More

    ವೈಯಕ್ತಿಕ, ಸಮಾಜದ ಉದ್ಧಾರಕ್ಕೆ ಬಸವತತ್ವಗಳು ಸಹಕಾರಿ

    ದಾವಣಗೆರೆ: ವೈಯಕ್ತಿಕ ವಾಗಿ ಮಾತ್ರವಲ್ಲದೆ ಸಮಾಜದ ಉದ್ಧಾರಕ್ಕೆ ಬಸವತತ್ವಗಳು ಸಹಕಾರಿ. ದೇಶ ಹಾಗೂ ಜಗತ್ತಿನ ಪ್ರಗತಿಗಾಗಿಯೂ ಇವನ್ನು ಅನುಷ್ಠಾನಕ್ಕೆ ತರಬೇಕೆಂದು ಚಿತ್ರದುರ್ಗ ಮುರುಘಾಮಠದ ಉಸ್ತುವಾರಿ ಬಸವಪ್ರಭು ಸ್ವಾಮೀಜಿ ಹೇಳಿದರು.

    ವಿರಕ್ತಮಠ ಹಾಗೂ ಲಿಂಗಾಯತ ತರುಣ ಸಂಘದಿಂದ ಬಸವ ಜಯಂತ್ಯುತ್ಸವ ಅಂಗವಾಗಿ ನಗರದಲ್ಲಿ ಸೋಮವಾರ ಆರಂಭವಾದ 107ನೇ ವರ್ಷದ ಬಸವ ಪ್ರಭಾತ್ ಫೇರಿಯ ನೇತೃತ್ವ ವಹಿಸಿ ಆಶೀರ್ವಚನ ನೀಡಿದರು.

    ಹನ್ನೆರಡನೇ ಶತಮಾನದ ಶಿವಶರಣರು ಜಗತ್ತಿನ ಸಕಲ ಜೀವರಾಶಿಗಳ ಉಳಿವು, ಉದ್ಧಾರಕ್ಕಾಗಿ ಬಸವತತ್ವ ಬೋಧಿಸಿದ್ದಾರೆ. ಹಾಗಾಗಿ ಪ್ರಸ್ತುತ ದಿನಗಳಲ್ಲಿ ಜಾಗತಿಕವಾಗಿ ಬಸವತತ್ವಗಳು ಪ್ರಕಾಶಿಸುತ್ತಿವೆ ಎಂದರು.

    ಬಸವಣ್ಣನವರ ಕ್ರಾಂತಿಕಾರಿ ವಿಚಾರಗಳಿಗೆ ಇಂದಿನ ವಿದೇಶಿಗರು ಮನಸೋತಿದ್ದಾರೆ. ಬಸವಣ್ಣನವರು ನೀಡಿದ ಇಷ್ಟಲಿಂಗ ಧರಿಸಿ ಶಿವಯೋಗ ಮೂಲಕ ಬದುಕಿನಲ್ಲಿ ಶಾಂತಿ ನೆಮ್ಮದಿ ಕಾಣುತ್ತಿದ್ದಾರೆ. ಬಸವತತ್ವ ಪಾಲನೆಗೆ ಮುಂದಾಗಿದ್ದಾರೆ. ಆದರೆ ಇಲ್ಲಿನ ಬಹುತೇಕ ಲಿಂಗಾಯತರ ಕೊರಳಲ್ಲಿ ಇಷ್ಟಲಿಂಗಗಳೇ ಕಣ್ಮರೆಯಾಗಿವೆ ಎಂದು ವಿಷಾದಿಸಿದರು.

    ವಿಶ್ವದಲ್ಲೆ ಮೊದಲ ಬಾರಿಗೆ ವಿರಕ್ತಮಠದಿಂದ 1913ರಲ್ಲಿ ಶ್ರೀ ಮೃತ್ಯುಂಜಯ ಅಪ್ಪಗಳು ಹಾಗೂ ಹರ್ಡೇಕರ್ ಮಂಜಪ್ಪ ಅವರ ಮೂಲಕ ಬಸವ ಜಯಂತ್ಯುತ್ಸವ ಆರಂಭವಾಯಿತು. 1917ರಲ್ಲಿ ಬಸವ ಪ್ರಭಾತ್ ಪೇರಿಯೂ ಶುರುವಾಯಿತು. ಹರ್ಡೇಕರ್ ಮಂಜಪ್ಪ ಅವರು ಬಸವ ಜಯಂತ್ಯುತ್ಸವದ ಮೂಲಕ ಸ್ವಾತಂತ್ರೃ ಹೋರಾಟಕ್ಕೆ ಜನರನ್ನು ಸಂಘಟಿಸಿದರು ಎಂದು ಸ್ಮರಿಸಿದರು.

    ವಿರಕ್ತಮಠದಿಂದ ಪ್ರಾರಂಭವಾದ ಪ್ರಭಾತ್‌ಫೇರಿ ಚೌಕಿಪೇಟೆ , ಮಹಾರಾಜಪೇಟೆ , ಗಾಂಧಿನಗರ , ಹಗೆದಿಬ್ಬ ವೃತ್ತ ,ಕಾಳಿಕಾದೇವಿ ರಸ್ತೆ ಮೂಲಕ ಮೂಲ ಸ್ಥಳಕ್ಕೆ ಮರಳಿತು. ಬಸವಕಲಾ ಲೋಕ ಕಲಾವಿದರು ವಚನಗೀತೆ, ಜನಜಾಗೃತಿ ಗೀತೆಗಳನ್ನು ಹಾಡಿದರು.

    ಕಣಕುಪ್ಪಿ ಮುರುಗೇಶಪ್ಪ , ಎಂ.ಜಯಕುಮಾರ್, ಹಾಸಭಾವಿ ಕರಿಬಸಪ್ಪ , ಲಂಬಿ ಮುರುಗೇಶಪ್ಪ , ಚಿಗಟೇರಿ ಜಯದೇವ, ಕುಂಟೋಜಿ ಚನ್ನಪ್ಪ , ಟಿ.ಎಂ.ವೀರೇಂದ್ರ , ವಿನಾಯಕ, ಕಣಕುಪ್ಪಿ ಕರಿಬಸಪ್ಪ, ಶಶಿಧರ್, ಜಯರಾಜ್, ಚನ್ನಬಸವ ಶೀಲವಂತ್, ಜಾಲಿಮರದ ಕೊಟ್ರೇಶ್, ಫಾರೂಕ್, ರೋಷನ್ ಮಹದೇವಮ್ಮ , ಶಿವಬಸಮ್ಮ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts