More

    ವಚನಗಳ ಮುಖೇನ ಜನರಿಗೆ ಸ್ಪಷ್ಟ ಸಂದೇಶ ಕಟ್ಟಿಕೊಟ್ಟ ಬಸವಣ್ಣ: ಬಿ.ವೈ.ವಿಜಯೇಂದ್ರ‌ ಸ್ಮರಣೆ

    ಬೆಂಗಳೂರು: ಬದುಕಿನ ನೈಜ ಅನುಭವಗಳನ್ನು ಸರಳವಾದ ವಚನಗಳನ್ನು ರಚಿಸಿದ ವಿಶ್ವ ನಾಯಕ ಬಸವಣ್ಣ, ಆ ಮೂಲಕ ಜನಸಾಮಾನ್ಯರಿಗೆ ಸ್ಪಷ್ಟ ಸಂದೇಶವನ್ನು ಕಟ್ಟಿಕೊಟ್ಟಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸ್ಮರಿಸಿದರು.

    ಬಸವೇಶ್ವರ ಜಯಂತಿ ನಿಮಿತ್ತ ಪಕ್ಷದ ರಾಜ್ಯ ಕಚೇರಿಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ನಾಯಕ ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು, ಬಸವೇಶ್ವರರು ಸ್ಥಾಪಿಸಿದ ಅನುಭವ ಮಂಟಪ ಜಗತ್ತಿನ ಮೊದಲು ಸಂಸತ್ತು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂಬ ಹೆಮ್ಮೆ ವ್ಯಕ್ತಪಡಿಸಿದರು.

    ಸಮ ಸಮಾಜ ನಿರ್ಮಾಣ, ತುಳಿತಕ್ಕೆ ಒಳಗಾದ ಸಮುದಾಯಗಳನ್ನು ಮೇಲೆತ್ತಿ ಮುಖ್ಯವಾಹಿನಿಗೆ ತರುವುದು, ಸ್ತ್ರೀ ಸಮಾನತೆಗೆ ಭದ್ರ ಅಡಿಪಾಯ ಹಾಕುವುದು ಅಣ್ಣ ಬಸವಣ್ಣನವರ ಕನಸು. ಈ ನಿಟ್ಟಿನಲ್ಲಿ ದೇಶದ ನೆಚ್ಚಿನ ಪ್ರಧಾನಿ ನರೇಂದ್ರ ಮೋದಿ ಹೆಜ್ಜೆಯಿಟ್ಟಿದ್ದಾರೆ ಎಂದು ಬಿ.ವೈ.ವಿಜಯೇಂದ್ರ ನೆನಪಿಸಿದರು.

    ವಿಶ್ವದ ಯಾವುದೇ ದೇಶಕ್ಕೆ ಹೋಗಲಿ ಪ್ರಜಾತಾಂತ್ರಿಕ ಮೌಲ್ಯ, ಸಮಾನತೆ ತತ್ವಗಳ ಕೊಡುಗೆ ವಿಶ್ವಕ್ಕೆ ನೀಡಿದವರು ಬಸವೇಶ್ವರ ಎಂದು ಮೋದಿ ಸಾರುತ್ತಾರೆ. ಹಾಗೆಯೇ ವಚನ ಉಲ್ಲೇಖಿಸಿ ಅದರ ಸಾರವನ್ನು ತಿಳಿಸಿ, ಬಸವೇಶ್ವರ ತತ್ವಾದರ್ಶಗಳನ್ನು ಜಗತ್ತಿಗೆ ವಿವರಿಸುತ್ತಾರೆ ಎಂದರು.

    ಹನ್ನೆರಡನೇ ಶತಮಾನದಲ್ಲಿ ಬಸವಣ್ಣನವರು ಸಾಮಾಜಿಕ ನ್ಯಾಯಕ್ಕೆ ಹೋರಾಡಿದರು. ಕಟ್ಟಕಡೆಯ ವ್ಯಕ್ತಿ ಬದುಕು ಹಸನು, ಮಾನವೀಯಮೌಲ್ಯಗಳ ಮಹತ್ವವನ್ನು ಮನವರಿಕೆ ಮಾಡಿಕೊಟ್ಟರು ಎಂದು ಬಿ.ವೈ.ವಿಜಯೇಂದ್ರ ಕೊಂಡಾಡಿದರು.

    ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಡಿ.ಲಕ್ಷ್ಮಿನಾರಾಯಣ, ಬಿಜೆಪಿ ಬೆಂಗಳೂರು ಉತ್ತರ ಜಿಲ್ಲಾ ಅಧ್ಯಕ್ಷ ಎಸ್.ಹರೀಶ್, ರಾಜ್ಯ ಪದಾಧಿಕಾರಿಗಳು, ಮುಖಂಡರು ಹಾಗೂ ಕಾರ್ಯಕರ್ತರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts