ಬಿಜೆಪಿ ಸೋಲು, ಕ್ಷೇತ್ರಾವಾರು ಆತ್ಮಾವಲೋಕನಕ್ಕೆ ತೀರ್ಮಾನ: ಹಂಗಾಮಿ ಸಿಎಂ ಬಸವರಾಜ ಬೊಮ್ಮಾಯಿ‌ ಹೇಳಿಕೆ

Basavaraj Bommai
Published on

ಬೆಂಗಳೂರು: ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸೋಲಿನ ಬಗ್ಗೆ ಗೆದ್ದವರು ಹಾಗೂ ಪರಾಜಿತರು, ನಂತರ ಕ್ಷೇತ್ರಾವಾರು ಹೀಗೆ ಎರಡು ಹಂತದಲ್ಲಿ ಆತ್ಮಾವಲೋಕನ ಸಭೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಹಂಗಾಮಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಹೇಳಿದರು.

ಪಕ್ಷದ ರಾಜ್ಯ ಕಚೇರಿಯಲ್ಲಿ ಪಕ್ಷದ ರಾಜ್ಯಾಧ್ಯಕ್ಷ, ಪದಾಧಿಕಾರಿಗಳು ಹಾಗೂ ಶಾಸಕರ ಜತೆಗೆ ಭಾನುವಾರ ಸಭೆ ನಡೆಸಿದ ನಂತರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು.

ನಮ್ಮಲ್ಲಿ ಪಕ್ಷ ಸಂಘಟನೆಗೆ ವಿಶ್ರಾಂತಿ ಇರುವುದಿಲ್ಲ. ಚುನಾವಣೆ ನಂತರವೂ ನಮ್ಮ ಕಾರ್ಯಕ್ರಮ ನಡೆಯುತ್ತದೆ. ನಮ್ಮ ಕಾರ್ಯಕ್ರಮ ಜನರ ಬಳಿ ತೆಗೆದುಕೊಂಡು ಹೋಗುತ್ತೇವೆ. ಸೋಲು ಬಹಳ ವಿನಯದಿಂದ ಸ್ವೀಕಾರ ಮಾಡಿದ್ದೇವೆ. ಹಾಗೆಯೇ ಸವಾಲಾಗಿ ಸ್ವೀಕರಿಸಿ ಮುಂದಡಿಯಿಡುತ್ತೇವೆ ಎಂದರು.

ಸೋಲಿಗೆ ಪರಾಮರ್ಶೆ ಸಮಾಲೋಚನೆ ಮಾಡಲು ನಿರ್ಧರಿಸಿದ್ದು, ಪಕ್ಷದ ರಾಜ್ಯಾಧ್ಯಕ್ಷರ ರಾಜೀನಾಮೆ ಬಗ್ಗೆ ಚರ್ಚೆ ನಮ್ಮ ಮುಂದಿಲ್ಲ. ವಿಪಕ್ಷ ನಾಯಕನ ಸ್ಥಾನದ ಬಗ್ಗೆ ಇದುವರೆಗೂ ಚರ್ಚೆಯಾಗಿಲ್ಲ. ಫಲಿತಾಂಶದ ಬಗ್ಗೆ ಪಕ್ಷದ ವರಿಷ್ಠರು ಕರೆ ಮಾಡಿ ಧೈರ್ಯ ಹೇಳಿದ್ದಾರೆ ಎಂದು ಬೊಮ್ಮಾಯಿ‌ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net