More

    ಮೈಸೂರು ಕೋರ್ಟ್‌ನಲ್ಲಿ ಬಾಂಬ್ ಸ್ಫೋಟ: ಬೇಸ್ ಮೂವ್‌ಮೆಂಟ್ ಉಗ್ರರು ಅಪರಾಧಿಗಳು

    ಬೆಂಗಳೂರು: ಮೈಸೂರು ಕೋರ್ಟ್ ಆವರಣದಲ್ಲಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಬಂಧಿತರಾಗಿದ್ದ ಮೂವರು ಉಗ್ರರು ಅಪರಾಧಿಗಳು ಎಂದು ಎನ್‌ಐಎ ವಿಶೇಷ ನ್ಯಾಯಾಲಯ ಘೋಷಣೆ ಮಾಡಿದೆ. ಈ ನಿಟ್ಟಿನಲ್ಲಿ ಇಂದು ತೀರ್ಪು ನೀಡಿರುವ ನ್ಯಾಯಾಲಯವು, ಅಕ್ಟೋಬರ್​ 11 ಕ್ಕೆ ಅಪರಾಧಿಗಳಿಗೆ ಶಿಕ್ಷೆಯ ಪ್ರಮಾಣವನ್ನು ವಿಧಿಸಲಿದೆ.

    2016ರ ಆಗಸ್ಟ್​ 1 ಕ್ಕೆ ಮೈಸೂರು ಕೋರ್ಟ್ ಆವರಣದ ಶೌಚಾಗೃಹದಲ್ಲಿ ಸಂಭವಿಸಿದ ಬಾಂಬ್ ಸ್ಫೋಟ ಸಂಬಂಧವಾಗಿ ಲಕ್ಷ್ಮಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದರ ತನಿಖೆ ಕೈಗೊಂಡ ಎನ್‌ಐಎ ಅಧಿಕಾರಿಗಳು ತಮಿಳುನಾಡಿನ ಉಗ್ರರಾದ ಎನ್.ಅಬ್ಬಾಸ್ ಅಲಿ ಅಲಿಯಾಸ್ ಲೈಬ್ರರಿ ಅಬ್ಬಾಸ್, ಎಂ.ಸಾಮ್ಸನ್ ಕರೀಂ ರಾಜಾ ಅಲಿಯಾಸ್ ಕರೀಂ ಮತ್ತು ದಾವೂದ್ ಸುಲೈಮಾನ್ ಎಂಬುವರನ್ನು ಬಂಧಿಸಿದ್ದರು. ತನಿಖೆ ಪೂರ್ಣಗೊಳಿಸಿದ ಎನ್‌ಐಎ ಅಧಿಕಾರಿಗಳು ಬೆಂಗಳೂರಿನ ವಿಶೇಷ ಎನ್‌ಐಎ ಕೋರ್ಟ್‌ಗೆ ದೋಷಾರೋಪಪಟ್ಟಿ ಸಲ್ಲಿಸಿದ್ದರು.

    2016ರ ಏ.7 ರಂದು ಆಂಧ್ರದ ಚಿತ್ತೂರು ಕೋರ್ಟ್ ಆವರಣ, 2016 ರ ಜೂನ್​ 15 ಕ್ಕೆ ಕೇರಳದ ಕೊಲ್ಲಂ, 2016 ರ ಆ.1 ರಂದು ಮೈಸೂರು, 2016ರ ಸೆ.12 ರಂದು ಆಂಧ್ರದ ನೆಲ್ಲೂರು ಹಾಗೂ 2016 ರ ನವೆಂಬರ್​ 1ಕ್ಕೆ ಕೇರಳದ ಮಲಾಪುರಂ ಕೋರ್ಟ್ ಆವರಣಗಳಲ್ಲಿ ಈ ಆರೋಪಿಗಳು ಬಾಂಬ್ ಸ್ಫೋಟಿಸಿದ್ದರು.

    ಇದನ್ನೂ ಓದಿ: 16ನೇ ತಾರೀಕಿನೊಳಗೆ ಲಸಿಕೆ ಹಾಕಿಸಿಕೊಳ್ಳದಿದ್ದರೆ ಕಚೇರಿಗೇ ಬರಬೇಡಿ; ನೌಕರರಿಗೆ ಸರ್ಕಾರದ ಕಟ್ಟುನಿಟ್ಟಿನ ಆದೇಶ

    ಅಲ್​ಕೈದಾ ಪ್ರೇರಿತ ಮುಖ್ಯ ಆರೋಪಿ ಅಬ್ಬಾಸ್​: ತಮಿಳುನಾಡಿನ ಇಸ್ಲಾಮಿಕ್ ಗ್ರಂಥಾಲಯ ನಡೆಸುತ್ತಿದ್ದ ಅಬ್ಬಾಸ್ ಅಲಿ ಬಾಂಬ್ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ. ಉಗ್ರ ಸಂಘಟನೆ ಸಂಪರ್ಕ ಹೊಂದಿದ್ದ ಅಬ್ಬಾಸ್, ಅಲ್ ಕೈದಾ ಮತ್ತು ಅದರ ನಾಯಕ ಒಸಾಮಾ ಬಿನ್ ಲಾಡೆನ್ ಸಿದ್ಧಾಂತದಿಂದ ಪ್ರೇರಿತನಾಗಿದ್ದ. 2015ರಲ್ಲಿ ‘ಬೇಸ್ ಮೂವ್‌ಮೆಂಟ್’ ಎಂಬ ಹೊಸ ಉಗ್ರ ಸಂಘಟನೆ ಹುಟ್ಟು ಹಾಕಿದ್ದ. ದೊಡ್ಡ ಉಗ್ರ ಸಂಘಟನೆ ಎಂದು ಬಿಂಬಿಸುವ ಸಲುವಾಗಿ ಕಾರಾಗೃಹ, ಸರ್ಕಾರಿ ಕಚೇರಿ, ದಿನಪತ್ರಿಕೆ ಕಚೇರಿ, ಫ್ರಾನ್ಸ್​ ರಾಯಬಾರಿ ಕಚೇರಿ ಸೇರಿ ವಿವಿಧೆಡೆ ಬೆದರಿಕೆ ಪತ್ರ ಬರೆದಿದ್ದ. ಉಗ್ರ ಸಂಘಟನೆಗಳಿಗೆ ಧನ ಸಂಗ್ರಹಕ್ಕೆ ಯೋಜನೆ ರೂಪಿಸಿದ್ದ.

    ಮುಂಬೈ ಸರಣಿ ಸ್ಫೋಟ ಪ್ರಕರಣದ ಉಗ್ರ ಯಾಕೂಬ್ ಮೆಮನ್​ಗೆ ಗಲ್ಲು ಶಿಕ್ಷೆ ವಿಧಿಸಿದ್ದಕ್ಕೆ ಪ್ರತೀಕಾರವಾಗಿ ಮೈಸೂರು ಕೋರ್ಟ್ ಟಾರ್ಗೆಟ್ ಮಾಡಿದ್ದ ಅಬ್ಬಾಸ್, ತನ್ನ ಸಹಚರನನ್ನು ಮೈಸೂರಿಗೆ ಕಳುಹಿಸಿ ಕೋರ್ಟ್ ಆವರಣ, ಪಾರ್ಕಿಂಗ್, ಸಿಸಿ ಕ್ಯಾಮರಾಗಳ, ಒಳ-ಹೊರಗೆ ಹೋಗಲು ಗೇಟ್‌ಗಳ ಸಂಬಂಧ ಫೋಟೋ, ವಿಡಿಯೋ ತರೆಸಿಕೊಂಡಿದ್ದ. ಅಬ್ಬಾಸ್ ಮತ್ತು ದಾವೂದ್ ಸ್ಫೋಟಕ್ಕೆ ಟೈಮ್, ದಿನಾಂಕ ನಿಗದಿ ಮಾಡಿ ಟೈಮರ್ ಒಳಗೊಂಡಿದ್ದ ಸುಧಾರಿತ ಬಾಂಬ್ ತಯಾರಿಸಿದ್ದರು. ಸ್ಫೋಟಕವನ್ನು ಪಾರ್ಸೆಲ್ ಪೊಟ್ಟಣದಂತೆ ಸುತ್ತಿ ಕಪ್ಪು ಬಣ್ಣದ ಶಾಲಾ ಬ್ಯಾಗ್‌ನಲ್ಲಿ ಇಟ್ಟು ದಾವೂದ್​ಗೆ ಒಪ್ಪಿಸಿದ ಅಬ್ಬಾಸ್ ತನ್ನ ಬೈಕ್‌ನಲ್ಲೇ ಕರೆದೊಯ್ದು ಬಸ್ ನಿಲ್ದಾಣಕ್ಕೆ ಬಿಟ್ಟಿದ್ದ. ಟಿಎಸ್‌ಆರ್‌ಟಿಸಿ ಬಸ್‌ನಲ್ಲಿ ಮೈಸೂರಿಗೆ ಬಂದ ದಾವೂದ್, ರೈಲು ನಿಲ್ದಾಣದ ಬಳಿಗೆ ಆಟೋದಲ್ಲಿ ಬಂದು ಅಲ್ಲಿಂದ ಕೋರ್ಟ್ ಆವರಣಕ್ಕೆ ಹಿಂದಿನ ಗೇಟ್‌ನಲ್ಲಿ ಒಳಗೆ ಪ್ರವೇಶಿಸಿದ್ದ ಎನ್ನಲಾಗಿದೆ.

    ಇದನ್ನೂ ಓದಿ: ಅವಳ ವಿಚಾರದಲ್ಲಿ ಕಾಲೇಜ್​ಮೇಟ್ಸ್ ನಡುವೆ ಕಿರಿಕ್​; ಹಾಡಹಗಲೇ ನಡೆದುಹೋಯಿತು ಕೊಲೆ!

    ಪಾರ್ಕಿಂಗ್ ಸ್ಥಳದಲ್ಲಿ ಜನಸಂದಣಿ ಇದ್ದ ಕಾರಣಕ್ಕೆ ದಾವೂದ್ ಶೌಚಾಗೃಹದಲ್ಲಿ ಬಾಂಬ್ ಇಟ್ಟು ಆಟೋದಲ್ಲಿ ರೈಲು ನಿಲ್ದಾಣಕ್ಕೆ ತೆರಳಿ ಅಲ್ಲಿಂದ ಬಸ್‌ನಲ್ಲಿ ತಮಿಳುನಾಡಿನ ಸತ್ಯಮಂಗಲಂಗೆ ತಲುಪಿದ್ದ. ಇತ್ತ ಮೈಸೂರಿನಲ್ಲಿ ಬಾಂಬ್ ಸ್ಫೋಟಗೊಂಡಿತ್ತು. ಮಾರನೇ ದಿನ ಚೆನ್ನೈಗೆ ತೆರಳಿ ಅಬ್ಬಾಸ್‌ನನ್ನು ದಾವೂದ್ ಭೇಟಿ ಮಾಡಿದ್ದ ಎಂಬುದು ಎನ್‌ಐಎ ತನಿಖೆಯಿಂದ ಬಯಲಾಗಿತ್ತು. ವಾದ-ಪ್ರತಿವಾದ ಆಲಿಸಿದ ಎನ್‌ಐಎ ವಿಶೇಷ ನ್ಯಾಯಾಲಯ ಬಂಧಿತ ಉಗ್ರರನ್ನು ಅಪರಾಧಿಗಳೆಂದು ನಿರ್ಣಯ ಮಾಡಿದೆ. ಅ.11ರಂದು ಅಪರಾಧಿಗಳಿಗೆ ಶಿಕ್ಷೆ ಪ್ರಮಾಣ ವಿಧಿಸಲಿದೆ.

    ಟಾರ್ಗೆಟ್ ಮೋದಿ, ಅಡ್ವಾಣಿ: ಕಾಶ್ಮೀರದಲ್ಲಿ ಉಗ್ರರ ವಿರುದ್ಧ ಸೈನಿಕರ ಕಾರ್ಯಾಚರಣೆಗೆ ಶಂಕಿತರು ವಿರೋಧ ವ್ಯಕ್ತಪಡಿಸಿದ್ದರು. ಮುಸ್ಲಿಮರ ಮೇಲಿನ ದೌರ್ಜನ್ಯ, ನಕಲಿ ಎನ್‌ಕೌಂಟರ್, ಭಯೋತ್ಪಾದನೆ ಆರೋಪದಲ್ಲಿ ಬಂಧನ ಎಂದು ಬಿಂಬಿಸಿ ಸೇಡು ತೀರಿಸಿಕೊಳ್ಳಲು ಅಬ್ಬಾಸ್ ಅಲಿ ‘ಬೇಸ್ ಮೂವ್‌ಮೆಂಟ್‌‘ ಉಗ್ರ ಸಂಘಟನೆ ಸ್ಥಾಪಿಸಿದ್ದ. ಪ್ರಧಾನಿ ನರೇಂದ್ರ ಮೋದಿ, ಆಗಿನ ಬಿಜೆಪಿ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ, ಗೃಹ ಸಚಿವ ರಾಜನಾಥ್ ಸಿಂಗ್, ವಿಎಚ್‌ಪಿ ಮುಖಂಡ ಪ್ರವೀಣ್ ಭೈ ತೊಗಾಡಿಯಾ ಹಾಗೂ ವಿದೇಶಿ ರಾಯಬಾರಿ ಕಚೇರಿಗಳನ್ನು ಟಾರ್ಗೆಟ್ ಮಾಡಿದ್ದರು.

    ‘ಬೇಸ್ ಮೂವ್‌ಮೆಂಟ್‌‘ ಸಂಘಟನೆಯನ್ನು ಜಗತ್ತಿನಾದ್ಯಂತ ಪ್ರಚಾರ ಮಾಡಲು ಶಂಕಿತ ಉಗ್ರರು ತಯಾರಿ ನಡೆಸಿದ್ದರು. ಉಗ್ರ ಒಸಮಾ ಬಿನ್ ಲಾಡೆನ್ ಉಗ್ರವಾದದ ವಿಡಿಯೋ, ಭಾರತದ ನಕ್ಷೆಯಲ್ಲಿ ಅರೇಬಿಕ್ ಮತ್ತು ಇಂಗ್ಲಿಷ್‌ನಲ್ಲಿ ಉಗ್ರ ಬರಹಗಳು ಒಳಗೊಂಡ ಕರಪತ್ರ, ಪೆನ್‌ಡ್ರೈವ್, ಫೋಟೋ ಸಿದ್ದಪಡಿಸಿದ್ದರು. ಬಾಂಬ್ ಸ್ಫೋಟ ನಡೆಸಿದ್ದ ಸ್ಥಳದಲ್ಲಿ ಬಿಟ್ಟು ಬರುತ್ತಿದ್ದರು.

    ಶಾರುಖ್ ಪುತ್ರನ ಜಾಮೀನು ಅರ್ಜಿ ವಜಾ; ನ್ಯಾಯಾಲಯದಲ್ಲಿ ನಡೆದದ್ದೇನು?

    ‘ಲಖೀಂಪುರ್​ ಆಧಾರದಲ್ಲಿ ವಿರೋಧ ಪಕ್ಷಗಳ ಪುನಶ್ಚೇತನ ಯತ್ನಕ್ಕೆ ನಿರಾಶೆ ಕಾದಿದೆ’ ಎಂದ ಪ್ರಶಾಂತ್​ ಕಿಶೋರ್!

     

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts