More

    ಸಂಭ್ರಮದ ಬಸವೇಶ್ವರಸ್ವಾಮಿ ರಥೋತ್ಸವ

    ಜಗಳೂರು: ತಾಲೂಕಿನ ಕೆಳಗೋಟೆ ಗ್ರಾಮದಲ್ಲಿ ಮಂಗಳವಾರ ಬೆಳಗ್ಗೆ ಬಸವೇಶ್ವರ ಸ್ವಾಮಿ ರಥೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಸಂಭ್ರಮದಿಂದ ನೆರವೇರಿತು.

    ಹಸಿರು ತೋರಣ, ಬಣ್ಣ ಬಣ್ಣದ ವಿದ್ಯುತ್ ದೀಪಗಳ ಅಲಂಕಾರದಿಂದ ಇಡೀ ಗ್ರಾಮವೇ ಕಂಗೊಳಿಸುತ್ತಿತ್ತು. ಪ್ರತಿ ಮನೆಯ ಮುಂದೆ ರಂಗೋಲಿ ಹಾಕಲಾಗಿತ್ತು.

    ಮನೆಗೊಬ್ಬರಂತೆ ರಥೋತ್ಸವ ನೆರವೇರುವ ತನಕ ಉಪವಾಸ ವ್ರತದಲ್ಲಿದ್ದರು. ಮುಂಜಾನೆಯಿಂದಲೂ ಭಕ್ತರಿಂದ ಮಹಾಭಿಷೇಕ, ಹರಕೆ ತೀರಿಸುವಿಕೆ, ಮೀಸಲು ಅರ್ಪಣೆ ಸೇರಿ ವಿವಿಧ ಪೂಜಾ ವಿಧಿ ವಿಧಾನಗಳು ನಡೆದವು. ಭಕ್ತರು ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ದರ್ಶನ ಪಡೆದರು. ಉತ್ಸವಮೂರ್ತಿಗೆ ಪೂಜೆ ನೆರವೇರಿಸಿ ತೇರಿನ ಬಳಿಗೆ ಕರೆ ತಂದು ಮೂರು ಬಾರಿ ಪ್ರದಕ್ಷಿಣೆ ಹಾಕಲಾಯಿತು.

    ನಂತರ ಮೂರ್ತಿಯನ್ನು ತೇರಿನಲ್ಲಿ ಕೂರಿಸಿ ರಥೋತ್ಸವಕ್ಕೆ ಚಾಲನೆ ನೀಡುತ್ತಿದ್ದಂತೆ ಭಕ್ತರು ತೇರಿನ ಗಾಲಿಗೆ ತೆಂಗಿನ ಕಾಯಿ ಹೊಡೆದು, ಬಾಳೆಹಣ್ಣು, ಸೂರಗಲ್ಲು, ಮೆಣಸು ಎಸೆದು ಭಕ್ತಿ ಸಮರ್ಪಿಸಿದರು.

    ತೇರನ್ನು ಗ್ರಾಮದ ಹೊರವಲಯದ ಪಾದಗಟ್ಟೆವರೆಗೂ ಎಳೆದು, ಪುನಃ ತೇರು ಬೀದಿಗೆ ತರಲಾಯಿತು. ಇದಕ್ಕೂ ಮುನ್ನ ನಡೆದ ಹರಾಜಿನಲ್ಲಿ ಗ್ರಾಮದ ಸಿದ್ದಲಿಂಗಪ್ಪ 13 ಸಾವಿರ ರೂ.ಗಳಿಗೆ ಪಟವನ್ನು ತಮ್ಮದಾಗಿಸಿಕೊಂಡರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts