More

    ಬಸವಣ್ಣನ ಸಪ್ತಸೂತ್ರ ನಮಗೆಲ್ಲ ದಾರಿದೀಪ: ನಿವೃತ್ತ ಪ್ರಾಂಶುಪಾಲೆ ಪೊ›.ಅಮರಕಲಾ ಹಿರೇಮಠ್ ಅಭಿಮತ

    ದಾವಣಗೆರೆ: ಹನ್ನೆರಡನೇ ಶತಮಾನದ ಬಸವಣ್ಣನವರ ಸಪ್ತ ಸೂತ್ರಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ನಿವೃತ್ತ ಪ್ರಾಂಶುಪಾಲೆ ಪೊ›.ಅಮರಕಲಾ ಹಿರೇಮಠ್ ಆಶಿಸಿದರು.

    ನಗರದ ಲೇಬರ್ ಕಾಲನಿಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಮಹಾಮನೆ ಕಾರ್ಯ ಕ್ರಮದಲ್ಲಿ ಮಾತನಾಡಿದ ಅವರು, ಇಷ್ಟಲಿಂಗದ ಮೂಲಕ ಅಂತರಂಗದ ಚಿತ್​ಕಳೆ ನೀಡಿದ ಬಸವಣ್ಣನವರ ನಡೆ, ನುಡಿ ಒಂದಾಗಿತ್ತು ಎಂದು ತಿಳಿಸಿದರು.

    ನಾನೆಂಬ ಅಹಂಕಾರ ಹಾಗೂ ಮತ್ಸರ ಭಾವನೆಯಿಂದ ಮನುಷ್ಯ ಹೊರ ಬರಬೇಕು. ಕಳಬೇಡ , ಕೊಲಬೇಡ, ಹುಸಿಯ ನುಡಿಯಲು ಬೇಡ ಎಂಬ ಸಪ್ತ ಸೂತ್ರಗಳನ್ನು ಅಳವಡಿಸಿಕೊಂಡು ಪ್ರಾಮಾಣಿಕ ಜೀವನ ನಡೆಸಬೇಕು ಎಂದರು.

    ಬಸವ ಬಳಗದ ಅಧ್ಯಕ್ಷ ಹುಚ್ಚಪ್ಪ ಮೇಷ್ಟ್ರು ಅಧ್ಯಕ್ಷತೆ ವಹಿಸಿ ಮಾತನಾಡಿ, ಬಸವಣ್ಣನವರ ಅನುಭವ ಮಂಟಪದ ಕಲ್ಪನೆಯಂತೆ ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಹೊಸ ಸಂಸತ್ ಭವನ ನಿರ್ವಿುಸಿ ಸಪ್ತಸೂತ್ರಗಳನ್ನು ಗೋಡೆಯ ಮೇಲೆ ಬರೆಸಿರುವುದು ಶ್ಲಾಘನೀಯ ಎಂದು ಹೇಳಿದರು.

    ವಕೀಲ ಅಶೋಕ ಬಣಕಾರ್ ಮಾತನಾಡಿ, ಶುದ್ಧ ಕಾಯಕದಲ್ಲಿ ನಾವೆಲ್ಲರೂ ಭಾಗಿಯಾಗಬೇಕು ಅಂದಾಗ ಮನಸ್ಸು ಪ್ರಫುಲ್ಲವಾಗಿರುತ್ತದೆ ಎಂದರು.

    ಭುವನೇಶ್ವರಿ ತಾಯಿ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನಿಕಟಪೂರ್ವ ಅಧ್ಯಕ್ಷ ವೀರಪ್ಪ ಎಂ ಭಾವಿ, ಶ್ರೀ ಅನ್ನದಾನೀಶ್ವರ ಮಠದ ಉಪಾಧ್ಯಕ್ಷ ಅಮರಯ್ಯ ಗುರುವಿನ ಮಠ, ಪ್ರಧಾನ ಕಾರ್ಯದರ್ಶಿ ಅಡಿವೆಪ್ಪ ಇದ್ದರು.

    ವೇದಾ ಹಾಗೂ ಶಿವಲೀಲಾ ಬಸವ ಧ್ವಜಾರೋಹಣ ನೆರವೇರಿಸಿದರು. ವೀಣಾ ಮಂಜುನಾಥ್ ಸ್ವಾಗತಿಸಿದರು. ನಾಗೂರು ಅಡಿವೆಪ್ಪ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts