದರ್ಶನದಲ್ಲಿ ಗುರಿಯತ್ತ ಸಾಗಿ

    ಧಾರವಾಡ: ವಿದ್ಯಾರ್ಥಿಗಳು ಆಧುನಿಕ ತಂತ್ರಜ್ಞಾನದ ಸದುಪಯೋಗ ಪಡೆದು ಗುರಿ ತಲುಪಬೇಕು. ಅಡ್ಡಿ- ಆತಂಕಗಳು ಬಂದಾಗ ಗುರುಗಳ ಮಾರ್ಗದರ್ಶನದಲ್ಲಿ ಮುನ್ನುಗ್ಗಬೇಕು ಎಂದು ಕರ್ನಾಟಕ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವ ಡಾ. ಸಿ. ಕೃಷ್ಣಮೂರ್ತಿ ಹೇಳಿದರು.
    ನಗರದ ಬಾಸೆಲ್ ಮಿಶನ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಸೋಮವಾರ ಆಯೋಜಿಸಿದ್ದ ಸುವರ್ಣ ಮಹೋತ್ಸವದ ಉದ್ಘಾಟನಾ ಸಮಾರಂಭ ಹಾಗೂ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಸತ್ಕಾರ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
    ಬಾಸೆಲ್ ಮಿಶನ್ ಉಚ್ಚ ಶಿಕ್ಷಣ ಸಂಸ್ಥೆ ಧರ್ಮದರ್ಶಿ ಪ್ರೊ. ಜೆ.ಎಸ್. ಕುರಿ ಮಾತನಾಡಿ, ವಿದ್ಯೆಗೆ ವಿನಯವೇ ಭೂಷಣ. ಬಿರುಗಾಳಿ ಬಂದಾಗ ದೊಡ್ಡ ಮರಗಳು ಉರುಳುತ್ತವೆ. ಆದರೆ, ಚಿಗುರು ಹುಲ್ಲು ಮತ್ತೆ ತಲೆ ಎತ್ತುವುದು. ಅದೇರೀತಿ ವಿದ್ಯಾರ್ಥಿಗಳು ಕೀಳರಿಮೆ ತೊರೆದು ಗುರಿಯತ್ತ ಸಾಗಬೇಕು ಎಂದರು.
    ಸುವರ್ಣ ಮಹೋತ್ಸವ ಲಾಂಛನ ಬಿಡುಗಡೆ ಮಾಡಿದ ಧರ್ಮಾಧ್ಯಕ್ಷ ರೈಟ್ ರೆವರೆಂಡ್ ಡಾ. ಮಾರ್ಟಿನ್ ಸಿ. ಬೋರ್ಗಾಯಿ ಮಾತನಾಡಿ, ವಿದ್ಯಾರ್ಥಿಗಳು ಗುರುಗಳ ಮಾರ್ಗದರ್ಶನದಲ್ಲಿ ನಿರಂತರ ಅಧ್ಯಯನ ಮಾಡಿ ಜೀವನದಲ್ಲಿ ಉನ್ನತ ಸ್ಥಾನ ಪಡೆಯಬೇಕು ಎಂದರು.
    ಬಾಸೆಲ್ ಮಿಶನ್ ಉಚ್ಚ ಶಿಕ್ಷಣ ಸಂಸ್ಥೆ ಧರ್ಮದರ್ಶಿ ಎಸ್.ಡಿ. ಬೇಲಿ ಅವರು ಎಸ್‌ಎಸ್‌ಎಲ್‌ಸಿಯಲ್ಲಿ ಉತ್ತಮ ಶ್ರೇಣಿಯಲ್ಲಿ ಪಾಸಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು. ಪ್ರಭಾರಿ ಮುಖ್ಯಾಧ್ಯಾಪಕಿ ಗ್ರೇಸಲಿನಾ ಖಾನಾಪೂರ ಶಾಲಾ ವರದಿ ವಾಚಿಸಿದರು.
    ಪ್ರೇಮಾ  ಬೋರ್ಗಾಯಿ, ಚಾರ್ಲ್ಸ್ ಬೋರ್ಗಾಯಿ, ಕಮಲಾ ಢವಳೆ, ರಿಟಾ ಮಾರ್ಗರೇಟ್ ಅಕ್ಕಿಹಾಳ, ರೋಸಲಿನ್ ಹಳ್ಳಿ, ಮರ್ಸಿ ಹವಳದ, ಸರಿತಾ ಮಲ್ಹಾರ, ಇತರರಿದ್ದರು.
    ರೆವರೆಂಡ್ ಸ್ಯಾಮುವೆಲ್ ಪ್ರಾರ್ಥಿಸಿದರು. ದಯಾನಂದ ಆಡಿನಾ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts